
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯ ಶ್ರೇಷ್ಠ ಆಟ ದಾಖಲಾಗಿದ್ದು 2016ರಲ್ಲಿ. ಆ ವರ್ಷ 4 ಶತಕ ಸೇರಿ ಬರೋಬ್ಬರಿ 973 ರನ್ ಕಲೆಹಾಕಿದ್ದರು. ಅದಾಗಿ 10 ವರ್ಷ ಕಳೆದರೂ ಕೊಹ್ಲಿಯ ಆಟದಲ್ಲಿ ಬದಲಾವಣೆಯಾಗಿಲ್ಲ. ಈ ವರ್ಷ ಅವರು 1 ಶತಕ ಸೇರಿ 600ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಜೊತೆಗೆ ಹಲವು ದಾಖಲೆಗಳನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸತತವಾಗಿ 4, ಒಟ್ಟಾರೆ 6 ಐಪಿಎಲ್ ಆವೃತ್ತಿಗಳಲ್ಲಿ ತಲಾ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ ವಿರಾಟ್ ಕೊಹ್ಲಿ. ಅವರು 2023-2026ರ 4 ಆವೃತ್ತಿಗಳಲ್ಲೂ ಈ ಸಾಧನೆ ಮಾಡಿದ್ದಾರೆ. ಕೆ.ಎಲ್.ರಾಹುಲ್ ಸತತವಾಗಿ 3 ಆವೃತ್ತಿಗಳಲ್ಲಿ 600+ ರನ್ ಸಾಧನೆ ಮಾಡಿದ್ದರು.
ಐಪಿಎಲ್‌ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಆಟಗಾರ ವಿರಾಟ್. ಅವರು ಲೀಗ್‌ನಲ್ಲಿ 283 ಪಂದ್ಯಗಳನ್ನಾಡಿದ್ದಾರೆ. ರೋಹಿತ್ 281 ಪಂದ್ಯಗಳನ್ನಾಡಿದ್ದು, 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಒಂದೂ ಪಂದ್ಯ ಆಡದಿದ್ದರೂ ಎಂ.ಎಸ್.ಧೋನಿ(278 ಪಂದ್ಯ) 3ನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ ಐಪಿಎಲ್‌ನಲ್ಲಿ 9000 ರನ್ ಪೂರ್ಣಗೊಳಿಸಿದ್ದು, ಈ ಮೈಲುಗಲ್ಲು ಸಾಧಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ 7183, ಶಿಖರ್ ಧವನ್ 6769, ಡೇವಿಡ್ ವಾರ್ನರ್ 6565 ರನ್ ಗಳಿಸಿದ್ದಾರೆ.
ಸಿಎಸ್‌ಕೆ ವಿರುದ್ಧ ಕೊಹ್ಲಿ ಒಟ್ಟು 1174 ರನ್ ಕಲೆಹಾಕಿದ್ದು, ಯಾವುದೇ ತಂಡದ ವಿರುದ್ಧ ಆಟಗಾರನೊಬ್ಬನ ಗರಿಷ್ಠ ರನ್. ಸಿಎಸ್‌ಕೆ ವಿರುದ್ಧ 36 ಪಂದ್ಯಗಳನ್ನಾಡಿದ್ದು, 37.87ರ ಸರಾಸರಿ, 128.3ರ ಸ್ಟ್ರೈಕ್‌ರೇಟ್‌ನಲ್ಲಿ 1174 ರನ್ ಸಿಡಿಸಿದ್ದಾರೆ. ಸಿಎಸ್‌ಕೆ ವಿರುದ್ಧ ಅವರ ಗರಿಷ್ಠ ಸ್ಕೋರ್ 90. ತಂಡವೊಂದರ ವಿರುದ್ಧ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ರೋಹಿತ್ 2ನೇ ಸ್ಥಾನದಲ್ಲಿದ್ದಾರೆ. ಅವರು ಕೋಲ್ಕತಾ ವಿರುದ್ಧ 36 ಪಂದ್ಯಗಳಲ್ಲಿ 1161 ರನ್ ಕಲೆಹಾಕಿದ್ದಾರೆ.
ಕೊಹ್ಲಿ 807 ಫೋರ್, 303 ಸಿಕ್ಸರ್: ಐಪಿಎಲ್ ದಾಖಲೆ
ಕೊಹ್ಲಿ ಐಪಿಎಲ್‌ನಲ್ಲಿ 800 ಫೋರ್‌ಗಳ ಮೈಲುಗಲ್ಲು ಸಾಧಿಸಿದ್ದು, ಈ ಸಾಧನೆ ಮಾಡಿದ ಮೊದಲ ಆಟಗಾರ. ಅವರು 300 ಸಿಕ್ಸರ್‌ಗಳ ಮೈಲುಗಲ್ಲು ಸಾಧಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಕ್ರಿಸ್ ಗೇಲ್ 357, ರೋಹಿತ್ 310 ಸಿಕ್ಸರ್ ಸಿಡಿಸಿದ್ದಾರೆ.
10 ಶತಕ: ಕೊಹ್ಲಿ ಟಿ20ಯಲ್ಲಿ 10 ಶತಕ ಬಾರಿಸಿದ್ದಾರೆ. ಇದು 3ನೇ ಜಂಟಿ ಗರಿಷ್ಠ. ಗೇಲ್ 22, ಬಾಬರ್ ಆಜಂ 13, ವಾರ್ನರ್ 10 ಶತಕ ಸಿಡಿಸಿದ್ದಾರೆ.
12 ಬಾರಿ: ಐಪಿಎಲ್‌ನ 19 ಆವೃತ್ತಿ ಪೈಕಿ 12ರಲ್ಲಿ ಕೊಹ್ಲಿ ತಲಾ 400+ ರನ್ ಕಲೆಹಾಕಿದ್ದಾರೆ. ಇದು ಯಾವುದೇ ಆಟಗಾರನ ಪೈಕಿ ಗರಿಷ್ಠ.
211 ಬಾರಿ: ಪುರುಷರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50+ ರನ್ ಜೊತೆಯಾಟದಲ್ಲಿ ಭಾಗಿಯಾದ ಆಟಗಾರ ವಿರಾಟ್. ಅವರು ಒಟ್ಟು 211 ಬಾರಿ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ 210 ಬಾರಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.