ಧೋನಿಗಿಂತ ಮೊದಲೇ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದ ಅಜರುದ್ದೀನ್..!

By Suvarna NewsFirst Published May 13, 2021, 6:25 PM IST
Highlights

* ಮಹೇಂದ್ರ ಸಿಂಗ್ ಧೋನಿಯಿಂದ ಹೆಲಿಕಾಪ್ಟರ್ ಶಾಟ್ ಫೇಮಸ್‌

* ಧೋನಿ ಹೆಲಿಕಾಪ್ಟರ್‌ ಶಾಟ್‌ಗೆ ತನ್ನದೇ ಆದ ಅಭಿಮಾನಿ ಬಳಗವಿದೆ.

* ಧೋನಿಗಿಂತಲೂ ಮೊದಲೇ ಹೆಲಿಕಾಪ್ಟರ್ ಶಾಟ್ ಬಾರಿಸಿದ್ದು ಮೊಹಮ್ಮದ್ ಅಜರುದ್ದೀನ್

ನವದೆಹಲಿ(ಮೇ.13): ಕ್ರಿಕೆಟ್ ಜಗತ್ತಿನಲ್ಲಿ ಹೆಲಿಕಾಪ್ಟರ್ ಶಾಟ್ ಪರಿಚಯಿಸಿದ ಕೀರ್ತಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿಗೆ ಸಲ್ಲುತ್ತದೆ. ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗಳಿಗೆ ಚಂಡನ್ನಟ್ಟುವ ಸಾಮರ್ಥ್ಯ ಹೊಂದಿರುವ ಧೋನಿ, ತಮ್ಮ ಹೆಲಿಕಾಪ್ಟರ್ ಶಾಟ್‌ಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಯಾರ್ಕರ್‌ ಲೆಂಗ್ತ್ ಚೆಂಡನ್ನು ಸಿಕ್ಸರ್‌ಗಟ್ಟುವುದು ಸುಲಭದ ಮಾತಲ್ಲ. ಆದರೆ ಧೋನಿ ಹೆಲಿಕಾಪ್ಟರ್ ಶಾಟ್‌ ಪ್ರಖ್ಯಾತಗೊಳಿಸುವ ಮುನ್ನವೇ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್‌ ಹೆಲಿಕಾಪ್ಟರ್‌ ಶಾಟ್ ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. 

90ರ ದಶಕದಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅಜರುದ್ದೀನ್, ದಕ್ಷಿಣ ಆಫ್ರಿಕಾ ವೇಗಿ ಲಾನ್ಸ್‌ ಕ್ಲೂಸ್ನರ್‌ ಒಂದೇ ಓವರ್‌ನಲ್ಲಿ ಸತತ 5 ಬೌಂಡರಿ ಬಾರಿಸಿ ಅಬ್ಬರಿಸಿದ್ದರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ವೇಳೆಯೇ ಅಜರುದ್ದೀನ್ ಬ್ಯಾಟ್‌ನಿಂದ ಹೆಲಿಕಾಪ್ಟರ್ ಶಾಟ್ ಮೂಡಿ ಬಂದಿತ್ತು.

ಟೆಸ್ಟ್ ರ‍್ಯಾಂಕಿಂಗ್‌: ನಂ.1 ಸ್ಥಾನ ಕಾಯ್ದುಕೊಂಡ ಟೀಂ ಇಂಡಿಯಾ

ಕೋಲ್ಕತದ ಈಡನ್‌ಗಾರ್ಡನ್‌ ಮೈದಾನದಲ್ಲಿ ಕ್ಲೂಸ್ನರ್‌ ಬೌಲಿಂಗ್‌ನ ಮೊದಲ 4 ಎಸೆತಗಳಲ್ಲಿ 4 ಪುಲ್ ಶಾಟ್‌ ಮೂಲಕ ಚಂಡನ್ನು ಬೌಂಡರಿಗಟ್ಟಿದ್ದರು. ಬಳಿಕ 5ನೇ ಎಸೆತವನ್ನು ಅಜರುದ್ದೀನ್‌ ಹೆಲಿಕಾಪ್ಟರ್ ಶಾಟ್ ಮೂಲಕ ಚಂಡನ್ನು ಬೌಂಡರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಆ ಪಂದ್ಯದಲ್ಲಿ ಅಜರುದ್ದೀನ್ ಕೇವಲ 77 ಎಸೆತಗಳಲ್ಲಿ 109 ರನ್‌ ಬಾರಿಸಿದ್ದರು.

ಹೀಗಿದೆ ನೋಡಿ ಅಜರುದ್ದೀನ್‌ ಹೆಲಿಕಾಪ್ಟರ್ ಶಾಟ್ ಬಾರಿಸಿದ ವಿಡಿಯೋ:

1985ರ ಜನವರಿಯಲ್ಲಿ ಇಂಗ್ಲೆಂಡ್‌ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅಜರುದ್ದೀನ್, 99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 6215 ಹಾಗೂ 9378 ರನ್‌ ಬಾರಿಸಿದ್ದಾರೆ. ಇನ್ನು 221 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
 

click me!