Match Fixing: ಫಿಕ್ಸಿಂಗ್ ಸುಳಿಯಲ್ಲಿ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಬ್ರೆಂಡನ್ ಟೇಲರ್..!

Suvarna News   | Asianet News
Published : Jan 25, 2022, 12:25 PM IST
Match Fixing: ಫಿಕ್ಸಿಂಗ್ ಸುಳಿಯಲ್ಲಿ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ಬ್ರೆಂಡನ್ ಟೇಲರ್..!

ಸಾರಾಂಶ

* ಭಾರತದಲ್ಲಿ ತಮಗೆ ಎದುರಾದ ಬ್ಲ್ಯಾಕ್‌ಮೇಲ್‌ ಪ್ರಕರಣ ತಡವಾಗಿ ಬಿಚ್ಚಿಟ್ಟ ಬ್ರೆಂಡನ್‌ ಟೇಲರ್‌ * ಮ್ಯಾಚ್‌ ಫಿಕ್ಸಿಂಗ್‌ ಮಾಡಲು ಬಲವಂತ ಮಾಡಿದ್ದಾಗಿ ತಿಳಿಸಿದ ಜಿಂಬಾಬ್ವೆ ಮಾಜಿ ನಾಯಕ * ಕುಟುಂಬದ ಸುರಕ್ಷತೆಗೆ ಹೆದರಿ ಐಸಿಸಿಗೆ ವಿಷಯ ತಿಳಿಸಲಿಲ್ಲ ಎಂದ ಟೇಲರ್

ನವದೆಹಲಿ(ಜ.25): ಭಾರತೀಯ ಮೂಲದ ಉದ್ಯಮಿ ತಮಗೆ ಮ್ಯಾಚ್‌ ಫಿಕ್ಸಿಂಗ್‌ (Match Fixing) ಮಾಡಲು ಬಲವಂತ ಮಾಡಿದ್ದರು ಮತ್ತು ಒಪ್ಪದಿದ್ದಕ್ಕೆ ಬ್ಲ್ಯಾಕ್‌ಮೇಲ್‌ (Blackmail) ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್‌ ಟೇಲರ್‌ (Brendan Taylor) ಬಿಚ್ಚಿಟ್ಟಿದ್ದಾರೆ. ಆದರೆ ಉದ್ಯಮಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಇದೇ ವೇಳೆ ಬ್ರೆಂಡನ್ ಟೇಲರ್ ತಾವು ಯಾವುದೇ ವಿಧವಾದ ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಸುದೀರ್ಘ ಹೇಳಿಕೆಯನ್ನು ಟ್ವೀಟರ್‌ನಲ್ಲಿ ಪ್ರಕಟಿಸಿದ ಅವರು, ‘ಉದ್ಯಮಿಯೊಬ್ಬರು 2019ರ ಅಟ್ಟೋಬರ್‌ನಲ್ಲಿ ತಮ್ಮನ್ನು ಪ್ರಾಯೋಜಕತ್ವ ಹಾಗೂ ಜಿಂಬಾಬ್ವೆಯಲ್ಲಿ ಟಿ20 ಲೀಗ್‌ ಆರಂಭಿಸುವ ಬಗ್ಗೆ ಚರ್ಚಿಸೋಣ ಎಂದು ಭಾರತಕ್ಕೆ ಆಹ್ವಾನಿಸಿದ್ದರು. ಮಾತುಕತೆ ವೇಳೆ ಮಾದಕ ದ್ರವ್ಯ (ಕೊಕೇನ್‌) ಸೇವಿಸುವಂತೆ ಮಾಡಿದ್ದರು. ಇದರ ವಿಡಿಯೋ ಚಿತ್ರೀಕರಿಸಿದ್ದ ಅವರು, ತಮಗಾಗಿ ಮ್ಯಾಚ್‌ ಫಿಕ್ಸಿಂಗ್‌ ಮಾಡಬೇಕು. ಇಲ್ಲದಿದ್ದರೆ ವಿಡಿಯೋ ವೈರಲ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದರು’ ಎಂದಿದ್ದಾರೆ.

15,000 ಅಮೆರಿಕನ್‌ ಡಾಲರ್‌(ಸುಮಾರು 11 ಲಕ್ಷ ರು) ಮುಂಗಡ ಹಣ ನೀಡಿ, ಕೆಲಸ ಪೂರ್ತಿಯಾದ ಮೇಲೆ ಇನ್ನೂ 20,000 ಅಮೆರಿಕನ್‌ ಡಾಲರ್‌ ನೀಡುವುದಾಗಿ ತಿಳಿಸಿದ್ದರು. ನನಗೆ ಬೇರೆ ದಾರಿ ತೋಚದೆ ಹಣ ಪಡೆದು ಜಿಂಬಾಬ್ವೆಗೆ ವಾಪಸ್‌ ಹೋದೆ. ಕುಟುಂಬದ ಸುರಕ್ಷತೆಗೆ ಹೆದರಿ ಐಸಿಸಿಗೆ ವಿಷಯ ತಿಳಿಸಲಿಲ್ಲ. 4 ತಿಂಗಳ ಬಳಿಕ ಐಸಿಸಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ICC Anti-Corruption Unit) ಮಾಹಿತಿ ನೀಡಿದೆ. ತಡವಾಗಿ ಮಾಹಿತಿ ನೀಡಿದ್ದಕ್ಕೆ ನನ್ನನ್ನು ಐಸಿಸಿ ನಿಷೇಧಕ್ಕೊಳಪಡಿಸಬಹುದು’ ಎಂದಿದ್ದಾರೆ.

‘ಭಾರತದಿಂದ ವಾಪಸಾದ ಬಳಿಕ ನಾನು ಮಾಡಿದ ತಪ್ಪಿನ ಅರಿವಾಯಿತು. ಮಾನಸಿಕವಾಗಿ ಕುಗ್ಗಿದ ನಾನು ವೈದ್ಯಕೀಯ ಚಿಕಿತ್ಸೆಯ ಮೊರೆ ಹೋದೆ’ ಎಂದು ಟೇಲರ್‌ ಟ್ವೀಟ್‌ ಮಾಡಿದ್ದಾರೆ. ಟೇಲರ್‌ರ ಈ ಹೇಳಿಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜಿಂಬಾಬ್ವೆ ಪರ ಟೇಲರ್‌ 205 ಏಕದಿನ, 34 ಟೆಸ್ಟ್‌ ಹಾಗೂ 45 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕಳೆದ ವರ್ಷ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಟಿ20: ಕೊನೆ ಓವರಲ್ಲಿ 30 ರನ್‌ ಬೆನ್ನತ್ತಿದ್ದ ವಿಂಡೀಸ್‌ಗೆ 1 ರನ್‌ ಸೋಲು!

ಬ್ರಿಡ್ಜ್‌ಟೌನ್‌: ಕೊನೆ ಓವರಲ್ಲಿ 28 ರನ್‌ ಸಿಡಿಸಿದ ಹೊರತಾಗಿಯೂ ಆತಿಥೇಯ ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 1 ರನ್‌ನಿಂದ ವಿರೋಚಿತ ಸೋಲುಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದೆ. ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ 8 ವಿಕೆಟ್‌ಗೆ 171 ರನ್‌ ಕಲೆ ಹಾಕಿತು. 

Lucknow Super Giants: ಕೆ.ಎಲ್‌. ರಾಹುಲ್ ನೇತೃತ್ವದ ಹೊಸ ಐಪಿಎಲ್ ತಂಡದ ಹೆಸರು ಅನಾವರಣ..!

ಜೇಸನ್‌ ರಾಯ್‌45, ಮೋಯಿನ್‌ ಅಲಿ 31 ರನ್‌ ಗಳಿಸಿದರು. ಕಠಿಣ ಗುರಿಬೆನ್ನತ್ತಿದ ವಿಂಡೀಸ್‌, 98 ರನ್‌ಗೆ 8 ವಿಕೆಟ್‌ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿತ್ತು. ಈ ವೇಳೆ ಅಬ್ಬರಿಸಿದ ರೊಮಾರಿಯೊ ಶೆಫೆರ್ಡ್‌(28 ಎಸೆತದಲ್ಲಿ 44 ರನ್‌), ಅಕೇಲ್‌ ಹೊಸೈನ್‌(16 ಎಸೆತದಲ್ಲಿ 44 ರನ್‌) ಇಂಗ್ಲೆಂಡ್‌ ತಂಡವನ್ನು ಕಾಡಿದರು. ಸಕೀಬ್‌ ಮೊಹಮದ್‌ ಎಸೆದ ಕೊನೆ ಓವರಲ್ಲಿ 30 ರನ್‌ ಬೇಕಿದ್ದಾಗ ಹೊಸೈನ್‌ 2 ಬೌಂಡರಿ, 3 ಸಿಕ್ಸರ್‌ ಸಿಡಿಸಿದರೂ ಗೆಲುವು ಕೈಗೆಟುಕಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಕಷ್ಟ ನಿವಾರಣೆಗೆ ಸಿಂಹಾಚಲಂ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವಿರಾಟ್ ಕೊಹ್ಲಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ