ಡಿವೋರ್ಸ್ ಖಚಿತಪಡಿಸಿದ ಹಾರ್ದಿಕ್ ಪಾಂಡ್ಯ ನತಾಶ ಜೋಡಿ, ಫ್ಯಾನ್ಸ್‌ಗೆ ವಿಶೇಷ ಮನವಿ!

By Chethan Kumar  |  First Published Jul 18, 2024, 9:41 PM IST

ಹಾರ್ದಿಕ್ ಪಾಂಡ್ಯ ಹಾಗೂ ನತಾಶ ದೂರವಾಗಿದ್ದಾರೆ ಅನ್ನೋ ಸುದ್ದಿಗಳಿಗೆ ಇದೀಗ ಸ್ವತಃ ಪಾಂಡ್ಯ ಸ್ಪಷ್ಟನೆ ನೀಡಿದ್ದಾರೆ. ಹಾರ್ದಿಕ್ ಹಾಗೂ ನತಾಶ ದೂರವಾಗಿರುವುದಾಗಿ ಖಚಿತಪಡಿಸಿದ್ದಾರೆ.


ಬರೋಡ(ಜು.18) ಟೀಂ ಇಂಡಿಯಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಪತ್ನಿ ನತಾಶ ಸಂಬಂಧ ಬಿರುಕು ಬಿಟ್ಟಿದೆ. ಇಬ್ಬರೂ ಡಿವೋರ್ಸ್ ಪಡೆದಿದ್ದಾರೆ ಅನ್ನೋ ವರದಿಗಳು ಕಳೆದ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ. ಆದರೆ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಇದೀಗ ಸ್ವತಃ ಹಾರ್ದಿಕ್ ಪಾಂಡ್ಯ ನತಾಶ ಜೊತೆಗಿನ ದಾಂಪತ್ಯ ಜೀವನ ಅಂತ್ಯಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆದಿರುವುದಾಗಿ ಪಾಂಡ್ಯ ಖಚಿತಪಡಿಸಿದ್ದಾರೆ.

ಈ ಕರಿತು ತಮ್ಮ ಇನ್‌ಸ್ಟಾಗ್ರಾಂ ಮೂಲಕ ಹಾರ್ದಿಕ್ ಪಾಂಡ್ಯ ಭಾವುಕ ಪೋಸ್ಟ್ ಹಾಕಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನತಾಶ್ ಹಾಗಾ ನಾನು ಜೊತೆಯಾಗಿ ಹೆಜ್ಜೆ ಹಾಕಿದ್ದೇವು. ಆದರೆ ಇದೀಗ ಹಲವು ಕಾರಣಗಳಿಂದ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರ ಸರಿಯುತ್ತಿದ್ದೇವೆ. ನಾವು ಜೊತೆಯಾಗಿರವು ಹಲವು ಪ್ರಯತ್ನ ನಡೆಸಿದ್ದೇವೆ. ಇದೀಗ ಇಬ್ಬರ ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಡಿವೋರ್ಸ್ ನಮಗೆ ಸುಲಭದ ನಿರ್ಧಾರವಾಗಿರಲಿಲ್ಲ. ಜೊತೆಯಾಗಿ ನಾವು ಹಲವು ಸಂತಸದ ಕ್ಷಣಗಳನ್ನು ಕಳೆದಿದ್ದೇವೆ. ಪರಸ್ಪರ ಗೌರವಿಂದ ಕಂಡಿದ್ದೇವೆ. ಉತ್ತಮ ಸಂಗಾತಿಯಾಗಿ ಮುನ್ನಡೆದಿದ್ದೇವೆ. ಒಂದು ಕುಟುಂಬವಾಗಿ ನಾವು ಹೆಜ್ಜೆ ಹಾಕಿದ್ದೇವೆ. ನಮ್ಮಿಬ್ಬರಿಗೆ  ಮಗ ಅಗಸ್ತ್ಯನಿದ್ದಾನೆ. ಆಗಸ್ತ್ಯ ನಮ್ಮಿಬ್ಬರ ಪ್ರಮುಖ ಕೇಂದ್ರಬಿಂದುವಾಗಿ ಮುಂದುವರಿಯುತ್ತಾನೆ. ಆತನಿಗೆ ನಾವಿಬ್ಬರು ಪೋಷಕರಾಗಿದ್ದೇವೆ. ಆತನ ಜವಾಬ್ದಾರಿ ನಮ್ಮಿಬ್ಬರಿಗೂ ಇದೆ. ಆತನ ಖುಷಿ, ಸಂತೋಷಕ್ಕೆ ನಾವು ಎಲ್ಲವನ್ನೂ ಮಾಡುತ್ತೇವೆ. ಈ ಸಂದರ್ಭದಲ್ಲಿ ನಾವು ಎಲ್ಲರಲ್ಲಿ ಕಳಕಳಿಯ ಮನವಿ ಮಾಡುತ್ತೇವೆ. ನಮ್ಮ ಖಾಸಗಿ ಕ್ಷಣಗಳಿಗೆ ಗೌರವ ನೀಡಿ. ಈ ಕಠಿಣ ಸಂದರ್ಭದಲ್ಲಿ ನಮ್ಮನ್ನು ಅರ್ಥ ಮಾಡಿಕೊಂಡು ನಮ್ಮ ಬೆಂಬಲಕ್ಕೆ ನಿಲ್ಲುತ್ತೀರಿ ಎಂದು ಭಾವಿಸುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಪೋಸ್ಟ್ ಮಾಡಿದ್ದಾರೆ.

Latest Videos

undefined

ಡಿವೋರ್ಸ್ ರೂಮರ್ಸ್ ನಡುವೆ ಮಗನೊಂದಿಗೆ ದೇಶ ತೊರೆದ್ರಾ ಹಾರ್ದಿಕ್ ಪಾಂಡ್ಯ ಪತ್ನಿ?

ಹಾರ್ದಿಕ್ ಪಾಂಡ್ಯ ಹಾಗೂ ನತಾಶ್ ಡಿವೋರ್ಸ್ ಪಡೆದಿರುವ ಮಾಹಿತಿ ಮಾಧ್ಯಮಗಳಲ್ಲಿ ಬಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಗೆಲುವಿನ ಬಳಿಕ ಹಾರ್ದಿಕ್ ಪಾಂಡ್ಯ ಭಾವುಕರಾಗಿದ್ದರು. ಕಳದ ಕೆಲ ತಿಂಗಳಿಂದ ಹಲವು ಸವಾಲು ಎದುರಿಸಿದ್ದೇನೆ. ಶಾಂತವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೇವೆ. ಟೀಕೆಗಳು ಕೇಳಿಬಂದಿತ್ತು. ನನ್ನ ಆಟದ ಬಗ್ಗೆ ಆತ್ಮವಿಶ್ವಾಸವಿಟ್ಟು ನನ್ನಿಂದ ಸಾಧ್ಯ ಎಂದು ಆಡಿದ್ದೇನೆ. ಇದಕ್ಕೆ ತಕ್ಕೆ ಗೆಲುವು ಸಿಕ್ಕಿದೆ ಎಂದಿದ್ದರು. 

 

 

ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ತೆರವಾಗಿರುವ ನಾಯಕ ಸ್ಥಾನವನ್ನು ತುಂಬಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಹಾರ್ದಿಕ್ ನಾಯಕತ್ವಕ್ಕೆ ಪರಿಗಣಿಸದೇ ಸೂರ್ಯಕುಮಾರ್ ಯಾದವ್‌ಗೆ ನಾಯಕ ಸ್ಥಾನ ನೀಡಲಾಗಿದೆ. ಅತ್ತ ಟೀಂ ಇಂಡಿಯಾ ತಂಡ ಪ್ರಕಟಿಸುತ್ತಿದ್ದಂತೆ ಇತ್ತ ಡಿವೋರ್ಸ್ ಕುರಿತು ಹಾರ್ದಿಕ್ ಪಾಂಡ್ಯ ಘೋಷಣೆ ಮಾಡಿದ್ದರೆ. 

ವಡೋದರಾದಲ್ಲಿ ಹಾರ್ದಿಕ್‌ಗೆ ಅದ್ಧೂರಿ ಸ್ವಾಗತ, ಮೆರವಣಿಗೆ..! ವಿಡಿಯೋ ವೈರಲ್

click me!