ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಶೀಂ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಕೌಂಟಿ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇದರ ಜತೆಗೆ ಕೊಲ್ಪಾಕ್ ಒಪ್ಪಂದಕ್ಕೂ ಸಹಿ ಹಾಕಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ.
ಲಂಡನ್(ಅ.30): ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಹಾಶೀಂ ಆಮ್ಲಾ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಜೊತೆ 2 ವರ್ಷಗಳ ಕೊಲ್ಪಾಕ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಶಕೀಬ್ ಅಲ್ ಹಸನ್ ಕ್ರಿಕೆಟ್'ನಿಂದ 2 ವರ್ಷ ಬ್ಯಾನ್..!
undefined
ಐಸಿಸಿ ಏಕದಿನ ವಿಶ್ವಕಪ್ ಬಳಿಕ ಆಗಸ್ಟ್‌ನಲ್ಲಿ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಪ್ರಸ್ತುತ ದಕ್ಷಿಣ ಆಫ್ರಿಕಾ ಪರ ಅತಿಹೆಚ್ಚು ಟೆಸ್ಟ್ ರನ್ ಕಲೆಹಾಕಿದ ದಾಖಲೆ ಹೊಂದಿದ್ದಾರೆ. 124 ಟೆಸ್ಟ್ ಪಂದ್ಯಗಳಿಂದ 46.64 ಸರಾಸರಿಯಲ್ಲಿ 9,282 ರನ್ ಪೇರಿಸಿದ್ದರು.
ಏನಿದು ಕೊಲ್ಪಾಕ್ ಒಪ್ಪಂದ..?
ಕೊಲ್ಪಾಕ್ ಒಪ್ಪಂದಕ್ಕೆ ಸಹಿ ಹಾಕುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರಬೇಕು. ಹಾಗೂ ವಿಶ್ವದ ಬೇರೆ ಯಾವುದೇ ತಂಡದ ಪರ ಆಡುವಂತಿಲ್ಲ. ಈ ಹಿಂದೆ ಮಾರ್ನೆ ಮಾರ್ಕೆಲ್ ಕೋಲ್ಪಾಕ್ ಒಪ್ಪಂದಕ್ಕೆ ಸಹಿಹಾಕಿದ್ದರು. ಮಾರ್ನೆ ಮಾರ್ಕೆಲ್ ಸಹಾ ಸರ್ರೆ ತಂಡದ ಪರ ಆಡುತ್ತಿದ್ದು, ಆಮ್ಲಾಗೆ ಸಾಥ್ ನೀಡಲಿದ್ದಾರೆ.
ಕೌಂಟಿ ಕ್ರಿಕೆಟ್'ನತ್ತ ಮುಖ ಮಾಡಿದ ಮಾರ್ಕೆಲ್; ಕೋಲ್ಪಾಕ್ ಒಪ್ಪಂದಕ್ಕೆ ಸಹಿ
ಹಾಶೀಂ ಆಮ್ಲಾ ದಕ್ಷಿಣ ಆಫ್ರಿಕಾ ಪರ 349 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 18,672 ರನ್ ಬಾರಿಸಿದ್ದಾರೆ. ಇದರಲ್ಲಿ ಶತಕ 55 ಹಾಗೂ 88 ಅರ್ಧಶತಕಗಳು ಸೇರಿವೆ. ಇನ್ನು ದಕ್ಷಿಣ ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಬಾರಿಸಿರುವ ಏಕೈಕ ಬ್ಯಾಟ್ಸ್'ಮನ್ ಎನಿಸಿರುವ ಆಮ್ಲಾ, ಏಕದಿನ ಕ್ರಿಕೆಟ್'ನಲ್ಲಿ ಅತಿವೇಗವಾಗಿ 2,3,4,5,6 ಹಾಗೂ 7 ಸಾವಿರ ರನ್ ಪೂರೈಸಿದ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಬರೆದಿದ್ದಾರೆ.