ಡಿವೋರ್ಸ್ ನಂತ್ರ ಹೊಸ ಹುಡುಗಿ ಹಿಂದೆ ಹಾರ್ದಿಕ್ ಪಾಂಡ್ಯ

Published : Sep 16, 2025, 11:06 AM IST
Hardik Pandya Love

ಸಾರಾಂಶ

Hardik Pandya love :ಕ್ರಿಕೆಟರ್ ಹಾರ್ದಿಕ್ ಪಾಂಡ್ಯಕ್ಕೆ ಮತ್ತೊಮ್ಮೆ ಪ್ರೀತಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋ ನೋಡಿದ ಫ್ಯಾನ್ಸ್ ಹಾರ್ದಿಕ್ ಜೊತೆ ಹೊಸ ಹುಡುಗಿ ಹೆಸರು ಸೇರಿಸ್ತಿದ್ದಾರೆ. ಅವರ್ಯಾರು? 

ಟೀಂ ಇಂಡಿಯಾ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya), ಇತ್ತೀಚಿನ ದಿನಗಳಲ್ಲಿ ಮೈದಾನಕ್ಕಿಂತ ವೈಯಕ್ತಿಕ ವಿಷ್ಯಕ್ಕೆ ಹೆಚ್ಚು ಚರ್ಚೆಯಲ್ಲಿದ್ದಾರೆ. ನತಾಶಾ ಸ್ಟಾಂಕೋವಿಕ್ (Natasha Stankovic) ಜೊತೆ ಡಿವೋರ್ಸ್, ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಬ್ರೇಕ್ ಅಪ್ ನಂತ್ರ ಹಾರ್ದಿಕ್ ಪಾಂಡ್ಯ ಹೆಸ್ರು ಈಗ ಇನ್ನೊಬ್ಬ ಸ್ಟಾರ್ ಜೊತೆ ಥಳುಕು ಹಾಕಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿವೆ. ಅಷ್ಟಕ್ಕೂ ಹಾರ್ದಿಕ್ ಪಾಂಡ್ಯ ಮನಸ್ಸು ಕದ್ದ ಬೆಡಗಿ ಯಾರು, ಅವರು ಏನು ಮಾಡ್ತಿದ್ದಾರೆ ಎಂಬ ಡಿಟೇಲ್ಸ್ ಇಲ್ಲಿದೆ.

ಹೊಸ ಹುಡುಗಿ ಜೊತೆ ಹಾರ್ದಿಕ್ ಪಾಂಡ್ಯ : ಹಾರ್ದಿಕ್ ಮಾಡೆಲ್ ಹಾಗೂ ನಟಿ ಮಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ. ಅದನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಹಾರ್ದಿಕ್ ಹಾಗೂ ಮಹಿಕಾ ಶರ್ಮಾ ಮಧ್ಯೆ ಏನೋ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ.

Asia Cup: ಏಷ್ಯಾಕಪ್ ಪಂದ್ಯ ನಡೀತಿರೋವಾಗ ಪಾಕಿಗಳು ಗೂಗಲ್ ಮಾಡಿದ್ದೇನು?

ಪೋಸ್ಟ್ ನಲ್ಲಿ ಏನಿದೆ? : ಸೋಶಿಯಲ್ ಮೀಡಿಯಾದಲ್ಲಿ ಮಹಿಕಾ ಶರ್ಮಾ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ಹಾರ್ದಿಕ್ ಪಾಂಡ್ಯ ಹಿಂದೆ ನಿಂತಿರೋದನ್ನು ನೋಡ್ಬಹುದು. ಆದ್ರೆ ಮಹಿಕಾ, ಹಾರ್ದಿಕ್ ಪಾಂಡ್ಯರನ್ನು ಬ್ಲರ್ ಮಾಡಿದ್ದಾರೆ. ಇನ್ನೊಂದು ಫೋಟೋದಲ್ಲಿ ಎರಡು ಉಂಗುರವಿದೆ. ಒಂದರ ಮೇಲೆ 33 ಎಂದು ಬರೆಯಲಾಗಿದೆ. ಹಾರ್ದಿಕ್ ಪಾಂಡ್ಯ ಜರ್ಸಿ ನಂಬರ್ 33 ಅನ್ನೋದು ಎಲ್ಲರಿಗೂ ಗೊತ್ತು. ಹಾರ್ದಿಕ್ ಹಾಗೂ ಮಹಿಕಾ ಹಂಚಿಕೊಂಡ ಪ್ರತ್ಯೇಕ ಫೋಟೋದಲ್ಲಿ ಇಬ್ಬರೂ ಒಂದೇ ರೀತಿ ಡ್ರೆಸ್ ಧರಿಸಿದ್ದಾರೆ. ಇಬ್ಬರು ಇನ್ಸ್ಟಾಗ್ರಾಮ್ ನಲ್ಲಿ ಪರಸ್ಪರ ಫಾಲೋ ಮಾಡ್ತಿದ್ದು, ಇದೆಲ್ಲವನ್ನು ನೋಡಿದ ಫ್ಯಾನ್ಸ್, ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ ಅಂತಿದ್ದಾರೆ.

ಹಾರ್ದಿಕ್ ಡೇಟ್ ಮಾಡ್ತಿರುವ ಮಹಿಕಾ ಶರ್ಮಾ ಯಾರು ? : ಮಹಿಕಾ ಶರ್ಮಾ, ಪ್ರಸಿದ್ಧ ಮಾಡೆಲ್. ಅನೇಕ ಪ್ರಸಿದ್ಧ ವಿನ್ಯಾಸಕರ ಉತ್ಪನ್ನಗಳನ್ನು ಪ್ರಚಾರ ಮಾಡಿದ್ದಾರೆ. ಅಷ್ಟಲ್ದೆ ಮ್ಯೂಜಿಕ್ ವಿಡಿಯೋ ಹಾಗೂ ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾಡೆಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಮಹಿಕಾ ಪಡೆದಿದ್ದಾರೆ. ಎಕನಾಮಿಕ್ಸ್ ಹಾಗೂ ಫೈನಾನ್ಸ್ ನಲ್ಲಿ ಪದವಿ ಪಡೆದಿರುವ ಮಹಿಕಾ, ಮಾಡೆಲ್ ಕ್ಷೇತ್ರ ಆಯ್ಕೆ ಮಾಡ್ಕೊಂಡು ಅದ್ರಲ್ಲಿ ಯಶಸ್ವಿಯಾಗಿದ್ದಾರೆ. ಯೋಗ ಶಿಕ್ಷಕರಾಗಿಯೂ ಕೆಲ್ಸ ಮಾಡಿರುವ ಮಹಿಕಾ ಶರ್ಮಾ, 2024ರಲ್ಲಿ ಮೇಕಪ್ ಅಲರ್ಜಿಯಿಂದ ಬಳಲಿದ್ದರು.

ಕೈಕುಲುಕದ ಭಾರತ; ನಾವು ಹೇಳಿದವರನ್ನು ಹೊರ ಹಾಕದಿದ್ದರೆ ಏಷ್ಯಾಕಪ್‌ನಿಂದ ಬಿಟ್ಟು ಹೋಗೋದಾಗಿ ಬೆದರಿಸಿದ ಪಾಕಿಸ್ತಾನ!

ಯುಕೆ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ : ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ಮದುವೆಯಾಗಿದ್ದ ಹಾರ್ದಿಕ್ ಪಾಂಡ್ಯ ಕೆಲ ದಿನಗಳ ಹಿಂದಷ್ಟೆ ವಿಚ್ಛೇದನ ಪಡೆದು, ನತಾಶಾರಿಂದ ದೂರವಾಗಿದ್ದಾರೆ. ನತಾಶಾಗೆ ಡಿವೋರ್ಸ್ ನೀಡ್ತಿದ್ದಂತೆ ಹಾರ್ದಿಕ್ ಹೆಸರು ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಕೇಳಿ ಬಂದಿತ್ತು. ಯುಕೆ ಗಾಯಕಿ ಜಾಸ್ಮಿನ್ ಹಾಗೂ ಹಾರ್ದಿಕ್ ಅನೇಕ ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದ ಜಾಸ್ಮಿನ್, ಟೀಂ ಇಂಡಿಯಾ ಕುಟುಂಬ ಓಡಾಡುವ ಬಸ್ ನಲ್ಲಿಯೂ ಹಾರ್ದಿಕ್ ಜೊತೆ ಕಾಣಿಸಿಕೊಂಡು ಸುದ್ದಿ ಮಾಡಿದ್ರು. ಹಾರ್ದಿಕ್, ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ಡೇಟಿಂಗ್ ಮಾಡ್ತಿದ್ದಾರೆ ಎನ್ನುವ ಸುದ್ದಿ ಜೋರು ಪಡೆದಿತ್ತು. ಆದ್ರೆ ಹಾರ್ದಿಕ್, ಜಾಸ್ಮಿನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಮಧ್ಯೆ ಇಬ್ಬರು ಬ್ರೇಕ್ ಅಪ್ ಮಾಡ್ಕೊಂಡಿದ್ದಾರೆ ಎಂಬ ಸುದ್ದಿ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ