ಇಂಗ್ಲೆಂಡ್‌ ತಂಡದಲ್ಲೀಗ ಸಾಲ್ಟ್‌ ಮತ್ತು ಪೆಪ್ಪರ್‌ ಓಪನ್ನರ್!

By Naveen KodaseFirst Published Oct 23, 2024, 12:38 PM IST
Highlights

ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲೀಗ ಸಾಲ್ಟ್ & ಪೆಪ್ಪರ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್‌: ಅ.31ರಿಂದ ವೆಸ್ಟ್‌ಇಂಡೀಸ್‌ ವಿರುದ್ಧ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಇಂಗ್ಲೆಂಡ್‌ ತಂಡ ಪ್ರಕಟಗೊಂಡಿದ್ದು, ಯುವ ಬ್ಯಾಟರ್‌ ಮೈಕಲ್‌ ಪೆಪ್ಪರ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ ಕೂಡಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸದ್ಯ ಇವರಿಬ್ಬರ ಹೆಸರುಗಳು ‘ಸಾಲ್ಟ್‌ ಆ್ಯಂಡ್‌ ಪೆಪ್ಪರ್‌’ ಎಂದೇ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಫಿಲ್ ಸಾಲ್ಟ್ ಹಾಗೂ ಮೈಕಲ್‌ ಪೆಪ್ಪರ್‌ ಇಬ್ಬರೂ ಅಗ್ರಕ್ರಮಾಂಕದ ಬ್ಯಾಟರ್‌ಗಳಾಗಿದ್ದು, ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಇನ್ನು ಇಂಗ್ಲೆಂಡ್ ಸೀಮಿತ ಓವರ್‌ಗಳ ತಂಡದ ನಾಯಕ ಜೋಸ್ ಬಟ್ಲರ್, ಏಕದಿನ ಸರಣಿಯಿಂದ ಹೊರಬಿದ್ದಿದ್ದು, ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಜೋಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಇದೇ ಮೊದಲ ಬಾರಿಗೆ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಇಂಗ್ಲೆಂಡ್ ಏಕದಿನ ತಂಡವನ್ನು ನಾಯಕರಾಗಿ ಮುನ್ನಡೆಸಲಿದ್ದಾರೆ. 

Latest Videos

ಕಾಮನ್‌ವೆಲ್ತ್ ಗೇಮ್ಸ್‌ನಿಂದ ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಟಿಟಿ, ಶೂಟಿಂಗ್‌ಗೆ ಕೊಕ್!

The seriousness of our sport can be judged from how many fans and pundits are reveling at the prospect of puns they could generate if Salt and Pepper play. Elite community. https://t.co/yeKaKxtNZH

— Zainub Razvi (@zainubrazvi)

Intrigued to see how Pepper and Salt will mix on the field.

— Eliezer Swanson (@SwansonEliezer)

ವೆಸ್ಟ್ ಇಂಡೀಸ್‌ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಜೋಸ್ ಬಟ್ಲರ್(ಕೇವಲ ಟಿ20 ಸರಣಿಗೆ ಮಾತ್ರ), ಜೋಫ್ರಾ ಆರ್ಚರ್, ಜೇಕೊಬ್ ಬೆಥೆಲ್, ಜೋಫೆರ್ ಚೋಹನ್, ಸ್ಯಾಮ್ ಕರ್ರನ್, ವಿಲ್ ಜೇಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಸಕೀಬ್ ಮಹಮೊದ್, ಡ್ಯಾನ್ ಮುಸ್ಲೆ, ಜೇಮಿ ಓವರ್‌ಟನ್, ಮೈಕಲ್‌ ಪೆಪ್ಪರ್‌, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟಾಪ್ಲೆ, ಜಾನ್ ಟರ್ನರ್.

ಕ್ರಿಕೆಟಿಗ ಸರ್ಫರಾಜ್‌ ಖಾನ್‌ಗೆ ಗಂಡು ಮಗು

ಮುಂಬೈ: ಟೀಂ ಇಂಡಿಯಾದ ಯುವ ಕ್ರಿಕೆಟಿಗ ಸರ್ಫರಾಜ್‌ ಖಾನ್‌ ಗಂಡು ಮಗುವಿಗೆ ತಂದೆಯಾಗಿದ್ದಾರೆ. 26 ವರ್ಷದ ಸರ್ಫರಾಜ್‌ ಸೋಮವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಮಗುವಿನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಮುಂಬೈನ ತಾರಾ ಬ್ಯಾಟರ್‌ ಸರ್ಫರಾಜ್‌ ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ರೊಮಾನ ಜಹೂರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಿಚ್‌ಗೆ ನಮಸ್ಕರಿಸಿದ ಕೆಎಲ್ ರಾಹುಲ್, ಟೆಸ್ಟ್ ಕ್ರಿಕೆಟ್‌ಗೆ ವಿದಾಯ?

ರಾಜ್ಯಕ್ಕೆ ಇನ್ನಿಂಗ್ಸ್‌, 131 ರನ್‌ ಗೆಲುವು

ಅಗರ್ತಲಾ(ತ್ರಿಪುರಾ): ಸಿ.ಕೆ.ನಾಯ್ಡು ಟ್ರೋಫಿ ಅಂಡರ್‌-23 ಕ್ರಿಕೆಟ್‌ ಟೂರ್ನಿಯ ತ್ರಿಪುರಾ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್‌ ಹಾಗೂ 131 ರನ್‌ ಬೃಹತ್‌ ಗೆಲುವು ಸಾಧಿಸಿದೆ. ಈ ಮೂಲಕ ‘ಎ’ ಗುಂಪಿನಲ್ಲಿ 2 ಪಂದ್ಯಗಳಲ್ಲಿ 21 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡ 5 ವಿಕೆಟ್‌ಗೆ 580 ರನ್‌ ಕಲೆಹಾಕಿ ಮೊದಲ ಇನ್ನಿಂಗ್ಸ್ ಡಿಕ್ಲೇರ್‌ ಘೋಷಿಸಿತ್ತು. ಬಳಿಕ ತ್ರಿಪುರಾ ಕೇವಲ 104 ರನ್‌ಗೆ ಆಲೌಟಾಗಿತ್ತು. 436 ರನ್‌ ಹಿನ್ನಡೆಗೊಳಗಾಗಿ ಫಾಲೋ-ಆನ್‌ಗೆ ತುತ್ತಾಗಿದ್ದ ತ್ರಿಪುರಾ 2ನೇ ಇನ್ನಿಂಗ್ಸ್‌ನಲ್ಲಿ ಮಂಗಳವಾರ 345ಕ್ಕೆ ಆಲೌಟಾಯಿತು. ಹೃತುರಾಜ್‌ 95, ಆನಂದ್‌ 54 ರನ್‌ ಗಳಿಸಿದರು. ರಾಜ್ಯದ ಪರ ಪರಾಸ್‌ ಆರ್ಯ 6 ವಿಕೆಟ್‌ ಕಿತ್ತರು. ಅ.27ರಿಂದ ರಾಜ್ಯ ತಂಡ ಮಹಾರಾಷ್ಟ್ರ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಬೆಂಗಳೂರಿನ ಆಲೂರು ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

 

click me!