ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಿಸಿದ ಹರ್ಷಾ ಬೋಗ್ಲೆ, ಹೊಸ ಮುಖಕ್ಕೆ ಅವಕಾಶ!

By Suvarna NewsFirst Published Jul 31, 2021, 8:13 PM IST
Highlights
  • ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಬಲಿಷ್ಠ ತಂಡ ಪ್ರಕಟಿಸಿದ ಬೋಗ್ಲೆ
  • ಇಬ್ಬರು ಸ್ಪಿನ್ನರ್‌ಗೆ ಸ್ಥಾನ, ಕೆಲ ಹೊಸ ಮುಖಗಳಿಗೆ ಅವಕಾಶ
  • ಅಕ್ಟೋಬರ್ 17 ರಿಂದ ನವೆಂಬರ್ 14ರ ವರೆಗೆ ನಡೆಯಲಿದೆ ಟೂರ್ನಿ

ಮುಂಬೈ(ಜು.31):  ಕ್ರಿಕೆಟ್ ಮೈದಾನದಲ್ಲಿನ ಮುಂದಿನ ಅತೀ ದೊಡ್ಡ ಟೂರ್ನಿ ಟಿ20 ವಿಶ್ವಕಪ್. ಅಕ್ಟೋಬರ್ 17 ರಿಂದ ನವೆಂಬರ್ 14ರ ವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಟೂರ್ನಿಗೆ ಟೀಂ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ತಯಾರಿ ನಡೆಸುತ್ತಿದೆ. ಇದೀಗ ಟಿ20 ವಿಶ್ವಕಪ್ ಟೂರ್ನಿ ಪ್ರತಿನಿದಿಸುವ ಟೀಂ ಇಂಡಿಯಾ ಆಟಗಾರರು ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಇದರ ನಡುವೆ ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ ತಮ್ಮ ಕನಸಿನ ಟೀಂ ಇಂಡಿಯಾ ಪ್ರಕಟಿಸಿದ್ದಾರೆ.

Ind vs SL ಕನ್ನಡಿಗ ಸೇರಿ ಇಬ್ಬರಿಗೆ ಕೋವಿಡ್‌ ದೃಢ; ಶ್ರೀಲಂಕಾದಲ್ಲೇ ಐಸೋಲೇಷನ್‌

ಟಿ20 ವಿಶ್ವಕಪ್ ಟೂ್ರ್ನಿಗೆ ಇನ್ನು 3 ತಿಂಗಳು ಮಾತ್ರ ಬಾಕಿ ಇದೆ. ಹೊಸ ಮುಖಗಳಿಗೆ ಅವಕಾಶ ನೀಡಿರುವ ಬೋಗ್ಲೆ, ಇಬ್ಬರು ಸ್ಪಿನ್ನರ್‌ಗೆ ಸ್ಥಾನ ನೀಡಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿ ಪ್ರದರ್ಶನ ಆಧರಿಸಿ ಬೋಗ್ಲೆ ಕೆಲ ಆಟಗಾರನ್ನು ತಮ್ಮ ಕನಸಿನ ತಂಡದಲ್ಲಿ ಸೇರಿಸಿದ್ದಾರೆ.

ಹರ್ಷಾ ಬೋಗ್ಲೆ ಪ್ರಕಟಿಸಿದ ಟೀಂ ಇಂಡಿಯಾ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್/ಇಶಾನ್ ಕಿಶನ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ, ವಾಶಿಂಗ್ಟನ್ ಸುಂದರ್, ರವಿಂದ್ರ ಜಡೇಜಾ, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ/ ಟಿ ನಟರಾಜನ್, ಯಜುವೇಂದ್ರ ಚಹಾಲ್

IPLಗೂ ಮುನ್ನ ಡ್ಯಾಶಿಂಗ್ ಲುಕ್‌ನಲ್ಲಿ ಕಂಗೊಳಿಸಿದ ಎಂಎಸ್‌ ಧೋನಿ

ಬೋಗ್ಲೆ ಪ್ರಕಟಿಸಿದ ತಂಡದಲ್ಲಿ ಶಿಖರ್ ಧವನ್‌ಗೆ ಅವಕಾಶ ನೀಡಿಲ್ಲ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಧವನ್ ಬದಲು ಕೆಎಲ್ ರಾಹುಲ್‌ಗೆ ಅವಕಾಶ ನೀಡಿದ್ದಾರೆ. ಬೌಲಿಂಗ್ ವಿಭಾಗದಲ್ಲೂ ಹಿರಿಯರು ಹಾಗೂ ಕಿರಿಯರಿಗೆ ಅವಕಾಶ ನೀಡಿ ಬ್ಯಾಲೆನ್ಸ್ ಮಾಡಿದ್ದಾರೆ.  ಬೋಗ್ಲೆ ತಂಡದಲ್ಲಿ ಕುಲ್ದೀಪ್ ಯಾದವ್‌ಗೆ ಅವಕಾಶ ನೀಡಿಲ್ಲ. ಕುಲ್ದೀಪ್ ಬದಲು, ವರುಣ್ ಚಕ್ರವರ್ತಿಗೆ ಅವಕಾಶ ನೀಡಿದ್ದಾರೆ. 

ಇತ್ತ ಬಿಸಿಸಿಐ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಆಟಗಾರರ ಆಯ್ಕೆಗೆ ಸದ್ದಿಲ್ಲದೆ ಕಸರತ್ತು ಆರಂಭಿಸಿದೆ. ಶೀಘ್ರದಲ್ಲೇ ಸಂಭವನೀಯ 30 ಮಂದಿ ಹೆಸರನ್ನು ಬಿಸಿಸಿಐ ಪ್ರಕಟಿಸಲಿದೆ. 

ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು; ಟಿ20 ಸರಣಿ ಶ್ರೀಲಂಕಾ ಪಾಲು!

ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಕೊರೋನಾ ಕಾರಣ ದುಬೈಗೆ ಸ್ಥಳಾಂತರಿಸಲಾಗಿದೆ.  ಈ ಬಾರಿ ಟಿ20 ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಐಸಿಸಿ ಪ್ರಶಸ್ತಿ ಕೊರಗನ್ನು ನೀಗಿಸಲು ತಯಾರಿ ನಡೆಸಿದೆ.

click me!