ಸರಣಿ ಸೋಲಿನ ಬೆನ್ನಲ್ಲೇ ಸೌತ್ ಆಫ್ರಿಕಾಗೆ ಮತ್ತೊಂದು ಶಾಕ್!

By Web DeskFirst Published Oct 13, 2019, 6:41 PM IST
Highlights

ಭಾರತ ವಿರುದ್ದದ ಟೆಸ್ಟ್ ಸರಣಿ ಸೋತ ಸೌತ್ ಆಫ್ರಿಕಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ಪುಣೆ ಪಂದ್ಯದ ಮುಗಿದ ಬೆನ್ನಲ್ಲೇ ಮ್ಯಾನೇಜ್ಮೆಂಟ್ ಪ್ರಕಟಣೆ ಹರಿಗಣಗಳ ಕಮ್‌ಬ್ಯಾಕ್ ಪ್ಲಾನ್‌ಗೆ ಪೆಟ್ಟು ನೀಡಿದೆ.

ಪುಣೆ(ಅ.13): ಭಾರತ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಸೌತ್ ಆಫ್ರಿಕಾ ತೀವ್ರ ನಿರಾಸೆ ಅನುಭವಿಸಿದೆ. ವಿಶಾಖಪಟ್ಟಣಂ ಹಾಗೂ ಪುಣೆ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡ ಸೌತ್ ಆಫ್ರಿಕಾ ಸರಣಿ ಕೈಚೆಲ್ಲಿದೆ. ಇದೀಗ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಮಾನ ಉಳಿಸಿಕೊಳ್ಳಲು ಹೋರಾಟ ನಡೆಸಲು ರೆಡಿಯಾಗಿದೆ. ಆದರೆ ಪುಣೆ ಪಂದ್ಯದ ಸೋಲಿನ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ.

ಇದನ್ನೂ ಓದಿ: ಸ್ಟೀವ್ಹಾ, ರಿಚರ್ಡ್ಸ್, ಪಾಂಟಿಂಗ್; ದಿಗ್ಗಜರ ಸಾಲಿನಲ್ಲಿ ನಾಯಕ ಕೊಹ್ಲಿ!

ಸೌತ್ ಆಫ್ರಿಕಾ ತಂಡದ ಕೀ ಸ್ಪೀನ್ನರ್ ಕೇಶವ್ ಮಹರಾಜ್ ಭುಜದ ನೋವಿನಿಂದ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ರಾಂಚಿಯಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯಕ್ಕೆ ಕೇಶವ್ ಮಹರಾಜ್ ಅಲಭ್ಯರಿಲ್ಲ. ಕೇಶವ್ ಬದಲು ಜಾರ್ಜ್ ಲಿಂಡೆಗೆ ಸ್ಛಾನ ನೀಡಲಾಗಿದೆ.

 

George Linde to replace Keshav Maharaj https://t.co/GQbsgy4HoD pic.twitter.com/3xcseDLRux

— Cricket South Africa (@OfficialCSA)

ಇದನ್ನೂ ಓದಿ: ಪುಣೆ ಟೆಸ್ಟ್ ಗೆಲುವು; ಆಸ್ಟ್ರೇಲಿಯಾ ದಾಖಲೆ ಮುರಿದ ಕೊಹ್ಲಿ ಸೈನ್ಯ!

ಪುಣೆ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 72 ರನ್ ಸಿಡಿಸಿದ್ದ ಕೇಶವ್ ಭಾರಿ ಹಿನ್ನಡೆಯನ್ನು ತಪ್ಪಿಸಿದ್ದರು. ಇನ್ನು 2ನೇ ಇನ್ನಿಂಗ್ಸ್‌ನಲ್ಲಿ 22 ರನ್ ಸಿಡಿಸಿದ್ದರು. ಪುಣೆ ಪಂದ್ಯದಲ್ಲಿ ಕೇವಲ 1 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.  ಇದೀಗ ಕೇಶವ್ ಮಹರಾಜ್ ಅಲಭ್ಯತೆ ಸೌತ್ ಆಫ್ರಿಕಾ ತಂಡಕ್ಕೆ ಮತ್ತಷ್ಟು ಹಿನ್ನಡೆ ತಂದಿದೆ.
 

click me!