ಸುಲಭ ರನೌಟ್ ಆಗಿ ಪೆವಿಲಿಯನ್‌ನತ್ತ ವಾಪಾಸಾಗುವ ವೇಳೆಯಲ್ಲಿ ನಾನ್‌ಸ್ಟ್ರೈಕರ್ ಬ್ಯಾಟರ್, ನಿರಾಸೆಯಿಂದ ಬ್ಯಾಟನ್ನು ಬೀಸಿದ್ದಾರೆ. ಅದು ಅವರ ಕೈ ಜಾರಿ ಮತ್ತೊಂದು ತುದಿಯಲ್ಲಿದ್ದ ಸ್ಟ್ರೈಕರ್ ಬ್ಯಾಟರ್‌ಗೆ ಬಡಿದಿದೆ. ಇದನ್ನು ನೋಡಿ ಒಂದು ಕ್ಷಣ ಎದುರಾಳಿ ತಂಡದ ಆಟಗಾರರು ತಬ್ಬಿಬ್ಬಾಗಿ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ
ಬೆಂಗಳೂರು(ಆ.26): ಜಂಟಲ್ ಮ್ಯಾನ್ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಕೆಲವೊಮ್ಮೆ ಅಚಾತುರ್ಯಗಳು ನಡೆದುಬಿಡುತ್ತವೆ. ಕ್ರಿಕೆಟ್ ಜಗತ್ತಿನಾದ್ಯಂತ ಹೆಚ್ಚು ಹೆಚ್ಚು ಜನಪ್ರಿಯವಾದಂತೆಲ್ಲಾ, ಮುಂದುವರೆದ ತಂತ್ರಜ್ಞಾನಗಳನ್ನು, ವಿಡಿಯೋ ಅನಾಲಿಸಿಸ್‌ಗಳನ್ನು ಬಳಸುವ ಮೂಲಕ ತೀರ್ಪು ಕೊಡುವ ವಿಚಾರದಲ್ಲಿ ಹೆಚ್ಚು ತಪ್ಪುಗಳಾಗದಂತೆ ನೋಡಿಕೊಳ್ಳುವ ವಿಚಾರದಲ್ಲಿ ಕ್ರಿಕೆಟ್ ಸಾಕಷ್ಟು ಮುಂದು ಬಂದಿದೆ.
ಈ ಕುರಿತಂತೆ ಆಟಗಾರರಿಗೂ ಈ ಬಗ್ಗೆ ಹೆಚ್ಚಿನ ಅರಿವು ಮೂಡಿದೆ. ಅದರಲ್ಲೂ ಟಿ20 ಕ್ರಿಕೆಟ್ ಜನಪ್ರಿಯವಾದ ಬಳಿಕವಂತೂ ಕೆನಡಾ, ಯುಎಇ, ಯುಎಸ್‌ಎನಂತಹ ದೇಶಗಳು ಇದೀಗ ಕ್ರಿಕೆಟ್‌ನತ್ತ ಹೆಚ್ಚು ಹೆಚ್ಚು ಒಲವು ತೋರಲಾರಂಭಿಸಿವೆ. ಇನ್ನು ಮೊದಲೇ ಹೇಳಿದಂತೆ ಇಷ್ಟೆಲ್ಲ ಇದ್ದರೂ ಈ ಕ್ರೀಡೆಯಲ್ಲಿ ನಾವು ವಿಚಿತ್ರ ಘಟನೆಗಳನ್ನು ನೋಡುತ್ತಲೇ ಬಂದಿದ್ದೇವೆ. ಇದೀಗ ಅಮೆಚೂರ್ ಲೆವೆಲ್ ಕ್ರಿಕೆಟ್ ಪಂದ್ಯವೊಂದರಲ್ಲಿ ರನೌಟ್ ಆದ ಬೇಸರಲ್ಲಿ ನಾನ್‌ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್, ಬ್ಯಾಟ್ ಬೀಸಿದ ರಬಸಕ್ಕೆ ಆ ಬ್ಯಾಟ್ ಸ್ಟ್ರೈಕ್‌ನಲ್ಲಿದ್ದ ಬ್ಯಾಟರ್‌ಗೆ ಬಡಿದ ಘಟನೆ ನಡೆದಿದ್ದು, ಇದೀಗ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
undefined
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಚಿಂತೆ ಹೆಚ್ಚಿಸಿದ ಕೆ ಎಲ್ ರಾಹುಲ್ ಫಿಟ್ನೆಸ್..!
ಸುಲಭ ರನೌಟ್ ಆಗಿ ಪೆವಿಲಿಯನ್‌ನತ್ತ ವಾಪಾಸಾಗುವ ವೇಳೆಯಲ್ಲಿ ನಾನ್‌ಸ್ಟ್ರೈಕರ್ ಬ್ಯಾಟರ್, ನಿರಾಸೆಯಿಂದ ಬ್ಯಾಟನ್ನು ಬೀಸಿದ್ದಾರೆ. ಅದು ಅವರ ಕೈ ಜಾರಿ ಮತ್ತೊಂದು ತುದಿಯಲ್ಲಿದ್ದ ಸ್ಟ್ರೈಕರ್ ಬ್ಯಾಟರ್‌ಗೆ ಬಡಿದಿದೆ. ಇದನ್ನು ನೋಡಿ ಒಂದು ಕ್ಷಣ ಎದುರಾಳಿ ತಂಡದ ಆಟಗಾರರು ತಬ್ಬಿಬ್ಬಾಗಿ ಹೋಗಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ
ಹೀಗಿತ್ತು ನೋಡಿ ಅ ಕ್ಷಣ:
ಇನ್ನು ಕ್ರಿಕೆಟ್ ವಿಚಾರದ ಕುರಿತಂತೆ ಹೇಳುವುದಾದರೇ, ಮುಂದಿನ ಎರಡೂವರೆ ತಿಂಗಳುಗಳ ಕಾಲ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭರಪೂರ ಮನರಂಜನೆ ಸಿಗಲಿದೆ. ಇದೇ ಆಗಸ್ಟ್ 30ರಿಂದ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆರಂಭವಾಗಲಿದ್ದು, ಸೆಪ್ಟೆಂಬರ್ 22ರ ವರೆಗೆ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ, ತವರಿನಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ಅಕ್ಟೋಬರ್ 05ರಿಂದ ಭಾರತದಲ್ಲೇ ಈ ಬಾರಿ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ODI World Cup: ವಿಶ್ವಕಪ್ ಟಿಕೆಟ್ ಖರೀದಿಗೆ ಅಭಿಮಾನಿಗಳ ಹರಸಾಹಸ!
ಭಾರತ ಕ್ರಿಕೆಟ್ ತಂಡವು 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದಾದ ಬಳಿಕ 2015 ಹಾಗೂ 2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇನ್ನು ಟೀಂ ಇಂಡಿಯಾ ಐಸಿಸಿ ಟ್ರೋಫಿ ಗೆದ್ದು ಒಂದು ದಶಕವೇ ಕಳೆದಿದೆ. 2013ರಲ್ಲಿ ಧೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದೀಗ ದಶಕದ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಭಾರತದ ಮುಂದಿದೆ. ಇದನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸದುಪಯೋಗ ಪಡಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.