600 ರೂಪಾಯಿ ಇಲ್ಲದೆ ಕ್ರಿಕೆಟ್ ಕನಸು ಕೈಬಿಟ್ಟ ಇರ್ಫಾನ್ ಅದ್ಭುತ ನಟನಾಗಿದ್ದೇ ರೋಚಕ!

Suvarna News   | Asianet News
Published : Apr 29, 2020, 03:35 PM ISTUpdated : Apr 29, 2020, 03:37 PM IST
600 ರೂಪಾಯಿ ಇಲ್ಲದೆ ಕ್ರಿಕೆಟ್ ಕನಸು ಕೈಬಿಟ್ಟ ಇರ್ಫಾನ್ ಅದ್ಭುತ ನಟನಾಗಿದ್ದೇ ರೋಚಕ!

ಸಾರಾಂಶ

ಬಾಲಿವುಡ್ ಅದ್ಭುತ ನಟ ಎಂದೇ ಗುರುತಿಸಿಕೊಂಡಿರು ಇರ್ಫಾನ್ ಖಾನ್ ದಿಢೀರ್ ನಿಧನದ ಸುದ್ದಿ ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಇರ್ಫಾನ್ ಅಭಿಮಾನಿಗಳ ಮನದಲ್ಲಿ ಬೇರೂರಿದ್ದರು. ಆದರೆ ಇರ್ಫಾನ್ ಎರಡನೇ ಆಯ್ಕೆ ಸಿನಿಮಾ ಆಗಿತ್ತು. ಮೊದಲ ಆಯ್ಕೆ ಕ್ರಿಕೆಟ್. ಅಂದು ಇರ್ಫಾನ್ ಬಳಿಕ 600 ರೂಪಾಯಿ ಇರುತ್ತಿದ್ದರೆ, ಬಹುಷಃ ಟೀಂ ಇಂಡಿಯಾದ ಶ್ರೇಷ್ಠ ಆಲ್ರೌಂಡರ್ ಅನ್ನೋ ಖ್ಯಾತಿಗೆ ಪಾತ್ರರಾಗುತ್ತಿದ್ದರು. ಇರ್ಫಾನ್ ಕ್ರಿಕೆಟ್ ಹಾಗೂ ಸಿನಿಮಾ ಪಯಣದ ಕುರಿತ ವಿವರ ಇಲ್ಲಿದೆ.

ಮುಂಬೈ(ಏ.29):  ಇರ್ಫಾನ್ ಖಾನ್ ಪ್ರತಿಯೊಂದು ಪಾತ್ರಕ್ಕೂ ಶೇಕಡಾ 100 ರಷ್ಟು ಪರಿಶ್ರಮ ಹಾಕುತ್ತಾರೆ. ಪಾತ್ರದಲ್ಲಿ ತಲ್ಲೀನರಾಗುತ್ತಾರೆ. ಹೀಗಾಗಿಯೇ ಇರ್ಫಾನ್ ಖಾನ್ ಬಾಲಿವುಡ್‌ನ ಅದ್ಭುತ ನಟ ಅನ್ನೋ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇರ್ಫಾನ್ ಬಾಲ್ಯದಲ್ಲಿ ತಾನು ಟೀಂ ಇಂಡಿಯಾ ಕ್ರಿಕೆಟರ್ ಆಗಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಬಾಲಕ. ಕೇವಲ ಕನಸು ಮಾತ್ರವಲ್ಲ ಅದನ್ನು ನನಸು ಮಾಡಲು ಹೊರಟಿದ್ದರು. ಆದರೆ ಕ್ರಿಕೆಟ್ ಪಯಣದಲ್ಲಿ ಎದುರಾದ ಆರ್ಥಿಕ ಸಂಕಷ್ಟದಿಂದ ಇರ್ಫಾನ್ ತಮ್ಮ ಕ್ರಿಕೆಟ್ ಕನಸಿಗೆ ಫುಲ್ ಸ್ಟಾಪ್ ಇಟ್ಟರು.

ನೆಚ್ಚಿನ ಕಾರು ಬಳಸುವ ಮೊದಲೇ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್!..

ಜೈಪುರದಲ್ಲಿ ಗಲ್ಲಿ ಕ್ರಿಕೆಟ್ ಆಡುತ್ತಿದ್ದ ಇರ್ಫಾನ್ ತಮ್ಮ 16ರ ವಯಸ್ಸಿನಲ್ಲೇ ಕ್ರಿಕೆಟಿನಾಗಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದರು. ಇದಕ್ಕಾಗಿ ಪ್ರತಿ ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು. 20ರ ವಯಸ್ಸಿಗೆ ಲೆದರ್ ಬಾಲ್ ಕ್ರಿಕೆಟ್‌ನಲ್ಲೂ ಯಶಸ್ಸು ಸಾಧಿಸಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನದ ಮೂಲಕ ಅಲ್ರೌಂಡರ್ ಪಟ್ಟ ಗಿಟ್ಟಿಸಿಕೊಂಡಿದ್ದರು.  ಈ ವೇಳೆ ಸಿ.ಕೆ. ನಾಯ್ದು ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದ ಇರ್ಫಾನ್ ಖಾನ್‌ಗೆ 600 ರೂಪಾಯಿ ಅವಶ್ಯಕತೆ ಇತ್ತು.

ಆದರೆ ಇಷ್ಟು ದೊಡ್ಡ ಮೊತ್ತವನ್ನು ಯಾರಲ್ಲಿ ಕೇಳುವುದು. ಇಷ್ಟೇ ಅಲ್ಲ 600 ರೂಪಾಯಿ ಇರುವಂತ ಶ್ರೀಮಂತರ ಪರಿಚಯವೂ ಇರ್ಫಾನ್‌ಗೆ ಇರಲಿಲ್ಲ. ಹೀಗಾಗಿ ಇರ್ಫಾನ್ ತಮ್ಮ ಕ್ರಿಕೆಟ್ ಕನಸು ಕೈಬಿಟ್ಟರು. ಹಣ ಹೊಂದಿಸಲು ಸಾಧ್ಯವಾಗದೇ ಸಿ.ಕೆ.ನಾಯ್ದು ಟೂರ್ನಿ ಆಡದೇ ನಿರಾಸೆಗೊಂಡರು. ವಯಸ್ಸು 23 ಆಗಿದೆ. ಈ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಬೇಕಿತ್ತು ಅನ್ನೋದು ಇರ್ಫಾನ್ ಮಾತಾಗಿತ್ತು. ಆದರೆ ಹಣವಿಲ್ಲದ ಕಾರಣ ಸಾಧ್ಯವಾಗಿಲ್ಲ. ಹೀಗಾಗಿ ನಟನಾಗಬೇಕೆಂಬ ಕನಸು ಹೊತ್ತುಕೊಂಡೆ ಎಂದು ಇರ್ಫಾನ್ 2014ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

ನಾನ್ ಹೆಂಡತಿಗೋಸ್ಕರನಾದ್ರೂ ಬದುಕಬೇಕು: ಇರ್ಫಾನ್ ಖಾನ್

ನಟನಾಗಲು ನ್ಯಾಷಲನ್ ಸ್ಕೂಲ್ ಆಫ್ ಡ್ರಾಮ ತೆರಳಿ ಅಭಿನಯ ಕರಗತ ಮಾಡಿಕೊಳ್ಳಲು ನಿರ್ಧರಿಸಿದ್ದರು. ಡ್ರಾಮಾ ಸ್ಕೂಲ್‌ಗೆ 300 ರೂಪಾಯಿ ಫೀಸ್ ನೀಡಬೇಕಿತ್ತು. ಅಣ್ಣನ ಕ್ರಿಕೆಟ್ ಕನಸು ನುಚ್ಚುನೂರಾದ ಮೇಲೆ ಇದೀಗ ನಟನ ಕನಸು ಪುಡಿ ಪುಡಿಯಾಗದಿರಲಿ ಎಂದು ಸಹೋದರಿ 300 ರೂಪಾಯಿ ಹೊಂದಿಸಿ ಇರ್ಫಾನ್‌ಗೆ ನೀಡಿದ್ದರು. ಈ ಹಣದಲ್ಲಿ ಅಭಿನಯ ಕಲಿತ ಇರ್ಫಾನ್ ಬಾಲಿವುಡ್‍ನಲ್ಲೇ ಅದ್ಭುತ ನಟ ಎಂದು ಗುರುತಿಸಿಕೊಂಡರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?