ಬೆಂಗಳೂರಿನಲ್ಲಿ ಹಾರ್ದಿಕ್‌ ಪಾಂಡ್ಯ ಅಭ್ಯಾಸ!

Published : Feb 13, 2020, 10:10 AM IST
ಬೆಂಗಳೂರಿನಲ್ಲಿ ಹಾರ್ದಿಕ್‌ ಪಾಂಡ್ಯ ಅಭ್ಯಾಸ!

ಸಾರಾಂಶ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಜುರಿಗೆ ತುತ್ತಾಗಿ ತಂಡದಿಂದ ಹೊರಬಿದ್ದ ಹಾರ್ದಿಕ್ ಪಾಂಡ್ಯ ಸರಿ ಸುಮಾರು 1 ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದಾರೆ. ಈ ನಡುವೆ ಮಾಡೆಲ್ ನತಾಶ ಸ್ಟಾಂಕೋವಿಚ್ ಜೊತೆ ನಿಶ್ಚಿತಾರ್ಥ್ ಮಾಡಿಕೊಂಡಿರುವ ಪಾಂಡ್ಯ ಇದೀಗ ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. 

ಬೆಂಗಳೂರು(ಫೆ.13): ಭಾರತದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ, ಬೆನ್ನಿನ ಕೆಳಭಾಗದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ನಲ್ಲಿ ಬುಧವಾರದಿಂದ ಅಭ್ಯಾಸ ಆರಂಭಿಸಿದ್ದಾರೆ. ನೆಟ್ಸ್‌ನಲ್ಲಿ ಕೆಲ ಕಾಲ ಬ್ಯಾಟಿಂಗ್‌ ಮಾಡಿದ ಪಾಂಡ್ಯ, ಫಿಸಿಯೋ ಜತೆ ಚರ್ಚೆ ನಡೆಸಿದರು. 

ಇದನ್ನೂ ಓದಿ: ಪಾಂಡ್ಯ ನಿಶ್ಚಿತಾರ್ಥದ ಬಗ್ಗೆ ತಂದೆಗೇ ಗೊತ್ತಿರಲಿಲ್ಲ!.

ಮುಂದಿನ ತಿಂಗಳು ನಡೆಯಲಿರುವ ದಕ್ಷಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರು ತಂಡಕ್ಕೆ ವಾಪಸಾಗುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಐಪಿಎಲ್‌ನಲ್ಲಿ ಆಡುವ ಮೂಲಕ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆಯಲು ಪಾಂಡ್ಯ ಕಾತರಿಸುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಂಡ್ಯ, ಆ ಬಳಿಕ ತಂಡದಿಂದ ಹೊರಗುಳಿದಿದ್ದಾರೆ. 

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾ- ನತಾಶಾ ಎಂಗೇಜ್‌ಮೆಂಟ್‌, ಸಖತ್ ಡಿಫರೆಂಟ್!

ಇತ್ತೀಚೆಗಷ್ಟೆಲಂಡನ್‌ಗೆ ತೆರಳಿ ವೈದ್ಯ ಜೇಮ್ಸ್‌ ಆಲಿಬೋನ್‌ರನ್ನು ಸಂಪರ್ಕಿಸಿದ್ದ ಹಾರ್ದಿಕ್‌ ಅವರ ಸಲಹೆ ಮೇರೆಗೆ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಆಡದಿರಲು ನಿರ್ಧರಿಸಿದರು. ಕಳೆದ ತಿಂಗಳು ಮುಂಬೈನಲ್ಲಿ ನಡೆದಿದ್ದ ಫಿಟ್ನೆಸ್‌ ಪರೀಕ್ಷೆಯಲ್ಲಿ ಹಾರ್ದಿಕ್‌ ಅನುತ್ತೀರ್ಣರಾಗಿದ್ದರು ಎಂದು ವರದಿಯಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳಾ ಏಷ್ಯಾಕಪ್‌ ಟಿ20: ಇಂದು ಭಾರತ ಎದುರು ಪಾಕಿಸ್ತಾನಕ್ಕೆ ಡು ಆರ್ ಡೈ ಮ್ಯಾಚ್! ಎಷ್ಟು ಗಂಟೆಗೆ ಆರಂಭ? ನೇರ ಪ್ರಸಾರ ಎಲ್ಲಿ?
Cricket: ಹಿಟ್‌ಮ್ಯಾನ್ ಅಸಲಿ ವೈರಿ ಯಾರು? ಟೀಂ ಇಂಡಿಯಾದಲ್ಲಿ ನಡೀತಿರೋ ಈ ಕಳಪೆ ಗೇಮ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!