Team India : ರವಿಶಾಸ್ತ್ರಿ, ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸಲು ಧೋನಿ ಮೆಂಟರ್ ಆಗಿದ್ರು!

By Suvarna NewsFirst Published Dec 23, 2021, 8:24 PM IST
Highlights

ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಭಾರತೀಯ ಕ್ರಿಕೆಟ್ ಅನ್ನು ನಿಯಂತ್ರಿಸುತ್ತಿದ್ದರು
ಧೋನಿ ಮೆಂಟರ್ ಆಗಿ ನೇಮಕ ಮಾಡಲು ಇದೇ ಕಾರಣ
ಟೀಂ ಇಂಡಿಯಾ ಮಾಜಿ ವೇಗಿ ಅತುಲ್ ವಾಸನ್ ಶಾಕಿಂಗ್ ಹೇಳಿಕೆ

ಮುಂಬೈ (ಡಿ. 23): ಭಾರತೀಯ ಕ್ರಿಕೆಟ್ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri ) ಹಾಗೂ ಟೆಸ್ಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಹೇಳುವಂಥ ದಾರಿಯಲ್ಲಿ ಸಾಗಬಾರದು. ಇವರನ್ನು ನಿಯಂತ್ರಿಸುವ ಸಲುವಾಗಿಯೇ ಕಳೆದ ಟಿ20 ವಿಶ್ವಕಪ್ (T20 World Cup)ವೇಳೆ ಎಂಎಸ್ ಧೋನಿ (MS Dhoni) ಟೀಂ ಇಂಡಿಯಾ ಮೆಂಟರ್ (Mentor) ಆಗಿ ತಂಡ ಸೇರಿದ್ದರು ಎಂದು ಭಾರತ ತಂಡದ ಮಾಜಿ ವೇಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಟಿ20 ವಿಶ್ವಕಪ್ ವೇಳೆ ಎಂಎಸ್ ಧೋನಿ ಅವರನ್ನು ಬಿಸಿಸಿಐ ಮೆಂಟರ್ ಆಗಿ ಆಯ್ಕೆ ಮಾಡಿ ಘೋಷಣೆ ಮಾಡಿದ್ದಾಗ ಇಡೀ ದೇಶವೇ ವಿಶ್ವಕಪ್ ಗೆದ್ದ ರೀತಿಯಲ್ಲಿ ಸಂಭ್ರಮಿಸಿತ್ತು. ಆದರೆ, ಈ ಸಂಭ್ರಮ ಬಹುಕಾಲ ಉಳಿಯಲಿಲ್ಲ. ಟೀಂ ಇಂಡಿಯಾ ಕನಿಷ್ಠ ಸೆಮಿಫೈನಲ್ ಹಂತಕ್ಕೇರಲೂ ಸಾಧ್ಯವಾಗದೇ ಹೊರಬಿದ್ದಿತ್ತು. ವಿರಾಟ್ ಕೊಹ್ಲಿಗೆ ಟಿ20 ತಂಡದ ನಾಯಕನಾಗಿ ಹಾಗೂ ರವಿಶಾಸ್ತ್ರಿಗೆ ತಂಡದ ಕೋಚ್ ಆಗಿ ಇದು ಕೊನೆಯ ಟೂರ್ನಿ ಆಗಿತ್ತು.

ರವಿಶಾಸ್ತ್ರಿ ಅವರ ಅವಧಿ ಮುಗಿಯುವ ಹಂತವಾಗಿದ್ದ ಕಾರಣ ಟಿ20 ವಿಶ್ವಕಪ್ ಬಳಿಕ ಮತ್ತೆ ಕೋಚ್ ಆಗಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದರೆ, ಟಿ20 ವಿಶ್ವಕಪ್ ಬಳಿಕ ಟಿ20 ಮಾದರಿಯ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ವಿಶ್ವಕಪ್ ಗೂ ಮುನ್ನ ಘೋಷಣೆ ಮಾಡಿದ್ದರು. ವಿಶ್ವಕಪ್ ಗೆ ತಂಡ ಪ್ರಕಟಿಸುವ ವೇಳೆ ಎಂಎಸ್ ಧೋನಿ ಅವರನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದ ಕುರಿತಾಗಿ ಮಾತನಾಡಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (BCCI president Sourav Ganguly) ಹಾಗೂ ಕಾರ್ಯದರ್ಶಿ ಜಯ್ ಷಾ (Jay Shah) ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿ ಅಗಾಧ ಅನುಭವ ಇರುವ ಎಂಎಸ್ ಧೋನಿ ಅವರಿಂದ ಉಪಯುಕ್ತ ಸಲಹೆ ಸಿಗಬಹುದು ಎನ್ನುವುದಕ್ಕಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಿದ್ದಾಗಿ ಹೇಳಿದ್ದರು.

ಆದರೆ ಈ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿರುವ ಭಾರತ ತಂಡದ ಮಾಜಿ ವೇಗಿ (Former India Pacer) ಅತುಲ್ ವಾಸನ್, "ಭಾರತೀಯ ಕ್ರಿಕೆಟ್ ನಲ್ಲಿ (Indian Cricket) ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸುವ ಸಲುವಾಗಿಯೇ ಎಂಎಸ್ ಧೋನಿ ಅವರನ್ನು ವಿಶ್ವಕಪ್ ಗೆ ಮೆಂಟರ್ ಆಗಿ ಬಿಸಿಸಿಐ ಅಯ್ಕೆ ಮಾಡಿತ್ತು' ಎಂದು ಹೇಳಿದ್ದಾರೆ. ನಾನು ನಿಮಗೆ ನೇರವಾಗಿ ವಿಚಾರವನ್ನು ಹೇಳುತ್ತೇನೆ. ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಲುವಾಗಿ ಧೋನಿಯನ್ನು ಮೆಂಟರ್ ಆಗಿ ಆರಿಸಲಾಗಿತ್ತು. ಪಂದ್ಯದಲ್ಲಿ ಯಾರೆಲ್ಲಾ ಆಡಲು ಬಯಸುತ್ತಾರೆಯೂ ಅವರೆಲ್ಲರನ್ನೂ ಕೊಹ್ಲಿ ಹಾಗೂ ರವಿಶಾಸ್ತ್ರಿ ಸಂಪೂರ್ಣವಾಗಿ ನಿರ್ವಹಣೆ ಮಾಡುತ್ತಾರೆ. ಮುಕ್ತವಾಗಿ ಆಡಲು ಬಿಡುವುದಿಲ್ಲ ಎನ್ನುವ ಭಾವನೆ ತಂಡದ ಕೆಲವು ಸದಸ್ಯರಲ್ಲಿತ್ತು ಎಂದು ಅತುಲ್ ವಾಸನ್ (Atul Wassan) ಹೇಳಿದ್ದಾರೆ.

Virushka Thanks Media: ಮಗಳ ಪ್ರೈವಸಿ ಕಾಪಾಡಿದ ಪಾಪಾರಾಜಿಗಳಿಗೆ ಥ್ಯಾಂಕ್ಸ್‌ ಎಂದ ವಿರುಷ್ಕಾ
ಒಟ್ಟಾರೆಯಾಗಿ ಅವರು ಭಾರತೀಯ ಕ್ರಿಕೆಟ್ ಅನ್ನು ನಿಯಂತ್ರಣ ಮಾಡುತ್ತಿದ್ದರು. ಅವರಷ್ಟೇ ಅನುಭವಿಯಾದ ಮತ್ತೊಬ್ಬ ವ್ಯಕ್ತಿ ತಂಡದಲ್ಲಿದ್ದರೆ, ಇವರ ನಡವಳಿಕೆಯನ್ನು ಗಮನಿಸುವುದರೊಂದಿಗೆ ತಂಡದಲ್ಲಿ ಸಮತೋಲನ ತರಲು ಕೂಡ ಸಹಾಯ ಮಾಡುತ್ತಾರೆ ಎಂದು ಬಿಸಿಸಿಐ ಅಂದಾಜು ಮಾಡಿತ್ತು. ಆದರೆ, ವಿಶ್ವಕಪ್ ವೇಳೆ ಇದನ್ನು ನಿಭಾಯಿಸಲು ಬಿಸಿಸಿಐಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

Sachin Tendulkar Advice for India Batters : ಕ್ರಿಕೆಟ್ ಅಭ್ಯಾಸ ಮಾಡ್ತಾ ಇದ್ರೆ, ನಿಮಗೂ ಇದು ಹೆಲ್ಪ್ ಆಗುತ್ತೆ!
ಇನ್ನು ರೋಹಿತ್ ಶರ್ಮ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದರಿಂದ ಬಿಸಿಸಿಐ (BCCI) ಯಾವ ತಪ್ಪನ್ನೂ ಮಾಡಿಲ್ಲ. "ಭಾರತದಲ್ಲಿ ನೀವು ಸಾಕಷ್ಟು ಕ್ರಿಕೆಟ್ ಆಡಿದರೆ, ಹೆಚ್ಚೂ ಕಡಿಮೆ ದೇವರ ರೀತಿ ಆಗುತ್ತೀರಿ. ಆಗ ಆಟಗಾರ ಕೂಡ ಇದರ ಲಾಭ ಪಡೆದುಕೊಳ್ಳಲು ಯತ್ನಿಸುತ್ತಾನೆ. ಕೆಲವು ವಿಶೇಷ ವ್ಯವಸ್ಥೆಗಳು ಬೇಕು ಎಂದು ಆಗ್ರಹ ಮಾಡುತ್ತಾನೆ. ಈ ವ್ಯವಸ್ಥೆಯಲ್ಲಿಯೇ ಬದಲಾವಣೆ ಆಗಬೇಕಿದೆ ಎಂದು ವಿವರಣೆ ನೀಡಿದರು.

click me!