ಯುವರಾಜ್ ಸಿಂಗ್ ಅವರಂತ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ..! ಟೀಂ ಇಂಡಿಯಾ ಸಮಸ್ಯೆ ಬಿಚ್ಚಿಟ್ಟ ರೋಹಿತ್ ಶರ್ಮಾ

By Naveen Kodase  |  First Published Aug 11, 2023, 12:21 PM IST

ಏಕದಿನ ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗಲೇ ಟೀಂ ಇಂಡಿಯಾ ಸಮಸ್ಯೆ ಬಿಚ್ಚಿಟ್ಟ ನಾಯಕ
ಯುವರಾಜ್ ಸಿಂಗ್ ಅವರಂತಹ ಬ್ಯಾಟರ್ ನಮಗೆ ಸಿಕ್ಕಿಲ್ಲ ಎಂದ ರೋಹಿತ್ ಶರ್ಮಾ
ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿರುವ ಟೀಂ ಇಂಡಿಯಾ


ಮುಂಬೈ(ಆ.11): ಭಾರತ ಏಕದಿನ ತಂಡದಲ್ಲಿ 4ನೇ ಕ್ರಮಾಂಕದ ಸಮಸ್ಯೆ ಮುಂದುವರಿದಿದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ ಎಂದು ನಾಯಕ ರೋಹಿತ್‌ ಶರ್ಮಾ ಒಪ್ಪಿಕೊಂಡಿದ್ದಾರೆ. ಏಷ್ಯಾಕಪ್‌, ವಿಶ್ವಕಪ್‌ಗೂ ಮುನ್ನ ರೋಹಿತ್‌ರ ಈ ಹೇಳಿಕೆ ಅಚ್ಚರಿ ಮೂಡಿಸಿದೆ. ನಮಗೆ ಯುವರಾಜ್ ಸಿಂಗ್ ಬಳಿಕ 4ನೇ ಕ್ರಮಾಂಕದಲ್ಲಿ ಅಂತಹ ಮತ್ತೊಬ್ಬ ಬ್ಯಾಟರ್ ನಮಗೆ ಸಿಕ್ಕಿಲ್ಲ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಹೇಳಿದ್ದಾರೆ.

ಗುರುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರೋಹಿತ್‌ರನ್ನು ಸುದ್ದಿಗಾರರು ಎರಡು ಮಹತ್ವದ ಟೂರ್ನಿಗಳಿಗೆ ತಂಡದ ಸಿದ್ಧತೆ ಬಗ್ಗೆ ಪ್ರಶ್ನಿಸಿದಾಗ, ರೋಹಿತ್‌ 4ನೇ ಕ್ರಮಾಂಕದ ಸಮಸ್ಯೆ ಬಗ್ಗೆ ಮಾತನಾಡಿದರು. ‘ಯುವರಾಜ್‌ ಸಿಂಗ್‌ ಬಳಿಕ ಯಾರಿಗೂ 4ನೇ ಕ್ರಮಾಂಕದಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಧ್ಯವಾಗಿಲ್ಲ. ಶ್ರೇಯಸ್‌ ಅಯ್ಯರ್ ಈ ಸ್ಥಾನದಲ್ಲಿ ಉತ್ತಮ ಆಟವಾಡಿದರೂ, ಗಾಯದ ಸಮಸ್ಯೆಗಳು ಅವರನ್ನು ಬಹುವಾಗಿ ಕಾಡಿವೆ. ಕಳೆದ 4-5 ವರ್ಷಗಳಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿ ಬಾರಿಯೂ 4ನೇ ಕ್ರಮಾಂಕಕ್ಕೆ ಹೊಸ ಆಟಗಾರನನ್ನು ಹುಡುಕಬೇಕಾಗುತ್ತಿದೆ’ ಎಂದು ರೋಹಿತ್‌ ಹತಾಶೆಯಿಂದ ನುಡಿದಿದ್ದಾರೆ.

Latest Videos

undefined

ಮಹಾರಾಜ ಟಿ20 ಟ್ರೋಫಿ: ಕರ್ನಾಟಕ ಕ್ರಿಕೆಟ್‌ನಲ್ಲಿ ಕನ್ನಡಕ್ಕಿಲ್ಲ ಬೆಲೆ, ಕೆಎಸ್‌ಸಿಎ ಆವರಣದಲ್ಲೇ ಕನ್ನಡದ ಕಗ್ಗೊಲೆ!

2019ರ ಏಕದಿನ ವಿಶ್ವಕಪ್ ಬಳಿಕ ಟೀಂ ಇಂಡಿಯಾ ಪರ 11 ಬ್ಯಾಟರ್‌ಗಳು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಪೈಕಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಮಾತ್ರ 10ಕ್ಕಿಂತ ಹೆಚ್ಚು ಬಾರಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದಾರೆ. ಇನ್ನು ಅಪಘಾತದ ಬಳಿಕ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ 2023ರ ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನ ಎನಿಸಿದೆ. ಇನ್ನು ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಶ್ರೇಯಸ್‌ ಅಯ್ಯರ್, ಏಕದಿನ ವಿಶ್ವಕಪ್‌ಗೂ ಮುನ್ನ ಸಂಪೂರ್ಣ ಫಿಟ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 

"ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದು ನಾಲ್ಕು ತಿಂಗಳುಗಳೇ ಕಳೆದಿವೆ. ದೊಡ್ಡ ಗಾಯದ ಸಮಸ್ಯೆ, ಸರ್ಜರಿಗಳು ಆಗಿವೆ. ಇಬ್ಬರು ಆಟಗಾರರು ಸರ್ಜರಿಗೆ ಒಳಗಾಗಿದ್ದಾರೆ. ನಾನೂ ಒಮ್ಮೆ ಸರ್ಜರಿ ಮಾಡಿಸಿಕೊಂಡಿದ್ದೇನೆ. ಸರ್ಜರಿ ಆದ ಬಳಿಕ ಯಾವ ರೀತಿಯಲ್ಲಿ ಅನುಭವವಾಗುತ್ತದೆ, ಎಷ್ಟು ಕಷ್ಟವಾಗುತ್ತದೆ ಎನ್ನುವುದು ನನಗೂ ಗೊತ್ತಿದೆ. ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. 

ಒನ್​ಡೇಯಲ್ಲಿ ಸೂರ್ಯಕುಮಾರ್‌ನನ್ನ ನಂಬುವ ಹಾಗಿಲ್ಲ. ಏಷ್ಯಾಕಪ್​ಗೆ ಶ್ರೇಯಸ್ ಅಯ್ಯರ್‌ ಫಿಟ್ ಆಗೋದು ಅನುಮಾನ. ಹೀಗಾಗಿ ತಿಲಕ್​​ ವರ್ಮಾಗೆ ಒನ್​ಡೇಯಲ್ಲೂ ಸ್ಥಾನ ಸಿಗುವ ಸಾಧ್ಯತೆ ಇದೆ. ಎಡಗೈ ಬ್ಯಾಟರ್​​ ಮಿಡಲ್ ಆರ್ಡರ್​​ನಲ್ಲಿ ಆಡಿದ್ರೆ ತಂಡದ ಬ್ಯಾಟಿಂಗ್​​ ಸ್ಟ್ರಾಂಗ್ ಆಗಲಿದೆ. ಹೀಗಾಗಿ ಏಷ್ಯಾಕಪ್ ಟೂರ್ನಿಯಲ್ಲೂ ತಿಲಕ್‌ ವರ್ಮಾಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಟೀಂ ಇಂಡಿಯಾ ಅಲ್ಲವೇ ಅಲ್ಲ..! ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್‌..!

ಏಷ್ಯಾಕಪ್‌ಗೆ ಸದ್ಯದಲ್ಲೇ ತಂಡದ ಆಯ್ಕೆಯಾಗಲಿದೆ ಎಂದಿರುವ ರೋಹಿತ್‌, ವಿಶ್ವಕಪ್‌ ಗೆಲ್ಲಲು ತಂಡ ಹಪಹಪಿಸುತ್ತಿದೆ. ಈ ಬಾರಿ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸವಿದೆ ಎಂದಿದ್ದಾರೆ. ಏಷ್ಯಾಕಪ್‌ ಟೂರ್ನಿಗೆ ತನ್ನನ್ನು ಸೇರಿದಂತೆ ಯಾರೊಬ್ಬರು ಆಟೋಮ್ಯಾಟಿಕ್ ಆಯ್ಕೆಯಾಗುವುದಿಲ್ಲ ಎನ್ನುವುದನ್ನು ಹಿಟ್‌ಮ್ಯಾನ್ ಸ್ಪಷ್ಟಪಡಿಸಿದ್ದಾರೆ.

ಏಷ್ಯಾಕಪ್ ಸರಣಿಗೆ ಸಾಕಷ್ಟು ಹೆಸರುಗಳು ನಮ್ಮ ಮುಂದಿವೆ. ವಿಶ್ವಕಪ್ ಟೂರ್ನಿಗೂ ಮುನ್ನ ಯಾವುದು ಸರಿಯಾದ ಸಂಯೋಜನೆಯೋ ಆ ಸಂಯೋಜನೆಯೊಂದಿಗೆ ನಾವು ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತೇವೆ. ನಾವು ಈ ಬಾರಿ ಗೆಲ್ಲಲು ಪ್ರಯತ್ನಿಸುತ್ತೇವೆ. ಅದೇ ರೀತಿ, ಇದೇ ಸಂದರ್ಭದಲ್ಲಿ ನಾವು ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಆದರೆ ಈ ಏಷ್ಯಾಕಪ್ ಟೂರ್ನಿಯಲ್ಲಿ ಗುಣಮಟ್ಟದ ತಂಡಗಳ ಎದುರು ಒತ್ತಡದ ಪರಿಸ್ಥಿತಿಯಲ್ಲಿ ಬ್ಯಾಟರ್‌ಗಳು ಯಾವ ರೀತಿ ಆಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

click me!