ಮೊದಲ ಸಲ ತಮ್ಮ ವೀಕ್‌ನೆಸ್ ಏನೆಂದು ಬಾಯ್ಬಿಟ್ಟ ವಿರಾಟ್ ಕೊಹ್ಲಿ!

Published : Feb 25, 2025, 12:40 PM ISTUpdated : Feb 25, 2025, 12:51 PM IST
ಮೊದಲ ಸಲ ತಮ್ಮ ವೀಕ್‌ನೆಸ್ ಏನೆಂದು ಬಾಯ್ಬಿಟ್ಟ ವಿರಾಟ್ ಕೊಹ್ಲಿ!

ಸಾರಾಂಶ

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಶತಕ ಗಳಿಸಿದರು. ಕವರ್ ಡ್ರೈವ್ ಶಾಟ್ ದೌರ್ಬಲ್ಯವಾದರೂ, ಅದರಿಂದಲೇ ಹೆಚ್ಚು ರನ್ ಗಳಿಸಿದೆ ಎಂದರು. ಈ ಗೆಲುವಿನಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ತಂಡಕ್ಕೆ ಮಹತ್ವದ್ದಾಗಿದೆ.

ದುಬೈ: ಪಾಕಿಸ್ತಾನದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್
ಕೊಹ್ಲಿ, 'ಕವರ್ ಡ್ರೈವ್ ಶಾಟ್ ನನ್ನ ವೀಕ್‌ನೆಸ್, ಆದರೆ ಆ ಶಾಟ್ ಆಡುವುದರಿಂದ ಇನ್ನಿಂಗ್ಸ್ ಮೇಲೆ ನಿಯಂತ್ರಣ ಸಿಗುತ್ತದೆ. ಅದರಿಂದಲೇ ನಾನು ಹೆಚ್ಚು ರನ್ ಗಳಿಸುತ್ತಿದ್ದೆ' ಎಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ ಅಜೇಯ ಶತಕದ ಬಗ್ಗೆ ಕೊಹ್ಲಿ ಮಾತನಾಡಿದ್ದು, 'ಕ್ಯಾಚ್-22 ಅಂದರೆ ಕವರ್ ಡ್ರೈವ್ ನನ್ನ ದೌರ್ಬಲ್ಯವೂ ಆಗಿತ್ತು. ಆದರೆ ನಾನು ಈ ಶಾಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದೇನೆ. ನಾನು ಪಡೆದ ಮೊದಲ ಎರಡು ಬೌಂಡರಿಗಳು ಕವರ್ ಡ್ರೈವ್‌ಗಳಾಗಿದ್ದವು. ಇದು ನನಗೆ ವೈಯಕ್ತಿಕವಾಗಿ ಉತ್ತಮ ಇನ್ನಿಂಗ್ಸ್ ಆಗಿತ್ತು. ಇದು ತಂಡದ ಅತ್ಯುತ್ತಮ ಪ್ರದರ್ಶನಕ್ಕೆ ಸಿಕ್ಕ ಗೆಲುವು' ಎಂದರು.

ಬಾರ್ಡರ್‌-ಗವಾಸ್ಕರ್ ಟ್ರೋಫಿ ಹಾಗೂ ಇಂಗ್ಲೆಂಡ್ ಎದುರಿನ ಸೀಮಿತ ಓವರ್‌ಗಳ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್‌ ಕಟ್ಟಲು ವಿಫಲರಾಗಿದ್ದ ವಿರಾಟ್ ಕೊಹ್ಲಿ, ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಅಜೇಯ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಅದರಲ್ಲೂ ಪಾಕಿಸ್ತಾನ ಎದುರು ದಿಟ್ಟ ಹೋರಾಟ ತೋರುತ್ತಾ ಬಂದಿರುವ ವಿರಾಟ್ ಕೊಹ್ಲಿ, ಹಳೆ ವೈಫಲ್ಯ ಮರೆತು ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. ಇದು ರೋಹಿತ್ ಶರ್ಮಾ ಪಡೆಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಇದನ್ನೂ ಓದಿ: ತಂಡ ಸೋಲುತ್ತಿರುವಾಗ ನಿನಗೆ ಈ ಹುಚ್ಚಾಟ ಬೇಕಿತ್ತಾ? ಪಾಕ್ ಬೌಲರ್‌ಗೆ ತಪರಾಕಿ ಕೊಟ್ಟ ವಾಸೀಂ ಅಕ್ರಂ!

ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿರುವ ಟೀಂ ಇಂಡಿಯಾ, ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಕಾದಾಡಲಿವೆ. ಉಭಯ ತಂಡಗಳು ಟೂರ್ನಿಯಲ್ಲಿ ತಲಾ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಅಜೇಯವಾಗುಳಿದಿವೆ. ಸೆಮಿಫೈನಲ್‌ಗೂ ಮುನ್ನ ಕೊಹ್ಲಿ ಬ್ಯಾಟಿಂಗ್ ಲಯಕ್ಕೆ ಮರಳಿರುವುದು ಭಾರತ ತಂಡದ ಪಾಲಿಗೆ ಮಹತ್ವದ ಬೆಳವಣಿಗೆ ಎನಿಸಿಕೊಂಡಿದೆ. 

ಪಾಕ್‌ ಸೋತರೂ ಕೊಹ್ಲಿ ಶತಕಕ್ಕೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ!

ದುಬೈ: ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್‌ ಕೊಹ್ಲಿಯ ಬಗ್ಗೆ ಕ್ರೇಜ್‌ ವಿಶ್ವದೆಲ್ಲೆಡೆ ಹೆಚ್ಚುತ್ತಲೇ ಇದೆ. ಅದು ಪಾಕಿಸ್ತಾನ ವಿರುದ್ಧದ ಚಾಂಪಿಯನ್ಸ್‌ ಟ್ರೋಫಿ ಪಂದ್ಯದ ವೇಳೆ ಮತ್ತೆ ಸಾಬೀತಾಗಿದೆ.

ಪಂದ್ಯದಲ್ಲಿ ಪಾಕಿಸ್ತಾನ ಸೋತರೂ, ಕೊಹ್ಲಿ ಶತಕ ಪೂರ್ಣಗೊಳಿಸಿದ್ದಕ್ಕೆ ಪಾಕಿಸ್ತಾನದಲ್ಲಿ ಹಲವು ಅಭಿಮಾನಿಗಳು ಸಂಭ್ರಮಿಸುತ್ತಿರುವ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇನ್ನು, ದುಬೈ ಕ್ರೀಡಾಂಗಣಕ್ಕೆ ಆಗಮಿಸುತ್ತಿರುವ ಪಾಕಿಸ್ತಾನದ ಅಭಿಮಾನಿಯೋರ್ವರು ತಮ್ಮ ಹಸಿರು ಬಣ್ಣದ ಜೆರ್ಸಿ ಮೇಲೆ ಕೊಹ್ಲಿಯ ಹೆಸರು, ಜೆರ್ಸಿ ಸಂಖ್ಯೆ 18ನ್ನು ಮುದ್ರಿಸಿದ್ದರು. ಇದರ ಫೋಟೋ, ವಿಡಿಯೋ ಕೂಡಾ ಹರಿದಾಡುತ್ತಿದೆ.

ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಸೆಮಿಗೆ: ಪಾಕ್‌, ಬಾಂಗ್ಲಾ ಒಟ್ಟಿಗೇ ಮನೆಗೆ!

ಅತಿ ಹೆಚ್ಚು ಕ್ಯಾಚ್‌: ಕೊಹ್ಲಿ ಈಗ ಭಾರತದ ನಂಬರ್‌ 1

ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ಗರಿಷ್ಠ ಕ್ಯಾಚ್‌ ಪಡೆದ ಆಟಗಾರರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ ಈಗ ನಂ.1 ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ವಿರಾಟ್‌ 2 ಕ್ಯಾಚ್‌ ಪಡೆದರು. ಈ ಮೂಲಕ ಏಕದಿನದಲ್ಲಿ ಕ್ಯಾಚ್‌ ಸಂಖ್ಯೆಯನ್ನು 158ಕ್ಕೆ ಹೆಚ್ಚಿಸಿದರು. ಅವರು ಈ ಪಟ್ಟಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್‌ರನ್ನು ಹಿಂದಿಕ್ಕಿದರು. 

ಮೊಹಮ್ಮದ್ ಅಜರುದ್ದೀನ್‌ 332 ಇನ್ನಿಂಗ್ಸ್‌ಗಳಲ್ಲಿ 156 ಕ್ಯಾಚ್‌ ಪಡೆದಿದ್ದಾರೆ. ವಿಶ್ವದಲ್ಲಿ ಗರಿಷ್ಠ ಕ್ಯಾಚ್‌ ಪಡೆದ ಆಟಗಾರ ಎಂಬ ದಾಖಲೆ ಶ್ರೀಲಂಕಾದ ಜಯವರ್ಧನೆ ಹೆಸರಲ್ಲಿದೆ. ಅವರು 218 ಕ್ಯಾಚ್‌ ಪಡೆದಿದ್ದು, ಆಸ್ಟ್ರೇಲಿಯಾ ರಿಕಿ ಪಾಂಟಿಂಗ್‌ (160 ಕ್ಯಾಚ್‌) 2ನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕೊಹ್ಲಿಗೆ 3ನೇ ಸ್ಥಾನ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Ind vs SA: ಶುಭ್‌ಮನ್ ಗಿಲ್ ಫುಲ್ ಫಿಟ್; ಈ ಡೇಟ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಫಿಕ್ಸ್!
ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!