IPL 2027: ಹಾರ್ದಿಕ್ ಪಾಂಡ್ಯ ಟ್ರೇಡ್‌ ಮಾಡಿಕೊಳ್ಳಲು ರೆಡಿಯಾದ 3 ತಂಡಗಳು..! ಯಾರ ಜತೆ ಮುಂಬೈ ಇಂಡಿಯನ್ಸ್‌ ಡೀಲ್?

Published : Oct 21, 2026, 04:03 PM IST
Hardik Pandya

ಸಾರಾಂಶ

2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್ ಆಗುವ ಸಾಧ್ಯತೆಗಳಿದ್ದು, ಮೂರು ಫ್ರಾಂಚೈಸಿಗಳು ಆಸಕ್ತಿ ತೋರಿವೆ. ನವೆಂಬರ್‌ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದ್ದು, ಪಾಂಡ್ಯ ನಿರ್ಗಮಿಸಿದರೆ ರೋಹಿತ್, ಸೂರ್ಯಕುಮಾರ್ ಅಥವಾ ತಿಲಕ್ ವರ್ಮಾ ಮುಂಬೈ ತಂಡದ ನಾಯಕರಾಗುವ ರೇಸ್‌ನಲ್ಲಿದ್ದಾರೆ.

Hardik Pandya IPL 2027 Trade News:

2027ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಹಾರ್ದಿಕ್ ಪಾಂಡ್ಯ ಟ್ರೇಡ್ ಆಗುವುದು ಬಹುತೇಕ ಖಚಿತವಾಗಿದೆ. ಕಳೆದ ಸೀಸನ್ ಐಪಿಎಲ್ ಮುಕ್ತಾಯವಾದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ತಾವು ಮುಂಬೈ ಇಂಡಿಯನ್ಸ್ ತಂಡ ತೊರೆಯುವುದಾಗಿ ಫ್ರಾಂಚೈಸಿ ಬಳಿ ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಎಲ್ಲರ ಮನಸ್ಸಿನಲ್ಲಿ ಮೂಡಿದ ಪ್ರಶ್ನೆಯೆಂದರೇ ಹಾರ್ದಿಕ್ ಪಾಂಡ್ಯ ಟ್ರೇಡ್ ಆಗ್ತಾರೋ ಅಥವಾ ಹರಾಜಿಗೆ ಬರುತ್ತಾರೋ ಎಂದು. ಇದೀಗ ಹಾರ್ದಿಕ್ ಪಾಂಡ್ಯ ಭವಿಷ್ಯದ ಬಗ್ಗೆ ಮಹತ್ವದ ಅಪ್‌ಡೇಟ್ಸ್ ಹೊರಬಿದ್ದಿದ್ದು, ಸ್ಟಾರ್ ಆಲ್ರೌಂಡರ್ ಅವರನ್ನು ಟ್ರೇಡ್ ಮೂಲಕ ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಮೂರು ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿವೆ ಎಂದು ವರದಿಯಾಗಿದೆ. ಇದೀಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಯಾರ ಜತೆ ಡೀಲ್ ಫೈನಲ್ ಮಾಡಲಿದೆ ಎನ್ನುವ ಕುತೂಹಲ ಜೋರಾಗಿದೆ.

ಹಾರ್ದಿಕ್ ಪಾಂಡ್ಯ ಟ್ರೇಡ್‌ ಬಗ್ಗೆ ಮಹತ್ವದ ಅಪ್‌ಡೇಟ್ಸ್:

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮೂಲಕ ಖರೀದಿಸಲು ಮೂರು ಫ್ರಾಂಚೈಸಿಗಳು ಮುಂಬೈ ಇಂಡಿಯನ್ಸ್ ಬಳಿ ಒಲವು ವ್ಯಕ್ತಪಡಿಸಿವೆ. ಮೂರು ತಂಡಗಳು ಈಗಾಗಲೇ ಮುಂಬೈ ಇಂಡಿಯನ್ಸ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿವೆ. ಇದೀಗ ಅಂತಿಮ ನಿರ್ಧಾರವನ್ನು ಮುಂಬೈ ಇಂಡಿಯನ್ಸ್ ತೆಗೆದುಕೊಳ್ಳಬೇಕಿದೆ. ಯಾವ ಫ್ರಾಂಚೈಸಿಯು ಪಾಂಡ್ಯಗೆ ಬದಲಿ ಆಟಗಾರನ ರೂಪದಲ್ಲಿ ತನಗೆ ನೀಡಲಿದೆ, ಅಥವಾ ಎಷ್ಟು ದೊಡ್ಡ ಆಫರ್ ನೀಡಲಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇಲ್ಲದಿದ್ದರೇ ಇನ್ನೊಂದು ಸೀಸನ್ ಪಾಂಡ್ಯ ಅವರನ್ನು ತಮ್ಮ ತಂಡದಲ್ಲೇ ಮುಂದುವರೆಯುವಂತೆ ಮನವೊಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಹಾರ್ದಿಕ್ ಪಾಂಡ್ಯ ಭವಿಷ್ಯ ನಿರ್ಧಾರವಾಗುವುದು ಯಾವಾಗ?

ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮೂರು ಫ್ರಾಂಚೈಸಿಗಳು ಪ್ರಯತ್ನಿಸುತ್ತಿವೆಯಾದರೂ, ಯಾರೂ ಕೂಡಾ ನೇರವಾಗಿ ಆಲ್ರೌಂಡರ್ ಜತೆ ಮಾತುಕತೆ ನಡೆಸಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಒಪ್ಪಿದರಷ್ಟೇ ಟ್ರೇಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಅಂದಹಾಗೆ ಡಿಸೆಂಬರ್ ಮಧ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದ್ದು, ಇದಕ್ಕೂ ಒಂದು ತಿಂಗಳು ಮುಂಚಿತವಾಗಿ ಅಂದರೆ ನವೆಂಬರ್ ಮಧ್ಯ ಭಾಗದಲ್ಲಿ ಎಲ್ಲಾ ತಂಡಗಳು ರೀಟೈನ್ ಅಥವಾ ರಿಲೀಸ್ ಪಟ್ಟಿಯನ್ನು ಅಂತಿಮಗೊಳಿಸಲಿವೆ. ಇದೇ ಸಂದರ್ಭದಲ್ಲಿ ಪಾಂಡ್ಯ ಯಾವ ತಂಡದ ಪಾಲಾಗಲಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಸಿಗಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ನವೆಂಬರ್ ಮೊದಲ ವಾರದಲ್ಲಿಯೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅಂತಿಮ ತೀರ್ಮಾನ ಪ್ರಕಟಿಸಲಿದೆ.

ಹಾರ್ದಿಕ್ ಪಾಂಡ್ಯ ಬಳಿಕ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಯಾರು?

ಹಾರ್ದಿಕ್ ಪಾಂಡ್ಯ ಕಳೆದ ಮೂರು ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಒಂದು ವೇಳೆ ಪಾಂಡ್ಯ ಟ್ರೇಡ್ ಆದರೆ, ಮುಂಬೈ ಇಂಡಿಯನ್ಸ್ ಹೊಸ ನಾಯಕನನ್ನು ನೇಮಿಸಲಿದೆ. ಮತ್ತೆ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ನಾಯಕರಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇನ್ನು ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್ ಕೂಡಾ ರೇಸ್‌ನಲ್ಲಿದ್ದಾರೆ. ಇದೆಲ್ಲದರ ಹೊರತಾಗಿ ಭವಿಷ್ಯದ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಟಿ20 ತಂಡದ ಉಪನಾಯಕ ತಿಲಕ್ ವರ್ಮಾ ಅವರಿಗೆ ಮುಂಬೈ ಫ್ರಾಂಚೈಸಿ ನಾಯಕತ್ವ ಪಟ್ಟ ಕಟ್ಟಲು ಒಲವು ತೋರಿದೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರೆಸ್ಸೆಸ್‌ ಗಣವೇಷ ಧರಿಸಿ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಟೀಮ್‌ ಇಂಡಿಯಾ, RCB ಪ್ಲೇಯರ್‌
IPL 2027 ಹರಾಜಿಗೂ ಮುನ್ನ ಇಬ್ಬರು ಬಿಗ್ ಹಿಟ್ಟರ್‌ಗಳನ್ನು ಕೈಬಿಡಲು ರೆಡಿಯಾದ ಗುಜರಾತ್ ಟೈಟಾನ್ಸ್..! RCB ಗೆ ಬರ್ತಾರಾ ಈ ಗನ್ ಫೀಲ್ಡರ್..?