ICC ಚಾಂಪಿಯನ್ಸ್‌ ಟ್ರೋಫಿ ಸ್ಥಳಾಂತರ ಮಾಡಿದ್ರೆ ಭಾರತಕ್ಕೆ ಬರಲ್ಲ: ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ

By Kannadaprabha NewsFirst Published Jul 15, 2024, 7:16 AM IST
Highlights

ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಪಾಕ್‌ ಬಳಿ ಇದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿ ನಿಗದಿಯಾಗಿದೆ. ಆದರೆ ಭಾರತ ತಂಡವನ್ನು ಬಿಸಿಸಿಐ ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆಯಿಲ್ಲ. ಬದಲಾಗಿ ಟೂರ್ನಿಯನ್ನು ಬೇರೆಡೆ ನಡೆಸಲು ಐಸಿಸಿಗೆ ಬಿಸಿಸಿಐ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

ದುಬೈ: 2025ರ ಚಾಂಪಿಯನ್ಸ್‌ ಟ್ರೋಫಿಯನ್ನು ಸ್ಥಳಾಂತರಿಸಿದರೆ 2026ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಹಿಷ್ಕಾರ ಹಾಕುವುದಾಗಿ ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಮುಂದಿನ ವರ್ಷದ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಪಾಕ್‌ ಬಳಿ ಇದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿ ನಿಗದಿಯಾಗಿದೆ. ಆದರೆ ಭಾರತ ತಂಡವನ್ನು ಬಿಸಿಸಿಐ ಪಾಕಿಸ್ತಾನಕ್ಕೆ ಕಳುಹಿಸುವ ಸಾಧ್ಯತೆಯಿಲ್ಲ. ಬದಲಾಗಿ ಟೂರ್ನಿಯನ್ನು ಬೇರೆಡೆ ನಡೆಸಲು ಐಸಿಸಿಗೆ ಬಿಸಿಸಿಐ ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

Latest Videos

ಈ ನಡುವೆ ಭಾರತ ತಂಡ ಪಾಕ್‌ಗೆ ಆಗಮಿಸದಿದ್ದರೆ ಅಥವಾ ಟೂರ್ನಿಯನ್ನು ಐಸಿಸಿ ಬೇರೆಡೆಗೆ ಸ್ಥಳಾಂತರಿಸಿದರೆ, 2026ರ ಟಿ20 ವಿಶ್ವಕಪ್‌ ಆಡಲು ಭಾರತಕ್ಕೆ ಹೋಗದೆ ಬಹಿಷ್ಕಾರ ಹಾಕುವುದಾಗಿ ಐಸಿಸಿಗೆ ಪಾಕಿಸ್ತಾನ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಭಾರತ ತಂಡ 2008ರಲ್ಲಿ ಕೊನೆ ಬಾರಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಿತ್ತು.

ಜಿಂಬಾಬ್ವೆ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ

ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ: ಯುಎಇ ಸಹ ಆತಿಥ್ಯ?

ಚಾಂಪಿಯನ್ಸ್‌ ಟ್ರೋಫಿಯನ್ನು ಕಳೆದ ವರ್ಷದ ಏಷ್ಯಾಕಪ್‌ ರೀತಿ ಹೈಬ್ರಿಡ್‌ ಮಾದರಿಯಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಟೂರ್ನಿಯ ಆತಿಥ್ಯ ಹಕ್ಕು ಪಾಕಿಸ್ತಾನದ ಬಳಿಯೇ ಉಳಿಯಲಿದ್ದು, ಯುಎಇ ಸಹ ಕೆಲ ಪಂದ್ಯಗಳಿಗೆ ಆತಿಥ್ಯ ನೀಡಲಿದೆ ಎನ್ನಲಾಗುತ್ತಿದೆ. ಭಾರತದ ಲೀಗ್‌ ಹಂತದ ಪಂದ್ಯಗಳು, ಒಂದು ವೇಳೆ ಭಾರತ ಸೆಮಿಫೈನಲ್‌, ಫೈನಲ್‌ ಪ್ರವೇಶಿಸಿದರೆ ಆ ಪಂದ್ಯಗಳನ್ನು ದುಬೈನಲ್ಲಿ ನಡೆಸಲು ಐಸಿಸಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ವಿಶ್ವ ಲೆಜೆಂಡ್ಸ್‌ ಕ್ರಿಕೆಟ್‌: ಭಾರತ ಚಾಂಪಿಯನ್‌

ಬರ್ಮಿಂಗ್‌ಹ್ಯಾಮ್‌: ಚೊಚ್ಚಲ ಆವೃತ್ತಿಯ ವಿಶ್ವ ಲೆಜೆಂಡ್ಸ್‌ ಚಾಂಪಿಯನ್‌ಶಿಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಡೆದ ಫೈನಲ್‌ ಪಂದ್ಯದಲ್ಲಿ ಯುವರಾಜ್‌ ಸಿಂಗ್‌ ನಾಯಕತ್ವದ ಭಾರತ ತಂಡ 5 ವಿಕೆಟ್‌ ಗೆಲುವು ಸಾಧಿಸಿತು.

ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗುತ್ತಿದ್ದಂತೆಯೇ ಖುಲಾಯಿಸುತ್ತಾ ಕೆಕೆಆರ್‌ನ ಈ 5 ಆಟಗಾರರ ಅದೃಷ್ಟ..?

ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 6 ವಿಕೆಟ್‌ಗೆ 156 ರನ್‌ ಕಲೆಹಾಕಿತು. ಶೊಯೆಬ್ ಮಲಿಕ್‌ 41, ಕಮ್ರಾನ್‌ ಅಕ್ಮಲ್‌ 24, ಮಕ್ಸೂದ್‌ 21, ಸೊಹೈಲ್‌ ತನ್ವೀರ್‌ 19 ರನ್‌ ಗಳಿಸಿದರು. ಅನುರೀತ್‌ ಸಿಂಗ್‌ 3 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿಯನ್ನು ಭಾರತ 19.1 ಓವರ್‌ಗಳಲ್ಲಿ ಬೆನ್ನತ್ತಿ ಜಯಗಳಿಸಿತು. ಅಂಬಟಿ ರಾಯುಡು 30 ಎಸೆತಗಳಲ್ಲಿ 50, ಗುರುಕೀರತ್‌ ಸಿಂಗ್‌ 34 ರನ್‌ ಸಿಡಿಸಿದರೆ, ಕೊನೆಯಲ್ಲಿ ಅಬ್ಬರಿಸಿದ ಯೂಸುಫ್‌ ಪಠಾಣ್‌ 16 ಎಸೆತಗಳಲ್ಲಿ 30 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು. ರಾಯುಡು ಪಂದ್ಯಶ್ರೇಷ್ಠ, ಯೂಸುಫ್‌ ಪಠಾಣ್‌ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಂಡಿದ್ದವು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದಿದ್ದವು. ಬಳಿಕ ಸೆಮಿಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಮಣಿಸಿದ್ದರೆ, ವೆಸ್ಟ್‌ಇಂಡೀಸ್‌ ವಿರುದ್ಧ ಗೆದ್ದು ಪಾಕಿಸ್ತಾನ ಫೈನಲ್‌ಗೇರಿತ್ತು.

click me!