ಈ ಫೋಟೋ ನೀಡಿ ನೀವು ಇದು ವಿರಾಟ್ ಕೊಹ್ಲಿ ಅಂದುಕೊಳ್ಳಬಹುದು. ಆದರೆ, ಇದು ವಿರಾಟ್ ಕೊಹ್ಲಿಯಲ್ಲ. ಹರಿಯಾಣದ ಸಾಫ್ಟ್‌ವೇರ್ ಇಂಜಿನಿಯರ್ ಕಾರ್ತಿಕ್ ಶರ್ಮ.
ನವದೆಹಲಿ (ಜು.24): ವಿರಾಟ್ ಕೊಹ್ಲಿ ಜಗತ್ತಿನಲ್ಲಿ ತಮ್ಮ ಅಪೂರ್ವ ಕ್ರಿಕೆಟ್ ಕೌಶಲದಿಂದ ಮಾತ್ರವಲ್ಲ, ಅದ್ಭುತ ಡ್ರೆಸ್ ಸೆನ್ಸ್ ಹಾಗೂ ಯಾವುದೇ ಕಾರ್ಯಕ್ರಮಕ್ಕೂ ಆಕರ್ಷಕ ರೀತಿಯಲ್ಲಿ ಕಾಣುವ ಮೂಲಕ ಗಮನಸೆಳೆಯುತ್ತಾರೆ. ಇದರಿಂದಾಗಿ ವಿರಾಟ್ ಕೊಹ್ಲಿಯಂತೆ ಕಾಣಿಸಿಕೊಳ್ಳಲು ಅವರಂತೆ ಹೇರ್‌ಸ್ಟೈಲ್, ಗಡ್ಡವನ್ನು ಕೊಹ್ಲಿ ರೀತಿಯಲ್ಲೇ ಮಾಡೋದು ಕಾಣುತ್ತೇವೆ. ಆದರೆ, ಹರಿಯಾಣದ ನಿವಾಸಿಯಾಗಿರುವ ಕಾರ್ತಿಕ್ ಶರ್ಮಾ, ವಿರಾಟ್ ಕೊಹ್ಲಿ ರೀತಿ ಸ್ಟೈಲ್ ಮಾಡಿರೋದು ಮಾತ್ರವಲ್ಲ ಹೆಚ್ಚೂಕಡಿಮೆ ಅವರು ವಿರಾಟ್ ಕೊಹ್ಲಿಯ ತದ್ರೂಪಿ ಎನ್ನುವಷ್ಟು ಸಾಮ್ಯತೆ ಹೊಂದಿದ್ದಾರೆ. ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯ ಶೇ. 80ರಷ್ಟು ಸಾಮ್ಯತೆಯನ್ನು ಕಾರ್ತಿಕ್ ಶರ್ಮ ಹೊಂದಿದ್ದಾರೆ ಅನ್ನೋದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋಗಳಿಂದ ಸ್ಪಷ್ಟವಾಗಿ ಹೇಳಬಹುದು. ಜನರಿಗೆ ಅಚ್ಚರಿ ಎನಿಸುವಷ್ಟು ಕೊಹ್ಲಿ ರೀತಿಯ ಹೋಲಿಕೆಯಿಂದಾಗಿ ಶರ್ಮಾ ಸಾಮಾಜಿಕ ಮಾಧ್ಯಮದ ಸೆಲೆಬ್ರಿಟಿಯಾಗಿದ್ದಾರೆ. ಅವರಿಗೆ ಖ್ಯಾತಿ ತಂದುಕೊಟ್ಟ ವೀಡಿಯೋ ಇಲ್ಲಿದೆ.
ಜಗತ್ತಿನಲ್ಲಿ ಒಬ್ಬರಂತೆ ಏಳು ಮಂದಿ ಇರ್ತಾರೆ ಅನ್ನೋದು ಜನಪ್ರಿಯ ಮಾತು. ಆದರೆ, ಜನಪ್ರಿಯ ವ್ಯಕ್ತಿಗಳ ತದ್ರೂಪಿ ಅಥವಾ ಅವರಂತೆ ಇರುವ ಇನ್ನೊಬ್ಬ ವ್ಯಕ್ತಿಯನ್ನು ಕಂಡಾಗ ಅಚ್ಚರಿ ಆಗೋದು ನಿಶ್ಚಿತ. ಎಲಾನ್ ಮಸ್ಕ್‌ರಿಂದ ರಜನಿಕಾಂತ್‌ರವರೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚೂ ಕಡಿಮೆ ಅದೇ ರೀತಿ ಇರುವ ಇನ್ನೊಬ್ಬ ವ್ಯಕ್ತಿ ಜನಪ್ರಿಯರೆನಿಸಿಕೊಂಡಿದ್ದಾರೆ. ಆದರೆ, ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯಂತೇ ಇರುವ ಕಾರ್ತಿಕ್ ಶರ್ಮ ಹೆಚ್ಚಿನ ಮಟ್ಟದಲ್ಲಿ ಕೊಹ್ಲಿಯಂತೆ ಹೋಲುತ್ತಾರೆ.
ಕಾರ್ತಿಕ್ ಶರ್ಮ, ಹರಿಯಾಣ ಮೂಲದ ಸಾಫ್ಟ್‌ವೇರ್ ಇಂಜಿನಿಯರ್. ವಿರಾಟ್ ಕೊಹ್ಲಿಯಂತೇ ಇರುವ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಅವರು ಜನಪ್ರಿಯರಾಗಿದ್ದಾರೆ. ಇವರ ಕುರಿತಾಗಿ ಸಾಕಷ್ಟು ಲೇಖನಗಳೂ ಬಂದಿದ್ದು, ಜನರು ತಮ್ಮನ್ನು ವಿರಾಟ್ ಕೊಹ್ಲಿ ಎಂದು ಹೇಗೆ ತಪ್ಪಾಗಿ ಭಾವಿಸುತ್ಥಾರರೆ ಎನ್ನುವ ಬಗ್ಗೆ ಅವರು ತಿಳಿಸಿದ್ದಾರೆ.
ಅದರೊಂದಿಗೆ ಜೀವನದಲ್ಲಿ ಒಮ್ಮೆಯಾದರೂ ವಿರಾಟ್ ಕೊಹ್ಲಿಯನ್ನು ಭೇಟಿಯಾದೋದು ತಮ್ಮ ಕನಸು ಎಂದು ಕಾರ್ತಿಕ್ ಶರ್ಮ ಹೇಳಿದ್ದು, ಭೇಟಿಯಾದ ವೇಳೆ ತಾವು ಅವರ ಅತಿದೊಡ್ಡ ಫ್ಯಾನ್ ಎಂದು ತಿಳಿಸುವುದಾಗಿ ಹೇಳಿದ್ದಾರೆ.
'ನೀವೆಲ್ಲಾ ಏನು ಯೋಚನೆ ಮಾಡ್ತೀದ್ದೀರಿ ಅನ್ನೋದು ಗೊತ್ತು. ಬಟ್ ನಾನು ಅವನಲ್ಲ. ನಾನು ವಿರಾಟ್ ಕೊಹ್ಲಿಯಲ್ಲ. ನಾನು ಕಾರ್ತಿಕ್ ಶರ್ಮ. ಹರಿಯಾಣ ಮೂಲದ ಸಾಫ್ಟ್‌ವೇರ್ ಇಂಜಿನಿಯರ್. ನಾನು ಎಲ್ಲಿಯೇ ಹೋದಲು ಜನರು ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಯಸುತ್ತಾರೆ. ಆದರೆ, ಕ್ರಿಕೆಟ್‌ನಿಂದ ನಾನು ನನ್ನ ಕೆರಿಯರ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಕ್ರಿಕೆಟ್ ನನ್ನ ಪ್ಯಾಷನ್ ಅನ್ನೋದು ನಿಜ. ವಿರಾಟ್ ಕೊಹ್ಲಿ ನನ್ನ ಆದರ್ಶ. ಬಹುಶಃ ಮುಂದೊಂದು ದಿನ, ನಾನು ನನ್ನ ಕನಸನ್ನು ನಿಜ ಮಾಡಿಕೊಳ್ಳಲು ಸಾಧ್ಯವಾಗಬಹುದು. ಕೊಹ್ಲಿಯನ್ನು ಮೀಟ್ ಆಗಬಹುದು' ಎಂದು ವೈರಲ್ ವಿಡಿಯೋದಲ್ಲಿನ ಚಿತ್ರಗಳಲ್ಲಿ ಕ್ಯಾಪ್ಶನ್‌ಗಳಲ್ಲಿ ಕಾರ್ತಿಕ್ ಶರ್ಮ ಬರೆದುಕೊಂಡಿದ್ದಾರೆ.
500ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ 76ನೇ ಶತಕ..! ಹೃದಯ ಗೆದ್ದ ಅನುಷ್ಕಾ ಶರ್ಮಾ ಪೋಸ್ಟ್..!
ಇನ್ನು ವಿಡಿಯೋದಲ್ಲಿ ಸಾಕಷ್ಟು ಪ್ರದೇಶಗಳಲ್ಲಿ ಅವರನ್ನು ವಿರಾಟ್ ಕೊಹ್ಲಿಯೆಂದು ಭಾವಿಸಿದ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುವುದನ್ನು ಬಿತ್ತರಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕೊಹ್ಲಿ ಹಾಗೂ ಕಾರ್ತಿಕ್ ಶರ್ಮ ನಡುವೆ ಹೆಚ್ಚಿನ ವ್ಯತ್ಯಾಸ ಕಾಣಿಸೋದೇ ಇಲ್ಲ ಎಂದಿದ್ದರೆ. ಇನ್ನೊಂದೆಡೆ, ಕೆಲವರು ದೆಹಲಿಯಲ್ಲಿ ಪ್ರತಿ ಮೂವರಲ್ಲಿ ಒಬ್ಬ ವ್ಯಕ್ತಿ ವಿರಾಟ್ ಕೊಹ್ಲಿಯಂತೆ ಕಾಣುತ್ತಾನೆ ಎಂದು ಹೇಳಿದ್ದರೆ, ಕೆಲವರು ನನ್ನ ಆಫೀಸ್‌ನಲ್ಲಿಯೇ ಮೂರು ಜನ ಕೊಹ್ಲಿಯಂತೆಯೇ ಇರುವವರು ಇದ್ದಾರೆ ಎಂದು ಕಾಮೆಂಟ್ ಮಾಡುವ ಮೂಲಕ ಇದೇನು ದೊಡ್ಡ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋಚ್ ರಾಹುಲ್ ದ್ರಾವಿಡ್ ಜತೆ ವಿರಾಟ್ ಕೊಹ್ಲಿ ವಿಶೇಷ ಪೋಸ್ಟ್..! ಆ ದಿನಗಳನ್ನು ನೆನಪಿಸಿಕೊಂಡ ವಿರಾಟ್..!