ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ತಮಗೂ ಸಿಟ್ಟು ಬರುತ್ತೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಬಗ್ಗೆ ಧೋನಿ ಹೇಳಿದ್ದೇನು ಎನ್ನು ಎಲ್ಲಾ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ನವದೆಹಲಿ(ಅ.17): ನಾನು ಕೂಡ ಎಲ್ಲರಂತೆಯೇ, ನನಗೂ ಕೋಪ ಬರುತ್ತದೆ. ಆದರೆ ಭಾವನೆಗಳ ಮೇಲೆ ಉತ್ತಮ ನಿಯಂತ್ರಣ ಸಾಧಿಸಿದ್ದೇನೆ ಎಂದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧೋನಿ ಮಗಳು ಝಿವಾ ಕನ್ನಡಕ ಕದ್ದರಾ ಈ ಬಾಲಿವುಡ್ ಸ್ಟಾರ್..?
ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಜಾಹೀರಾತು ಕಾರ್ಯಕ್ರಮದಲ್ಲಿ ಧೋನಿ ಕಾಣಿಸಿಕೊಂಡರು ‘ಇತರರಿಗಿಂತ ಹೆಚ್ಚು ಭಾವನೆಗಳ ಮೇಲೆ ನಿಯಂತ್ರಣ ಹೊಂದಿದ್ದೇನೆ. ನನಗೂ ಹತಾಶೆ, ಕೋಪ, ನಿರಾಸೆ ಮೂಡುತ್ತದೆ. ಆದರೆ ಇವುಗಳ್ಯಾವುದೂ ರಚನಾತ್ಮಕ ಭಾವನೆಗಳಲ್ಲ ಎಂಬುದು ಮುಖ್ಯವಾದ ಅಂಶ. ಆ ವೇಳೆ ಭಾವನೆಗಿಂತ ಏನು ಮಾಡಬೇಕೆಂಬ ನಿರ್ಧಾರ ಮುಖ್ಯ. ಮುಂದೇನು ಮಾಡಬೇಕು? ಯಾರನ್ನು ಬಳಸಬಹುದು? ಎಂಬಿತ್ಯಾದಿ ಯೋಚನೆಗಳಿಂದ ಭಾವನೆಗಳನ್ನು ನಿಯಂತ್ರಿಸುತ್ತೇನೆ’ ಎಂದು ಧೋನಿ ತಿಳಿಸಿದರು.
undefined
ಪುಲ್ವಾಮ ಹುತಾತ್ಮರ ಮಕ್ಕಳಿಗೆ ಸೆಹ್ವಾಗ್ ಶಾಲೆಯಲ್ಲಿ ಉಚಿತ ಶಿಕ್ಷಣ
ಅ.24ಕ್ಕೆ ಧೋನಿ ಭವಿಷ್ಯ ನಿರ್ಧಾರ?
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯದ ಕುರಿತು ರಾಷ್ಟ್ರೀಯ ಆಯ್ಕೆಗಾರರ ಬಳಿ ಅ.24ರಂದು ಮಾತನಾಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ತಿಳಿಸಿದರು.
ಟ್ರೋಲಿಗನ ಬಾಯಿ ಮುಚ್ಚಿಸಿದ ಮಿಥಾಲಿ ರಾಜ್..!
ಅ.24ರಂದು ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ತವರಿನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುವುದು. ಅದೇ ದಿನ ಆಯ್ಕೆಗಾರರನ್ನು ಭೇಟಿ ಸಂದರ್ಭ ಈ ವಿಚಾರ ಚರ್ಚಿಸುವುದಾಗಿ ಗಂಗೂಲಿ ಹೇಳಿದ್ದಾರೆ. ಈ ವಿಚಾರದಲ್ಲಿ ಧೋನಿ ಅಭಿಪ್ರಾಯವೂ ಮುಖ್ಯ. ಧೋನಿ ಜೊತೆ ಮಾತನಾಡುವೆ’ ಎಂದು ಗಂಗೂಲಿ ಹೇಳಿದರು.