ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆವಿಷ್ಕಾ ಫರ್ನಾಂಡೋ ಹಾಗೂ ಕುಸಾಲ್ ಪೆರೆರಾ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಈ ಇಬ್ಬರು ಟೂರ್ನಿಗೂ ಮುನ್ನ ಸಂಪೂರ್ಣ ಚೇತರಿಸಿಕೊಂಡರಷ್ಟೇ ಲಂಕಾ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಕೊಲಂಬೊ(ಆ.26): ಏಷ್ಯಾಕಪ್‌ಗೂ ಮುನ್ನ ಶ್ರೀಲಂಕಾಕ್ಕೆ ಭಾರಿ ಆಘಾತ ಎದುರಾಗಿದ್ದು, ಇಬ್ಬರು ಆಟಗಾರರು ಗಾಯಗೊಂಡರೆ, ಮತ್ತಿಬ್ಬರಿಗೆ ಕೋವಿಡ್ ದೃಢಪಟ್ಟಿದೆ. ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟರ್‌ಗಳಾದ ಕುಸಾಲ್ ಪೆರೆರಾ ಹಾಗೂ ಆವಿಷ್ಕಾ ಫೆರ್ನಾಂಡೊ ಅವರಲ್ಲಿ ಸೋಂಕು ಪತ್ತೆಯಾಗಿದೆ. ಇಬ್ಬರ ಮೇಲೂ ವೈದ್ಯರು ನಿಗಾ ಇಟ್ಟಿದ್ದು, ಟೂರ್ನಿಯಲ್ಲಿ ಆಡುವ ಬಗ್ಗೆ ಇನ್ನಷ್ಟೇ ಖಚಿತಗೊಳ್ಳಬೇಕಿದೆ. ಮತ್ತೊಂದೆಡೆ ವೇಗಿ ಚಮೀರ ಹಾಗೂ ತಾರಾ ಆಲ್ರೌಂಡರ್ ಹಸರಂಗ ಗಾಯಕ್ಕೆ ತುತ್ತಾಗಿದ್ದಾರೆ. ಚಮೀರ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದ್ದು, ಹಸರಂಗ ಕೆಲ ಪಂದ್ಯಗಳಿಗೆ ಅಲಭ್ಯರಾಗಬಹುದು ಎನ್ನಲಾಗುತ್ತಿದೆ.
ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಆವಿಷ್ಕಾ ಫರ್ನಾಂಡೋ ಹಾಗೂ ಕುಸಾಲ್ ಪೆರೆರಾ ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಇದೀಗ ಈ ಇಬ್ಬರು ಟೂರ್ನಿಗೂ ಮುನ್ನ ಸಂಪೂರ್ಣ ಚೇತರಿಸಿಕೊಂಡರಷ್ಟೇ ಲಂಕಾ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆವಿಷ್ಕಾ ಫರ್ನಾಂಡೋ ಹಾಗೂ ಕುಸಾಲ್ ಪೆರೆರಾ ಇಬ್ಬರಲ್ಲೂ ಕೋವಿಡ್ ಟೆಸ್ಟ್‌ಗೂ ಮುನ್ನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದಾದ ಬಳಿಕ ಟೆಸ್ಟ್‌ಗೆ ಒಳಗಾದಾಗ ಈ ಇಬ್ಬರಿಗೂ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.
undefined
ODI World Cup: ವಿಶ್ವಕಪ್ ಟಿಕೆಟ್ ಖರೀದಿಗೆ ಅಭಿಮಾನಿಗಳ ಹರಸಾಹಸ!
2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆಯಾದರೂ, ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ಪ್ರವಾಸ ಮಾಡಲು ಹಿಂದೇಟು ಹಾಕಿದ್ದರಿಂದ ಹೈಬ್ರೀಡ್ ಮಾದರಿಯಲ್ಲಿ ಪಾಕಿಸ್ತಾನ & ಶ್ರೀಲಂಕಾದಲ್ಲಿ ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಯೋಜನೆಗೊಂಡಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.
ಇನ್ನು ಇದುವರೆಗೂ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡಗಳು ಮುಂಬರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ತಮ್ಮ ತಂಡಗಳನ್ನು ಪ್ರಕಟಿಸಿಲ್ಲ. ಟೂರ್ನಿ ಆರಂಭಕ್ಕೆ ಇನ್ನು ಕೇವಲ 4 ದಿನಗಳು ಮಾತ್ರ ಬಾಕಿಯಿದ್ದು, ಸದ್ಯದಲ್ಲೇ ಎರಡು ತಂಡಗಳು ತಮ್ಮ ತಂಡದ ಆಟಗಾರರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.
ಆಫ್ಘನ್ ವಿರುದ್ಧ ಪಾಕ್‌ಗೆ 1 ವಿಕೆಟ್ ರೋಚಕ ಜಯ
ಹಂಬನ್‌ತೋಟ(ಶ್ರೀಲಂಕಾ): ಅಫ್ಘಾನಿಸ್ತಾನ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 1 ವಿಕೆಟ್ ರೋಚಕ ಜಯ ಸಾಧಿಸಿ, 3 ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್, ರಹ್ಮಾನುಲ್ಲಾ ಗುರ್ಬಾಜ್(151) ಆರ್ಭಟದಿಂದಾಗಿ 5 ವಿಕೆಟ್‌ಗೆ 300 ರನ್ ಕಲೆಹಾಕಿತು. ಗುರ್ಬಾಜ್-ಇಬ್ರಾಹಿಂ ಜದ್ರಾನ್(80) ಮೊದಲ ವಿಕೆಟ್‌ಗೆ 227 ರನ್ ಜೊತೆಯಾಟವಾಡಿದರು. ದೊಡ್ಡ ಗುರಿ ಬೆನ್ನತ್ತಿದ ಪಾಕ್ 1 ಎಸೆತ ಬಾಕಿ ಇರುವಂತೆ ಜಯಿಸಿತು. ಇಮಾಮ್ ಉಲ್ ಹಕ್(91), ಬಾಬರ್(53) ಉತ್ತಮ ಆಟವಾಡಿದರೆ, ಕೊನೆಯಲ್ಲಿ ಅಬ್ಬರಿಸಿದ ಶದಾಬ್ ಖಾನ್(48) ತಂಡವನ್ನು ಗೆಲ್ಲಿಸಿದರು. 24 ವೈಡ್ ಜೊತೆ 30 ಇತರೆ ಬಿಟ್ಟುಕೊಟ್ಟ ಆಫ್ಘನ್, ಏಕದಿನಲ್ಲಿ ಮೊದಲ ಬಾರಿ ಪಾಕ್ ವಿರುದ್ಧ ಗೆಲ್ಲುವ ಅವಕಾಶ ಕಳೆದುಕೊಂಡಿತು.
ಶ್ರೇಯಸ್ ಅಯ್ಯರ್ ಏಷ್ಯಾಕಪ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ..?
ಇಂಗ್ಲೆಂಡ್ ಕೌಂಟಿ: ಎಸ್ಸೆಕ್ಸ್ ತಂಡಕ್ಕೆ ವೇಗಿ ಉಮೇಶ್
ಚೆಮ್ಸ್‌ಫರ್ಡ್: ಭಾರತದ ವೇಗಿ ಉಮೇಶ್ ಯಾದವ್ ಇಂಗ್ಲೆಂಡ್‌ನ ಕೌಂಟಿ ತಂಡ ಎಸ್ಸೆಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಕನಿಷ್ಠ 3 ಪ್ರಥಮ ದರ್ಜೆ ಪಂದ್ಯಗಳನ್ನಾಡಲಿದ್ದಾರೆ. ಉಮೇಶ್ 2ನೇ ಬಾರಿಗೆ ಕೌಂಟಿಯಲ್ಲಿ ಪಾಲ್ಗೊಳ್ಳಲಿದ್ದು, ಕಳೆದ ಋತುವಿನಲ್ಲಿ ಮಿಡ್ಲ್‌ಸೆಕ್ಸ್ ತಂಡವನ್ನು ಪ್ರತಿನಿಧಿಸಿದ್ದರು.