Karma Returns ಮ್ಯಾಥ್ಯೂಸ್‌ರನ್ನು ಟೈಮ್ಡ್‌ ಔಟ್‌ ಮಾಡಿದ್ದ ಶಕೀಬ್‌ ಈಗ ಟೂರ್ನಿಯಿಂದಲೇ ಔಟ್‌!

By Santosh NaikFirst Published Nov 7, 2023, 6:06 PM IST
Highlights

ಕಳೆದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಅನುಭವಿ ಆಲ್ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌ರನ್ನು ಟೈಮ್ಡ್‌ ಔಟ್‌ ಮಾಡಿ ವಿವಾದಕ್ಕೆ ಕಾರಣರಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಈಗ ಗಾಯದ ಕಾರಣದಿಂದಾಗಿ ವಿಶ್ವಕಪ್‌ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
 

ಮುಂಬೈ (ನ.7): ಶ್ರೀಲಂಕಾ ತಂಡದ ಅನುಭವಿ ಆಲ್ರೌಂಡರ್‌ ಏಂಜೆಲೋ ಮ್ಯಾಥ್ಯೂಸ್‌ ಅವರನ್ನು ಟೈಮ್ಡ್‌ ಔಟ್‌ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ವಿಶ್ವಕಪ್‌ ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ. ಎಡಗೈ ತೋರುಬೆರಳಿನ ಗಾಯಕ್ಕೆ ತುತ್ತಾಗಿರುವ ಶಕೀಬ್‌ ಅಲ್‌ ಹಸನ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ತಿಳಿಸಿದೆ. ನವೆಂಬರ್‌ 6 ರಂದು ಶ್ರೀಲಂಕಾ ವಿರುದ್ಧ ಲೀಗ್‌ ಹಂತದ ತನ್ನ 8ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ನಾಯಕ ಶಕೀಬ್‌ ಅಲ್‌ ಹಸನ್‌ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಅಂತಿಮ ಲೀಗ್‌ ಪಂದ್ಯಕ್ಕೆ ಶಕೀಬ್‌ ಅಲ್‌ ಹಸನ್‌ ಲಭ್ಯರಿಲ್ಲ. ಶಕೀಬ್‌ ಅಲ್ ಹಸನ್‌ ಬದಲಿಗೆ ಅನಾಮುಲ್‌ ಹಕ್‌ ಅವರನ್ನು ಬದಲಿ ಆಟಗಾರರಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದ್ದಉ, ಉಪನಾಯಕ ನಜ್ಮುಲ್‌ ಹುಸೇನ್‌ ಶಾಂಟೋ, ಶಕೀಬ್‌ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ.

ನವೆಂಬರ್ 11 ರಂದು ಪುಣೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯವನ್ನು ಬಾಂಗ್ಲಾದೇಶದ ಆಡಲಿದೆ. ಶ್ರೀಲಂಕಾ ವಿರುದ್ಧ ಪಂದ್ಯದ ಬಳಿಕ ಶಕೀಬ್‌ ಅಲ್‌ ಹಸನ್‌ ಅವರ ಗಾಯದ ಎಕ್ಸ್‌ರೇ ಮಾಡಲಾಗಿದ್ದು, ಇದರಲ್ಲಿ ಮೂಳೆ ಮುರಿತವಾಗಿರುವುದು ಧೃಡಪಟ್ಟಿದೆ.ರಾಷ್ಟ್ರೀಯ ತಂಡದ ಫಿಸಿಯೋ ಬೈಜೆದುಲ್ ಇಸ್ಲಾಂ ಖಾನ್ ಗಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.

"ಶಕೀಬ್ ಅವರ ಇನ್ನಿಂಗ್ಸ್‌ನ ಆರಂಭದಲ್ಲಿ ಅವರ ಎಡ ತೋರು ಬೆರಳಿಗೆ ಬಲವಾದ ಗಾಯವಾಗಿತ್ತು. ಆದರೆ ಬೆಂಬಲ ಟ್ಯಾಪಿಂಗ್ ಮತ್ತು ನೋವು ನಿವಾರಕಗಳೊಂದಿಗೆ ಅವರು ಬ್ಯಾಟಿಂಗ್ ಮುಂದುವರಿಸಿದರು," ಎಂದು ತಿಳಿಸಿದ್ದಾರೆ. ಎಡಭಾಗದ ಪಿಐಪಿ ಜಾಯಿಂಟ್‌ ಮುರಿತವನ್ನು ದೃಢಪಡಿಸಲಾಗಿದೆ. ಅವರು ದೆಹಲಿಯಲ್ಲಿ ತುರ್ತು ಎಕ್ಸ್-ರೇಗೆ ಒಳಗಾಗಿದ್ದರು. ಚೇತರಿಕೆ ಮೂರರಿಂದ ನಾಲ್ಕು ವಾರಗಳಲ್ಲಿ ಅಂದಾಜಿಸಲಾಗಿದೆ. ಅವರು ತಮ್ಮ ಪುನಃಶ್ಚೇತನವನ್ನು  ಪ್ರಾರಂಭಿಸಲು ಇಂದು ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ' ಎಂದು ಮಾಹಿತಿ ನೀಡಿದರು.

ಖಾಸಗಿ ವಿಹಾರ ನೌಕೆಯಲ್ಲಿ ಗರ್ಲ್‌ಫ್ರೆಂಡ್‌ ಜೊತೆ ಕ್ರಿಸ್ಟಿಯಾನೋ ರೊನಾಲ್ಡೊ ಫೋಟೋ ವೈರಲ್‌

ಶಕೀಬ್‌ ಅಲ್‌ ಹಸನ್‌ ಅವರ 65 ಎಸೆತಗಳ 82 ರನ್‌ಗಳ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್‌ಗಳು ಸೇರಿದ್ದವು. ಇದರಿಂದಾಗಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ವಿಶ್ವಕಪ್‌ನಲ್ಲಿ ತನ್ನ ಐತಿಹಾಸಿಕ ಗೆಲುವು ಕಂಡಿತ್ತು.ಬೌಲಿಂಗ್‌ನಲ್ಲಿ 57 ರನ್‌ಗೆ 2 ವಿಕೆಟ್‌ ಉರುಳಿಸಿದ್ದ ಶಕೀಬ್‌ ಅಲ್‌ ಹಸನ್‌ ತಮ್ಮ ಆಲ್ರೌಂಡ್‌ ಸಾಹಸಕ್ಕಾಗಿ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಜಯಿಸಿದ್ದರು.
ಬಾಂಗ್ಲಾದೇಶ ಪರವಾಗಿ 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅನಾಮುಲ್ ಹಕ್‌, ಈವರೆಗೂ 45 ಪಂದ್ಯ ಆಡಿದ್ದಾರೆ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಆಗಿರುವ ಅನಾಮುಲ್‌ ಹಕ್‌ 1258 ರನ್‌ ಬಾರಿಸಿದ್ದಾರೆ. ಇದರಲ್ಲಿ ಮೂರು ಶತಕಗಳು ಸೇರಿದೆ.

ಏಂಜಲೋ ಮ್ಯಾಥ್ಯೂಸ್ ಟೈಮ್ಡ್‌ ಔಟ್ ವಿವಾದ..! ರೂಲ್ಸ್ ಏನು? ಮ್ಯಾಥ್ಯೂಸ್ ಮಾಡಿದ ಎಡವಟ್ಟೇನು?

click me!