
ಪುಣೆ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಷ್ಟು ಸರಳ ಆಟಗಾರ ಎನ್ನುವುದನ್ನು ಆಗಾಗ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಪುಟ್ಟ ಮಹಿಳಾ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆ ಕ್ಯೂಟ್ ಗರ್ಲ್, ರೋಹಿತ್ ಶರ್ಮಾ ಮೂಲಕ ವಿರಾಟ್ ಕೊಹ್ಲಿಗೆ ವಿಶೇಷ ಸಂದೇಶ ರವಾನಿಸಿ ಗಮನ ಸೆಳೆದಿದ್ದಾರೆ. ಆಗ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಇಲ್ಲಿನ ಎಂಸಿಎ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ಪ್ರಾಕ್ಟೀಸ್ ಸೆಷನ್ ಮುಗಿಸಿ ಪೆವಿಲಿಯನ್‌ನತ್ತ ವಾಪಾಸ್ಸಾಗುತ್ತಿದ್ದಾಗ ಪುಟ್ಟ ಬಾಲಕಿಯೊಬ್ಬಳು, ರೋಹಿತ್ ಶರ್ಮಾ ಬಳಿ ಆಟೋಗ್ರಾಫ್ ಕೇಳುತ್ತಾಳೆ. ಆಗ ರೋಹಿತ್ ಶರ್ಮಾ, ಅಲ್ಲೇ ಇರು ನಾನು ಬರುತ್ತೇನೆ ಎಂದು ಹೇಳುತ್ತಾರೆ. ಆ ಬಳಿಕ ಆ ಬಾಲಕಿಗೆ ರೋಹಿತ್ ಶರ್ಮಾ ಆಟೋಗ್ರಾಫ್ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಆ ಬಾಲಕಿ ಧನ್ಯವಾದಗಳು, ನಿಮ್ಮನ್ನು ನೋಡೋಕೆ ನಿಮ್ಮ ದೊಡ್ಡ ಅಭಿಮಾನಿ ಇಲ್ಲಿಗೆ ಬಂದಿದ್ದಾಳೆ ಎಂದು ವಿರಾಟ್ ಕೊಹ್ಲಿಗೆ ಹೇಳಿ ಎಂದಿದ್ದಾಳೆ. ಅದಕ್ಕೆ ರೋಹಿತ್ ಶರ್ಮಾ ನಸು ನಗುತ್ತಾ ನಾನು ಕೊಹ್ಲಿಗೆ ಹೇಳುತ್ತೇನೆ ಎಂದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡ ಹಾಡು ಬಳಸಿ ಲಡ್ಡು ಮುತ್ಯಾ ಬಾಬಾನ ಟ್ರೋಲ್ ಮಾಡಿದ ಶಿಖರ್ ಧವನ್! ವಿಡಿಯೋ ವೈರಲ್
ಹೀಗಿದೆ ನೋಡಿ ಆ ಕ್ಯೂಟ್ ವಿಡಿಯೋ:
ಇನ್ನು ಕ್ರಿಕೆಟ್ ವಿಚಾರಕ್ಕೆ ಬರುವುದಾದರೇ, ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಮೊದಲ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು ಗೆಲುವು ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರು ಕಿವೀಸ್ ತಂಡವು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಸರಣಿ ಜೀವಂತವಾಗಿಟ್ಟುಕೊಳ್ಳಬೇಕಿದ್ದರೇ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು? ಭಾರತಕ್ಕೆ ಸಿಕ್ಕಿದ್ದೆಷ್ಟು?
ಕತ್ತು ನೋವಿನ ಸಮಸ್ಯೆಯಿಂದಾಗಿ ಬೆಂಗಳೂರು ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಶುಭ್‌ಮನ್ ಗಿಲ್ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಇದೇ ಅಕ್ಟೋಬರ್ 24ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಲಭ್ಯವಿರಲಿದ್ದಾರೆ. ಶುಭ್‌ಮನ್ ಗಿಲ್ ತಂಡ ಕೂಡಿಕೊಂಡರೇ ಯಾರಿಗೆ ಕೊಕ್ ನೀಡಲಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.