ಕನ್ನಡ ಹಾಡು ಬಳಸಿ ಲಡ್ಡು ಮುತ್ಯಾ ಬಾಬಾನ ಟ್ರೋಲ್ ಮಾಡಿದ ಶಿಖರ್ ಧವನ್! ವಿಡಿಯೋ ವೈರಲ್

Published : Oct 23, 2024, 02:44 PM IST
ಕನ್ನಡ ಹಾಡು ಬಳಸಿ ಲಡ್ಡು ಮುತ್ಯಾ ಬಾಬಾನ ಟ್ರೋಲ್ ಮಾಡಿದ ಶಿಖರ್ ಧವನ್! ವಿಡಿಯೋ ವೈರಲ್

ಸಾರಾಂಶ

ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಆಧುನಿಕ ಲಡ್ಡು ಮುತ್ಯಾ ಅವರನ್ನು ವಿಡಿಯೋ ಮೂಲಕ ಟ್ರೋಲ್ ಮಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್ ಧವನ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್‌ಗಳ ಮೂಲಕ ಸದಾ ಸಕ್ರಿಯವಾಗಿಯೇ ಗುರುತಿಸಿಕೊಂಡಿದ್ದಾರೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಮೈದಾನದಲ್ಲಿ ಆಟವಾಡುವಾಗಲೂ ಒಂದು ಖದರ್ ಸೃಷ್ಟಿಸಿದ್ದರು. ಇದೀಗ ಮೈದಾನದಾಚೆಗೆ ಮತ್ತೆ ಸದ್ದು ಮಾಡಲಾರಂಭಿಸಿದ್ದಾರೆ.
ಉತ್ತರ ಕರ್ನಾಟಕದ ಪ್ರಖ್ಯಾತ ಪವಾಡ ಪುರುಷ ಲಡ್ಡು ಮುತ್ಯಾರನ್ನು ಬಿಂಬಿಸಲು ಹೊರಟಿರುವ ಆಧುನಿಕ ಲಡ್ಡು ಮುತ್ಯಾ ಬಾಬಾ ಅವರನ್ನು ಧವನ್ ಕನ್ನಡ ಹಾಡು ಬಳಸಿಯೇ ಟ್ರೋಲ್ ಮಾಡಿದ್ದಾರೆ.

ಭಾಗಲಕೋಟೆಯ ಮೂಲ ಪವಾಡ ಪುರುಷ ಲಡ್ಡು ಮುತ್ಯಾ ಅವರಿಗೆ ಅಪಾರವಾದ ಭಕ್ತವರ್ಗವೇ ಇದೆ. ಆದರೆ ಇದೀಗ ಮತ್ತೊಬ್ಬ ವ್ಯಕ್ತಿ ತಿರುಗುವ ಫ್ಯಾನ್ ಅನ್ನು ಕೈಯಲ್ಲಿ ನಿಲ್ಲಿಸುವ ಮೂಲಕ ಗಮನ ಸೆಳೆದಿರುವ ವ್ಯಕ್ತಿಯನ್ನು ಜನರು ಆಧುನಿಕ ಲಡ್ಡು ಮುತ್ಯಾ ಎಂದು ಬಿಂಬಿಸಲು ಹೊರಟಿದ್ದಾರೆ. ಈ ಆಧುನಿಕ ಲಡ್ಡು ಮುತ್ಯಾ ಅವರನ್ನು ಶಿಖರ್ ಧವನ್, ವಿಡಿಯೋ ಮೂಲಕ ಟ್ರೋಲ್ ಮಾಡಿದ್ದಾರೆ.

ಪವಾಡ ಪುರುಷ ಲಡ್ಡು ಮುತ್ಯಾ ಟ್ರೋಲ್ ಮಾಡುವ ಮುನ್ನ ಸತ್ಯ ತಿಳ್ಕೊಳ್ಳಿ! ಫ್ಯಾನ್ ನಿಲ್ಲಿಸೋರು ಯಾರು ಗೊತ್ತಾ?

ಹೌದು, ಈ ವಿಡಿಯೋದಲ್ಲಿ ಕುರ್ಚಿ ಮೇಲೆ ಕುಳಿತಿರುವ ಶಿಖರ್ ಧವನ್ ಅವರನ್ನು ಮೂರು ಮಂದಿ ಎತ್ತಿ ಹಿಡಿದಿದ್ದಾರೆ. ಆಗ ನಿಧಾನವಾಗಿ ತಿರುಗುತ್ತಿರುವ ಫ್ಯಾನ್ ಅನ್ನು ಧವನ್ ಕೈಯಲ್ಲಿ ತಡೆದು ನಿಲ್ಲಿಸಿದ್ದಾರೆ. ಇದಾದ ಬಳಿಕ ಮೈಮೇಲೆ ಬಂದಂತ ಇಬ್ಬರು ವ್ಯಕ್ತಿಗಳಿಗೆ ಆಶೀರ್ವಾದ ಮಾಡುವಂತೆ ನಟಿಸಿದ್ದಾರೆ. ಈ ವಿಡಿಯೋಗೆ ಶಿಖರ್ ಧವನ್, ಫ್ಯಾನ್‌ ವಾಲೇ ಬಾಬಾ ಕಿ ಜೈ ಹೋ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.

ಹೀಗಿದೆ ನೋಡಿ ವಿಡಿಯೋ:

ಇನ್ನು ಸಾಮಾಜಿಕ ಜಾಲತಾಣದಲ್ಲಿ ತಿರುಗುವ ಫ್ಯಾನ್ ಕೈಯಿಂದ ನಿಲ್ಲಿಸಿ, ಅದೇ ಕೈಯಿಂದ ಎಲ್ಲರ ತಲೆಯನ್ನು ಮುಟ್ಟಿ ಆಶೀರ್ವಾದ ಮಾಡುವ ಆಧುನಿಕ ಲಡ್ಡು ಮುತ್ಯಾನ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋದಲ್ಲಿ ಜನರು ಲಡ್ಡು ಮುತ್ಯಾ ಅಂತ ಹೇಳಿ ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನು ಫ್ಯಾನ್ ಮುಟ್ಟಿ ಆಧುನಿಕ ಲಡ್ಡು ಮುತ್ಯಾ ಅಂತೇಳಿ ಬಿಂಬಿಸಿಕೊಳ್ತಿರುವ ವ್ಯಕ್ತಿ ಆಗಿದ್ದಾರೆ. ಆದರೆ, ಆ ವ್ಯಕ್ತಿ ಎಲ್ಲಿಯವರು? ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವ ಭಾರತೀಯನೂ ಮಾಡದ ಅಪರೂಪದ ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ!
ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ