ಗುಜರಾತ್ ಟೈಟಾನ್ಸ್‌ಗೆ ಬರ್ತೇನೆ ಆದ್ರೆ ಒಂದು ಕಂಡೀಷನ್ ಎಂದ ಹಾರ್ದಿಕ್ ಪಾಂಡ್ಯ..! ಮಾಜಿ ನಾಯಕನ ಆ ಬೇಡಿಕೆ ರಿಜೆಕ್ಟ್‌ ಮಾಡಿದ ಗುಜರಾತ್ ಫ್ರಾಂಚೈಸಿ

Published : Aug 12, 2026, 03:07 PM IST
Hardik Pandya

ಸಾರಾಂಶ

2026ರ ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ತೊರೆಯಲು ಸಿದ್ಧವಾಗಿರುವ ಹಾರ್ದಿಕ್ ಪಾಂಡ್ಯ, ನಾಯಕತ್ವದ ಷರತ್ತಿನೊಂದಿಗೆ ತಮ್ಮ ಹಳೆಯ ತಂಡ ಗುಜರಾತ್ ಟೈಟಾನ್ಸ್‌ಗೆ ಮರಳಲು ಯತ್ನಿಸಿದ್ದರು. ಆದರೆ, ಶುಭ್‌ಮನ್ ಗಿಲ್ ನಾಯಕತ್ವದ ಮೇಲೆ ವಿಶ್ವಾಸವಿಟ್ಟಿರುವ ಗುಜರಾತ್ ಫ್ರಾಂಚೈಸಿ, ಪಾಂಡ್ಯರ ಬೇಡಿಕೆಯನ್ನು ತಿರಸ್ಕರಿಸಿದೆ ಎಂದು ವರದಿಯಾಗಿದೆ.

ಬೆಂಗಳೂರು: 2026ರ ಐಪಿಎಲ್ ಟೂರ್ನಿಯ ಬಳಿಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎನ್ನುವ ವಿಚಾರ ಸದ್ಯ ಗುಟ್ಟಾಗಿಯೇನು ಉಳಿದಿಲ್ಲ. ಇತ್ತೀಚಿಗಿನ ದಿನಗಳಲ್ಲಿ ಹಾರ್ದಿಕ್ ಪಾಂಡ್ಯ, ಬೇರೆ ತಂಡಕ್ಕೆ ಟ್ರೇಡ್ ಅಗಲಿದ್ದಾರೆ, ಹಲವು ಫ್ರಾಂಚೈಸಿಗಳು ಈ ಸ್ಟಾರ್ ಆಲ್ರೌಂಡರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲು ಪೈಪೋಟಿ ನಡೆಸುತ್ತಿವೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಸದ್ಯದ ಮಾಧ್ಯಮಗಳ ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಇಲ್ಲವೇ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ. ಆದರೆ ಇದೆಲ್ಲದರ ನಡುವೆ ಹಾರ್ದಿಕ್ ಪಾಂಡ್ಯ ತಾವು ಷರತ್ತಿನ ಮೇರೆಗೆ ಗುಜರಾತ್ ಟೈಟಾನ್ಸ್‌ಗೆ ವಾಪಾಸ್ಸಾಗಲು ಮುಂದಾಗಿದ್ದರು, ಆದ್ರೆ ಗುಜರಾತ್ ಫ್ರಾಂಚೈಸಿ ಪಾಂಡ್ಯ ಆಫರ್ ರಿಜೆಕ್ಟ್ ಮಾಡಿದೆ ಎಂದು ವರದಿಯಾಗಿದೆ.

ಪಾಂಡ್ಯ ಬೇಡಿಕೆಗೆ ಸೊಪ್ಪು ಹಾಕದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ:

ಇಂಡಿಯನ್ ಎಕ್ಸ್‌ಪ್ರೆಸ್ ಮಾಧ್ಯಮ ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ತಂಡವಾಗಿರುವ ಗುಜರಾತ್ ಟೈಟಾನ್ಸ್‌ಗೆ ವಾಪಾಸ್ಸಾಗುವ ಬಗ್ಗೆ ಮಾತುಕತೆ ನಡೆಸಿದ್ದರು. ನಾನು ಗುಜರಾತ್ ಟೈಟಾನ್ಸ್‌ಗೆ ವಾಪಾಸ್ ಬರಬೇಕಿದ್ದರೇ ನನಗೆ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರು. ಆದರೆ ಪಾಂಡ್ಯ ಈ ಬೇಡಿಕೆಯನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಸಾರಾಸಗಟಾಗಿ ತಿರಸ್ಕರಿಸಿದೆ. ಬರುವುದಾದರೇ ಕೇವಲ ಆಟಗಾರನಾಗಿ ಬನ್ನಿ, ನಾಯಕತ್ವದ ನಿರೀಕ್ಷೆಯಿಟ್ಟುಕೊಂಡು ಬರಬೇಡಿ ಎಂದು ಹಾರ್ದಿಕ್ ಪಾಂಡ್ಯಗೆ ಖಡಕ್ಕಾಗಿ ಗುಜರಾತ್ ಫ್ರಾಂಚೈಸಿ ತಿಳಿಸಿದೆ ಎಂದು ವರದಿಯಾಗಿದೆ.

ಶುಭ್‌ಮನ್ ಗಿಲ್ ಮೇಲೆ ವಿಶ್ವಾಸವಿಟ್ಟಿರುವ ಗುಜರಾತ್ ಫ್ರಾಂಚೈಸಿ:

2024ರಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡ ತೊರೆದ ಬಳಿಕ ಶುಭ್‌ಮನ್ ಗಿಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದೀಗ ಗಿಲ್ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಫೈನಲ್ ಪ್ರವೇಶಿಸಿತ್ತು. ಹೀಗಾಗಿ ಗಿಲ್ ಮೇಲೆ ಗುಜರಾತ್ ಫ್ರಾಂಚೈಸಿ ವಿಶ್ವಾಸವಿಟ್ಟಿದೆ.

ಗುಜರಾತ್ ತೊರೆದು ಮುಂಬೈ ಪಾಲಾಗಿದ್ದ ಹಾರ್ದಿಕ್ ಪಾಂಡ್ಯ:

2022ರ ಐಪಿಎಲ್ ಟೂರ್ನಿಗೆ ಗುಜರಾತ್ ಟೈಟಾನ್ಸ್ ಹೊಸದಾಗಿ ಎಂಟ್ರಿಕೊಟ್ಟಿತ್ತು. ಆಗ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮೊದಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಇದಾದ ಮರು ವರ್ಷ ಕೂಡಾ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಫೈನಲ್ ಪ್ರವೇಶಿಸಿತ್ತು. ಇದಾದ ಬಳಿಕ 2024ರಲ್ಲಿ ದಿಢೀರ್ ಎನ್ನುವಂತೆ ಹಾರ್ದಿಕ್ ಪಾಂಡ್ಯ ದಿಢೀರ್ ಎನ್ನುವಂತೆ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದರು. ಆದರೆ ಕಳೆದ ಮೂರು ಸೀಸನ್‌ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಕಳೆದ 19ನೇ ಸೀಸನ್ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಸೋಲು ಅನುಭವಿ 9ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು. ಹೀಗಾಗಿ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡ ತೊರೆಯಲು ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿ, ಆಸೀಸ್ ಮಾಜಿ ಆಲ್ರೌಂಡರ್‌ಗೆ ಖುಲಾಯಿಸಿದ ಅದೃಷ್ಟ; 39ನೇ ವಯಸ್ಸಿಗೆ ಒಲಿದ ಇನ್ನೊಂದು ದೇಶದ ಕ್ಯಾಪ್ಟನ್ ಪಟ್ಟ!
ಭಾರತ ಜೊತೆ ಮತ್ತೆ ಕ್ರಿಕೆಟ್‌ ಆಡಲು ಬಾಂಗ್ಲಾ ಪ್ರಧಾನಿಯಿಂದ ಮಾತುಕತೆ!