ವಿರಾಟ್ ಕೊಹ್ಲಿಗೆ ಪ್ರಪೋಸ್, ಸಚಿನ್ ಮಗನಿಗೆ ಗಾಳ ಹಾಕಿದ್ದ ಆಟಗಾರ್ತಿ ಮದುವೆಯಾಗಿದ್ದು ಮತ್ತೊಬ್ಬಳನ್ನು!

By Naveen Kodase  |  First Published Aug 31, 2024, 1:58 PM IST

ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಹ್ಲಿಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ವ್ಯಾಟ್, ಇದೀಗ ಸಲಿಂಗಿ ಗೆಳತಿಯನ್ನೇ ಮದುವೆಯಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಡೇನಿಯಲ್ ವ್ಯಾಟ್, ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳತಿ ಜಾರ್ಜಿಯಾ ಹಾಡ್ಜ್‌ ಅವರನ್ನು ಮದುವೆಯಾಗಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ಚೆಲ್ಸಿಸ್ ಓಲ್ಡ್‌ ಟೌನ್ ಹಾಲ್‌ನಲ್ಲಿ ಆಗಸ್ಟ್‌ 22ರಂದು ಡೇನಿಯಲ್ ವ್ಯಾಟ್ ಹಾಗೂ ಜಾರ್ಜಿಯಾ ಹಾಡ್ಜ್‌ ಸಲಿಂಗ ಮದುವೆಯಾಗಿ ಗಮನ ಸೆಳೆದಿದ್ದಾರೆ.

ಈ ಜೋಡಿ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಎಂಗೇಜ್‌ ಆಗಿದ್ದರು. ಇದೀಗ ತಮ್ಮ ಕುಟುಂಬಸ್ಥರು ಹಾಗೂ ಅತ್ಯಾಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಡೇನಿಯಲ್ ವ್ಯಾಟ್ ಹಾಗೂ ಜಾರ್ಜಿಯಾ ಹಾಡ್ಜ್ ಇಬ್ಬರಿಗೂ ತಲಾ 33 ವರ್ಷ ವಯಸ್ಸಾಗಿದೆ. ಜಾರ್ಜಿಯ ಹಾಡ್ಜ್ ಓರ್ವ ಸ್ಪೋರ್ಟ್ಸ್‌ ಏಜೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಲಿಂಗಿ ಜೋಡಿ ತಮ್ಮ ಮದುವೆಯಲ್ಲಿ ಅದ್ಧೂರಿಯಾಗಿರುವ ಬಿಳಿ ಮದುವೆ ಗೌನ್ ತೊಟ್ಟು ಮಿಂಚಿದ್ದಾರೆ.  

Tap to resize

Latest Videos

"ನಮಾಝ್ ಮಾಡುವಾಗ ಸಿಗುವ ನೆಮ್ಮದಿ, ಶತಕ ಚಚ್ಚಿದರೂ ಸಿಗಲ್ಲ": ಭಾರತೀಯ ಕ್ರಿಕೆಟಿಗನ ದಿಟ್ಟ ಮಾತು..!

ಇದೀಗ ಡೇನಿಯಲ್ ವ್ಯಾಟ್, ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದು, 22.08.24 ಮಿ. & ಮಿ. ವ್ಯಾಟ್-ಹಾಡ್ಜ್ ಎಂದು ಬರೆದುಕೊಂಡಿದ್ದಾರೆ.

22.08.24 🤍 Mrs & Mrs Wyatt-Hodge pic.twitter.com/fwE71Pqcvy

— Danielle Wyatt (@Danni_Wyatt)

ಇನ್ನು ಡೇನಿಯಲ್ ವ್ಯಾಟ್, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ಚಿರಪರಿಚಿತ ಹೆಸರು. ಅದರಲ್ಲೂ 2014ರಲ್ಲಿ ಡೇನಿಯಲ್ ವ್ಯಾಟ್, ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕವೇ, ವಿರಾಟ್ ಕೊಹ್ಲಿ ನನ್ನನ್ನು ಮದುವೆಯಾಗುತ್ತೀರಾ? ಎಂದು ಬಹಿರಂಗವಾಗಿಯೇ ಪ್ರಪೋಸ್ ಮಾಡಿದ್ದರು. ಇದು ಕ್ರಿಕೆಟ್ ವಲಯದಲ್ಲಿ ಸಂಚಲವನ್ನೇ ಸೃಷ್ಟಿಸಿತ್ತು. 

ಇನ್ನು ಡೇನಿಯಲ್ ವ್ಯಾಟ್, ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಅವರ ಗೆಳತಿಯೂ ಹೌದು. 2010ರಿಂದಲೂ ಡೇನಿಯಲ್‌ ವ್ಯಾಟ್‌ಗೆ ಅರ್ಜುನ್ ತೆಂಡುಲ್ಕರ್ ಪರಿಚಯವಿದೆ. ಆಗ ಅರ್ಜುನ್ ತೆಂಡುಲ್ಕರ್‌ಗೆ 10 ವರ್ಷವಿದ್ದಾಗಲೇ ವ್ಯಾಟ್, ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ್ದರು. ಇದಾದ ಬಳಿಕ ಇಬ್ಬರ ನಡುವೆ ಒಂದೊಳ್ಳೆಯ ಗೆಳೆತನ ಬೆಳೆದಿತ್ತು.

ನೂರಾರು ಆಟಗಾರರನ್ನು ಬದಲಿಸಿದರೂ ಆರ್‌ಸಿಬಿಗೆ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಏಕೆ? ಕೊನೆಗೂ ಬಯಲಾಯ್ತು ಸತ್ಯ..!

ಇನ್ನು 2022ರಲ್ಲಿ ಡೇನಿಯಲ್ ವ್ಯಾಟ್, ಇನ್‌ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ ಅರ್ಜುನ್ ತೆಂಡುಲ್ಕರ್ ತಮ್ಮ ಜತೆ ಲಂಡನ್‌ನ ಸೋಹೊನಲ್ಲಿ ಲಂಚ್ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅರ್ಜುನ್ ತೆಂಡುಲ್ಕರ್ ಹಾಗೂ ಡೇನಿಯಲ್ ವ್ಯಾಟ್ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಳಿಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆದರೆ ಇದಾಗಿ ಮರು ವರ್ಷದಲ್ಲೇ ಅಂದರೆ 2023ರಲ್ಲಿ ಡೇನಿಯಲ್ ವ್ಯಾಟ್ ತಮ್ಮ ಗೆಳತಿಯ ಜತೆ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಂತೆಯೇ ಈ ಊಹಾಪೋಹಗಳಿಗೆ ಪೂರ್ಣ ವಿರಾಮ ಬಿದ್ದಿತು. 

click me!