ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಕಿರೀಟ; ರಜತ್ ಪಾಟೀದಾರ್ ಹೋರಾಟ ವ್ಯರ್ಥ!

Published : Dec 16, 2024, 10:35 AM IST
ಮುಂಬೈಗೆ ಮುಷ್ತಾಕ್‌ ಅಲಿ ಟಿ20 ಕಿರೀಟ; ರಜತ್ ಪಾಟೀದಾರ್ ಹೋರಾಟ ವ್ಯರ್ಥ!

ಸಾರಾಂಶ

ಮುಂಬೈ ತಂಡವು ಮಧ್ಯಪ್ರದೇಶವನ್ನು ಐದು ವಿಕೆಟ್‌ಗಳಿಂದ ಸೋಲಿಸಿ ಮುಷ್ತಾಕ್ ಅಲಿ ಟ್ರೋಫಿ ಗೆದ್ದುಕೊಂಡಿತು. ರಜತ್ ಪಾಟೀದಾರ್ ಅವರ ಔಟಾಗದೆ 81 ರನ್‌ಗಳ ನೆರವಿನಿಂದ ಮಧ್ಯಪ್ರದೇಶ 174 ರನ್ ಗಳಿಸಿತು. ಸೂರ್ಯಕುಮಾರ್ ಯಾದವ್ (48), ರಹಾನೆ (37) ಮತ್ತು ಸೂರ್ಯಾನ್ಶ್ ಶೆಡ್ಗೆ (36*) ಅವರ ಅಮೋಘ ಬ್ಯಾಟಿಂಗ್‌ನಿಂದ ಮುಂಬೈ ಗೆಲುವು ಸಾಧಿಸಿತು. ಸೂರ್ಯಾನ್ಶ್ ಪಂದ್ಯಶ್ರೇಷ್ಠ ಮತ್ತು ರಹಾನೆ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಬೆಂಗಳೂರು: ದೇಸಿ ಕ್ರಿಕೆಟ್‌ನ ಕಿಂಗ್‌ ಎಂದೇ ಕರೆಸಿಕೊಳ್ಳುವ ಮುಂಬೈ ತಂಡ ಈ ಬಾರಿ ರಣಜಿ ಹಾಗೂ ಇರಾನಿ ಟ್ರೋಫಿ ಬಳಿಕ ರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಮುಂಬೈ ತಂಡ ಮಧ್ಯಪ್ರದೇಶವನ್ನು 5 ವಿಕೆಟ್‌ಗಳಿಂದ ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಮಧ್ಯಪ್ರದೇಶ 20 ಓವರಲ್ಲಿ 8 ವಿಕೆಟ್‌ಗೆ 174 ರನ್‌ ಕಲೆಹಾಕಿತು. ಆರಂಭಿಕ ವೈಫಲ್ಯಕ್ಕೊಳಗಾಗಿದದ ತಂಡ ಒಂದು ಹಂತದಲ್ಲಿ 9 ಓವರ್‌ಗೆ 54 ರನ್‌ಗೆ 4 ವಿಕೆಟ್‌ ಕಳೆದುಕೊಂಡಿತ್ತು. ಆದರೆ ನಾಯಕ ರಜತ್‌ ಪಾಟೀದಾರ್‌ ಅಬ್ಬರಿಸಿದರು. ಕೇವಲ 40 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ ಔಟಾಗದೆ 81 ರನ್‌ ಸಿಡಿಸಿದ ಅವರು, ತಂಡವನ್ನು 170ರ ಗಡಿ ದಾಟಿಸಿದರು. ಸುಬ್ರಾನ್ಶು ಸೇನಾಪತಿ 23, ರಾಹುಲ್‌ ಬಥಾಮ್‌ 19 ರನ್‌ ಗಳಿಸಿದರು. ಮುಂಬೈನ ಶಾರ್ದೂಲ್‌ ಠಾಕೂರ್‌, ರಾಯ್ಸ್‌ಟನ್‌ ತಲಾ 2 ವಿಕೆಟ್‌ ಕಿತ್ತರು.

ಇಂಡೋ-ಆಸೀಸ್ 3ನೇ ಟೆಸ್ಟ್ ಡ್ರಾ ಆದ್ರೆ WTC ಫೈನಲ್‌ ತಲುಪುತ್ತಾ ಟೀಂ ಇಂಡಿಯಾ? ಇಲ್ಲಿದೆ ಹೊಸ ಲೆಕ್ಕಾಚಾರ

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ 17.5 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ಪೃಥ್ವಿ ಶಾ(10), ನಾಯಕ ಶ್ರೇಯಸ್ ಅಯ್ಯರ್‌(19) ಬೇಗನೇ ಔಟಾದರೂ, ಸೂರ್ಯಕುಮಾರ್‌ ಯಾದವ್‌(35 ಎಸೆತಕ್ಕೆ 48), ಅಜಿಂಕ್ಯಾ ರಹಾನೆ(37), ಸೂರ್ಯಾನ್ಶ್‌ ಶೆಡ್ಗೆ(15 ಎಸೆತಕ್ಕೆ ಔಟಾಗದೆ 36) ಅಬ್ಬರದ ಆಟವಾಡಿ ತಂಡವನ್ನು ಗೆಲ್ಲಿಸಿದರು.

ಸ್ಕೋರ್: ಮಧ್ಯಪ್ರದೇಶ 20 ಓವರಲ್ಲಿ 174/8 (ರಜತ್‌ 81, ಸುಬ್ರಾನ್ಶು 23, ರಾಯ್‌ಸ್ಟನ್‌ 2-32, ಶಾರ್ದೂಲ್‌ 2-41), ಮುಂಬೈ 17.5 ಓವರಲ್ಲಿ 180/5 (ಸೂರ್ಯಕುಮಾರ್‌ 48, ರಹಾನೆ 27, ಸೂರ್ಯಾನ್ಶ್‌ 36*, ತ್ರಿಪುರೇಶ್‌ 2-34)

ಪಂದ್ಯಶ್ರೇಷ್ಠ: ಸೂರ್ಯಾನ್ಶ್‌ ಶೆಡ್ಗೆ, ಸರಣಿ ಶ್ರೇಷ್ಠ: ಅಜಿಂಕ್ಯಾ ರಹಾನೆ.

ಟಿ20: ಭಾರತ ವನಿತೆಯರಿಗೆ ಜಯ

ಮುಂಬೈ: ವೆಸ್ಟ್‌ಇಂಡೀಸ್‌ ವಿರುದ್ಧ ಭಾರತ ಮಹಿಳಾ ತಂಡ ಮೊದಲ ಟಿ20 ಪಂದ್ಯದಲ್ಲಿ 49 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ಭಾರತ 20 ಓವರಲ್ಲಿ 4 ವಿಕೆಟ್‌ಗೆ 194 ರನ್‌ ಕಲೆಹಾಕಿತು. ಜೆಮಿಮಾ ರೋಡ್ರಿಗ್ಸ್‌ 35 ಎಸೆತಗಳಲ್ಲಿ 73, ಸ್ಮೃತಿ ಮಂಧನಾ 33 ಎಸೆತಗಳಲ್ಲಿ 54 ರನ್‌ ಸಿಡಿಸಿದರು. 

ಮುಷ್ತಾಕ್‌ ಅಲಿ ಟಿ20 ಟ್ರೋಫಿ: ಬೆಂಗ್ಳೂರಲ್ಲಿಂದು ಮುಂಬೈ vs ಮಧ್ಯ ಪ್ರದೇಶ ಫೈನಲ್‌ ಫೈಟ್

ಬೃಹತ್‌ ಗುರಿ ಬೆನ್ನತ್ತಿದ ವಿಂಡೀಸ್‌ 7 ವಿಕೆಟ್‌ಗೆ 146 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಡಿಯಾಂಡ್ರ ಡೊಟಿನ್‌ 28 ಎಸೆತಗಳಲ್ಲಿ 52, ಕ್ವಿಯಾನ ಜೋಸೆಫ್‌ 33 ಎಸೆತಗಳಲ್ಲಿ 49 ರನ್‌ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!