ಟೀಂ ಇಂಡಿಯಾ ಐಸಿಸಿ ಟಿ20 ವಿಶ್ವಕಪ್ ತಂಡದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ, ತಮ್ಮ ತವರಿಗೆ ಬಂದಿಳಿದಾಗ ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಡೋದರಾ(ಗುಜರಾತ್): ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಸೋಮವಾರ ತಮ್ಮ ತವರೂರು ವಡೋದರಾಕ್ಕೆ ಆಗಮಿಸಿದ್ದು, ಈ ವೇಳೆ ಅವರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ‘ಹಾರ್ದಿಕ್ ಪಾಂಡ್ಯ. ವಡೋದರಾದ ಹೆಮ್ಮೆ’ ಎಂಬ ಬ್ಯಾನರ್ ಅಳವಡಿಸಲಾಗಿದ್ದ ತೆರೆದ ಬಸ್‌ನಲ್ಲಿ ಹಾರ್ದಿಕ್‌ರನ್ನು ಮೆರವಣಿಗೆ ನಡೆಸಲಾಯಿತು.
ಈ ವೇಳೆ ನೆರೆದಿದ್ದ ಅಪಾರ ಪ್ರಮಾಣದ ಅಭಿಮಾನಿಗಳು ತ್ರಿವರ್ಣ ಧ್ವಜ ಪ್ರದರ್ಶಿಸಿ, ಹಾರ್ದಿಕ್‌ಗೆ ಜೈಕಾರ ಕೂಗಿದರು. ಹಾರ್ದಿಕ್ ಸಹೋದರ ಕೃನಾಲ್ ಪಾಂಡ್ಯ ಕೂಡಾ ಬಸ್‌ನಲ್ಲಿದ್ದರು. ಕೆಲವು ವರದಿಗಳ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ಸ್ವಾಗತಿಸಲು ಸುಮಾರು ಮೂರು ಲಕ್ಷ ಮಂದಿ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
undefined
ಮೂರು ಲಕ್ಷ ಮಂದಿ ಎಂದರೆ ವಡೋದರಾದ ಒಟ್ಟು ಜನಸಂಖ್ಯೆಯ 10% ಅಂದರೇ ಲೆಕ್ಕಾಹಾಕಿ. ಇನ್ನು ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಟೀಂ ಇಂಡಿಯಾ ಪಾಂಡ್ಯ ಎಲ್ಲರತ್ತ ಕೈಬೀಸಿ ಧನ್ಯವಾದಗಳನ್ನು ಅರ್ಪಿಸಿದರು.
ಪಾಕ್ ನಿದ್ದೆ ಕೆಡಿಸಿದ ಯುವಿ, ರೈನಾ, ಬಜ್ಜಿ; ಸೋಲಿನಿಂದ ಮೊದಲೇ ಕಂಗೆಟ್ಟಿವೆ ಸಾಕ್ ಬಿಡಿ ಎಂದ ಫ್ಯಾನ್ಸ್
ಹೀಗಿತ್ತು ನೋಡಿ ವಿಡಿಯೋ:
ಜೇಮ್ಸ್ ಆ್ಯಂಡರ್‌ಸನ್ ಬದಲು ಇಂಗ್ಲೆಂಡ್ ತಂಡಕ್ಕೆ ವುಡ್
ಲಂಡನ್: ವೆಸ್ಟ್‌ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯ ಇನ್ನುಳಿದ ಪಂದ್ಯಗಳಿಗೆ ಇಂಗ್ಲೆಂಡ್ ತಂಡಕ್ಕೆ ಮಾರ್ಕ್ ವುಡ್ ಸೇರ್ಪಡೆಗೊಂಡಿದ್ದಾರೆ. ದಿಗ್ಗಜ ವೇಗಿ ಜೇಮ್ಸ್ ಆ್ಯಂಡರ್‌ಸನ್ ಮೊದಲ ಪಂದ್ಯದ ಬಳಿಕ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ವುಡ್‌ರನ್ನು ಸೇರಿಸಲಾಗಿದೆ. ಗುರುವಾರದಿಂದ ಉಭಯ ತಂಡಗಳ ನಡುವಿನ 2ನೇ ಪಂದ್ಯ ನಾಟಿಂಗ್‌ಹ್ಯಾಮ್‌ನಲ್ಲಿ ಜುಲೈ 18ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಹಾಗೂ 114 ರನ್ ಗೆಲುವು ಸಾಧಿಸಿತ್ತು.
ICC ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರ ಮಾಡಿದ್ರೆ ಭಾರತಕ್ಕೆ ಬರಲ್ಲ: ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ
ಆಸೀಸ್ ಪ್ರವಾಸ: ಭಾರತ ‘ಎ’ ತಂಡದಲ್ಲಿ ರಾಜ್ಯದ ಶುಭಾ
ಮುಂಬೈ: ಮುಂದಿನ ತಿಂಗಳು ಭಾರತ ‘ಎ’ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 18 ಸದಸ್ಯೆಯರ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕದ ಶುಭಾ ಸತೀಶ್ ಸ್ಥಾನ ಪಡೆದಿದ್ದಾರೆ. ಮಿನ್ನು ಮಣಿ ಭಾರತ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ. 3 ಟಿ20, 3 ಏಕದಿನ ಹಾಗೂ ಒಂದು ನಾಲ್ಕು ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ. ಆ.7, 9, 11ಕ್ಕೆ ಟಿ20, ಆ.14, 16 ಹಾಗೂ 18ರಂದು ಏಕದಿನ ಪಂದ್ಯಗಳು ನಡೆಯಲಿವೆ. ಆ.22ರಿಂದ 4 ದಿನಗಳ ಟೆಸ್ಟ್ ಆರಂಭಗೊಳ್ಳಲಿದೆ.
ಆ.7ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ವಿರುದ್ಧದ ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗೆ ಭಾರತ ‘ಎ’ ತಂಡ ಪ್ರಕಟಿಸಲಾಗಿದ್ದು, ಮಿನ್ನು ಮಾನಿ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕದ ಶುಭಾ ಸತೀಶ್ ಕೂಡಾ ತಂಡದಲ್ಲಿದ್ದಾರೆ. ಸಜನಾ ಸಜೀವನ್, ಉಮಾ ಚೆಟ್ರಿ, ಪ್ರಿಯಾ ಪೂನಿಯಾ, ಮೇಘನಾ ಸಿಂಗ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸರಣಿಯ 3 ಟಿ20 ಪಂದ್ಯಗಳು ಆ.7, 9 ಹಾಗೂ 11ಕ್ಕೆ ನಿಗದಿಯಾಗಿದ್ದು, ಆ.14, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ನಡೆಯಲಿವೆ. 4 ದಿನಗಳ ಟೆಸ್ಟ್ ಪಂದ್ಯ ಆ.22ರಿಂದ ಆರಂಭಗೊಳ್ಳಲಿದೆ.
ತಂಡ: ಮಿನ್ನು ಮಾನಿ(ನಾಯಕಿ), ಶ್ವೇತಾ, ಪ್ರಿಯಾ ಪೂನಿಯಾ, ಶುಭಾ, ತೇಜಲ್ ಹಸಬ್‌ನಿಸ್, ಕಿರಣ್ ನಾವ್ಗಿರೆ, ಸಜನಾ, ಉಮಾ, ಶಿಪ್ರಾ ಗಿರಿ, ರಾಘವಿ ಬಿಸ್ತ್, ಸಾಯಿಕಾ ಇಶಾಕ್, ಮನ್ನತ್ ಕಶ್ಯಪ್, ತನುಜಾ ಕನ್ವಾರ್, ಪ್ರಿಯಾ ಮಿಶ್ರಾ, ಮೇಘನಾ, ಸಯಾಲಿ, ಶಬ್ನಮ್ ಶಕೀಲ್, ಯಶಸ್ರಿ. ಮೀಸಲು ಆಟಗಾರ್ತಿ: ಸೈಮಾ ಠಾಕೂರ್.