2022 ರ ಟಿ 20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಭಾರತವನ್ನು ಕೆಟ್ಟ ಪರಿಸ್ಥಿತಿಯಿಂದ ಕಾಪಾಡಿದ್ದ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದರು. ಇದೇ ಹಾದಿಯಲ್ಲಿ ವಿರಾಟ್ ಕೊಹ್ಲಿ, ಪಾಕ್ ವೇಗಿ ಹ್ಯಾರಿಸ್ ರೌಫ್‌ಗೆ ಆಕರ್ಷಕ ಸಿಕ್ಸರ್ ಸಿಡಿಸಿದ್ದರು.
ನವದೆಹಲಿ (ನ.7): ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತವರಿನಲ್ಲಿಯೇ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇತ್ತೀಚೆಗಷ್ಟೇ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 49ನೇ ಶತಕ ಪೂರೈಸಿರುವ ಕಿಂಗ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿಗೆ ಐಸಿಸಿ ಮಹಾನ್ ಗೌರವ ನೀಡಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ವೇಳೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಬಾರಿಸಿದ ಸಿಕ್ಸರ್‌ಅನ್ನು ಐಸಿಸಿ ಶತಮಾನದ ಶಾಟ್ ಎನ್ನುವ ಗೌರವ ನೀಡಿದೆ. ಶೇನ್ ವಾರ್ನ್ ರ ಎಸೆತವನ್ನು ಬಾಲ್ ಆಫ್ ದ ಸೆಂಚುರಿ ಎಂದು ಹೆಸರಿಸಿದಂತೆ, ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್‌ಅನ್ನು ಶಾಟ್ ಆಫ್ ದ ಸೆಂಚುರಿ ಎಂದು ಹೆಸರಿಸಿದೆ.
"ಐಸಿಸಿ ಟೂರ್ನಮೆಂಟ್‌ಗಳಲ್ಲಿ ವಿರಾಟ್ ಕೊಹ್ಲಿ ಅವರ ಟಾಪ್ 10 ಕ್ಷಣಗಳನ್ನು ಹಿಂತಿರುಗಿ ನೋಡುವುದರೊಂದಿಗೆ ಅವರ ಜನ್ಮದಿನವನ್ನು ಆಚರಿಸಿ" ಎಂದು ಐಸಿಸಿ ಬರೆದಿದ್ದು, ಕ್ರೀಡೆಯ ಜಾಗತಿಕ ಸಂಸ್ಥೆಯು ಕೊಹ್ಲಿಯ ವಿಶೇಷ ದೃಶ್ಯಗಳ ಸಂಯೋಜನೆಯನ್ನು ಹಂಚಿಕೊಂಡಿದೆ. ಇದು ಐಸಿಸಿ ಈವೆಂಟ್‌ಗಳಲ್ಲಿ ಸಿಕ್ಸರ್‌ಗಳು, ಸಂಭ್ರಮಗಳು ಮತ್ತು ಆ 'ಸ್ಪಿರಿಟ್ ಆಫ್ ಕ್ರಿಕೆಟ್ ಮೊಮೆಂಟ್' ಸೇರಿದಂತೆ ಕೆಲವು ಅಪ್ರತಿಮ ಕ್ಷಣಗಳನ್ನು ಒಳಗೊಂಡಿತ್ತು.
ನನ್ನ ದಾಖಲೆ ಕೊಹ್ಲಿ-ರೋಹಿತ್ ಮುರಿಯುತ್ತಾರೆ; 2012ರಲ್ಲೇ ಸಲ್ಮಾನ್ ಖಾನ್‌ಗೆ ಭವಿಷ್ಯ ನುಡಿದಿದ್ದ ಸಚಿನ್!
2022 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದು, ಇದನ್ನು ಐಸಿಸಿ 'ಶತಮಾನದ ಶ್ರೇಷ್ಠ ಶಾಟ್' ಎಂದು ಶ್ಲಾಘಿಸಿದೆ.
1988ರ ನವೆಂಬರ್ 5 ರಂದು ಜನಿಸಿದ ಕೊಹ್ಲಿ, ಈಗಾಗಲೇ ಕ್ರಿಕೆಟ್‌ನ ಶ್ರೇಷ್ಠರಲ್ಲಿ ಒಬ್ಬರು. ಪ್ರಸಿದ್ಧ ಕ್ರಿಕೆಟ್ ವೃತ್ತಿಜೀವನದಲ್ಲಿ, ಭಾರತದ ಮಾಜಿ ನಾಯಕ 79 ಶತಕಗಳೊಂದಿಗೆ 26209 ಅಂತರರಾಷ್ಟ್ರೀಯ ರನ್‌ಗಳನ್ನು (111 ಟೆಸ್ಟ್‌ಗಳಲ್ಲಿ 8676, 288 ODIಗಳಲ್ಲಿ 13525 ಮತ್ತು 115 T20I ಗಳಲ್ಲಿ 4008) ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಗೆಲುವನ್ನು ಸಂಭ್ರಮಿಸಿದ ನವ ದಂಪತಿ: ಮದುವೆ ವೇದಿಕೆಯಲ್ಲಿ ಡಬಲ್ ಸಂಭ್ರಮ!