ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ​ ಚಿಂತೆ ಹೆಚ್ಚಿಸಿದ ಕೆ ಎಲ್‌ ರಾಹುಲ್ ಫಿಟ್​ನೆಸ್..!

Published : Aug 26, 2023, 01:06 PM IST
ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ​ ಚಿಂತೆ ಹೆಚ್ಚಿಸಿದ ಕೆ ಎಲ್‌ ರಾಹುಲ್ ಫಿಟ್​ನೆಸ್..!

ಸಾರಾಂಶ

ರಾಹುಲ್ ಏಕದಿನ ವಿಶ್ವಕಪ್​ ಟೂರ್ನಿಯ ಸಂಭಾವ್ಯ ತಂಡದ ಭಾಗವಾಗಿದ್ದಾರೆ. ಇದ್ರಿಂದ ಫಿಟ್​ ಇಲ್ಲದಿದ್ದರೂ ರಾಹುಲ್​ಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ, ಏಷ್ಯಾಕಪ್​ ಮುಗಿಯೋದ್ರೊಳಗೆ ರಾಹುಲ್ ಫಿಟ್ ಆಗದೇ ಇದ್ದರೆ, ವಿಶ್ವಕಪ್ ಟೂರ್ನಿಯಿಂದ ಔಟಾಗಲಿದ್ದಾರೆ.ಇದರಿಂದ ಇಂಡಿಯಾಗೆ ಭಾರಿ ಹೊಡೆತ ಬೀಳಲಿದೆ.

ಬೆಂಗಳೂರು(ಆ.26): ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಔಟಾಗಿದ್ದ  ಕನ್ನಡಿಗ ಕೆ.ಎಲ್ ರಾಹುಲ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್​ ತಂಡಕ್ಕೆ ರಾಹುಲ್ ಆಯ್ಕೆಯಾಗಿದ್ದಾರೆ. ಆದ್ರೆ, ತಂಡಕ್ಕೆ ವಾಪಸ್ ಆಗಿದ್ರೂ, ರಾಹುಲ್ ಇನ್ನು ಫುಲ್‌ಫಿಟ್ ಆಗಿಲ್ಲ. ​ಇದರಿಂದ ಏಷ್ಯಾಕಪ್ ಟೂರ್ನಿಯಲ್ಲಿ ಲೀಗ್​ ಹಂತದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಇದೇ ಈಗ ತಂಡದ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್​ ಚಿಂತೆಗೆ ಕಾರಣ ವಾಗಿದೆ. 

ಏಷ್ಯಾಕಪ್ ಮುಗಿಯೋದ್ರೊಳಗೆ ಫುಲ್‌ಫಿಟ್ ಆಗ್ತಾರಾ ರಾಹುಲ್..? 

ಯೆಸ್, ರಾಹುಲ್ ಏಕದಿನ ವಿಶ್ವಕಪ್​ ಟೂರ್ನಿಯ ಸಂಭಾವ್ಯ ತಂಡದ ಭಾಗವಾಗಿದ್ದಾರೆ. ಇದ್ರಿಂದ ಫಿಟ್​ ಇಲ್ಲದಿದ್ದರೂ ರಾಹುಲ್​ಗೆ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ, ಏಷ್ಯಾಕಪ್​ ಮುಗಿಯೋದ್ರೊಳಗೆ ರಾಹುಲ್ ಫಿಟ್ ಆಗದೇ ಇದ್ದರೆ, ವಿಶ್ವಕಪ್ ಟೂರ್ನಿಯಿಂದ ಔಟಾಗಲಿದ್ದಾರೆ.ಇದರಿಂದ ಇಂಡಿಯಾಗೆ ಭಾರಿ ಹೊಡೆತ ಬೀಳಲಿದೆ.

ಏಷ್ಯಾಕಪ್ ಟೂರ್ನಿಗೂ ಮುನ್ನ ಲಂಕಾದ 2 ಸ್ಟಾರ್ ಆಟಗಾರರಿಗೆ ಕೊರೋನಾ ಪಾಸಿಟಿವ್! ಆತಂಕದಲ್ಲಿ ಲಂಕಾ ಪಾಳಯ

ತಂಡದ ಮಿಡಲ್​ ಆರ್ಡರ್‌ನ ಸ್ಟ್ರಾಂಗ್ ವೆಪೆನ್ ಕನ್ನಡಿಗ..! 

ಯೆಸ್, ಏಷ್ಯಾಕಪ್ ಮುಗಿಯೋದ್ರೊಳಗೆ ರಾಹುಲ್​ ಫುಲ್‌ಫಿಟ್ ಆಗಲೇಬೇಕು. ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲೇಬೇಕು. ಯಾಕಂದ್ರೆ . ರಾಹುಲ್ ತಂಡದ ಮಿಡಲ್ ಆರ್ಡರ್ ಬ್ಯಾಟಿಂಗ್‌ನ ಆಧಾರ ಸ್ಥಂಭವಾಗಿದ್ದಾರೆ. 4 ಮತ್ತು 5ನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್‌ನಿಂದ ಮಿಂಚಿದ್ದಾರೆ. ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 

ರಾಹುಲ್ ಈವರೆಗು 7 ಪಂದ್ಯಗಳಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ. 40.16ರ ಸರಾಸರಿಯಲ್ಲಿ 241 ರನ್ ಗಳಿಸಿದ್ದಾರೆ. ಒಂದು ಅರ್ಧಶತಕ ಸಿಡಿಸಿದ್ದಾರೆ. ಇನ್ನು 5ನೇ ಕ್ರಮಾಂಕದಲ್ಲಿ  18 ಇನ್ನಿಂಗ್ಸ್‌ಗಳನ್ನಾಡಿರೋ ಕೆ ಎಲ್‌ ರಾಹುಲ್, 53ರ ಸರಾಸರಿಯಲ್ಲಿ 742 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ 1 ಶತಕ 7 ಅರ್ಧಶತಕ ಸೇರಿವೆ.

ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಖಡಕ್ ವಾರ್ನಿಂಗ್..! ಏನಾಯ್ತು?

ಈ ಅಂಕಿ-ಅಂಶಗಳೇ ಮಿಡಲ್​ ಆರ್ಡರ್​ನಲ್ಲಿ ರಾಹುಲ್ ಎಷ್ಟು ಪವರ್​ಫುಲ್ ಅನ್ನೋದನ್ನ ಹೇಳುತ್ವೆ. ಇದರಿಂದ ವಿಶ್ವಕಪ್ ಟೂರ್ನಿ ರಾಹುಲ್ ಆಡ್ಲೇಬೇಕು. ಇನ್ನು ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯು ಮಿಂಚಬಲ್ಲರು. 

ಕನ್ನಡಿಗನ ಪಾಲಿಗೆ ಇಂಜುರಿಯೇ ವಿಲನ್..!

ಯೆಸ್, ರಾಹುಲ್ ಪಾಲಿಗೆ ಇಂಜುರಿಯೇ ವಿಲನ್ ಆಗಿದೆ. ಯಾಕಂದ್ರೆ, ಕರಿಯರ್ ಆರಂಭದಿಂದಲೂ ರಾಹುಲ್‌ಗೆ ಇಂಜುರಿ ಸಮಸ್ಯೆ ಕಾಡ್ತಿದೆ. ಇಂಟರ್​ನ್ಯಾಷನ್ ಕರಿಯರ್ ಶುರು ಮಾಡಿದಾಗಿನಿಂದ ಈವರೆಗು ಬರೋಬ್ಬರಿ 10 ಬಾರಿ ಇಂಜುರಿಗೆ ತುತ್ತಾಗಿ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅದೇನೆ ಇರಲಿ, ಆದಷ್ಟು ಬೇಗ ಫುಲ್‌ಫಿಟ್ ಅಗಲಿ, ಏಷ್ಯಾಕಪ್ ಟೂರ್ನಿಯಲ್ಲಿ ಅಬ್ಬರಿಸಲಿ ಅನ್ನೋದೆ ಕೋಟ್ಯಂತರ ಅಭಿಮಾನಿಗಳ ಆಶಯ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ