
ಮುಂಬೈ(ಮೇ.13): ಮಹೇಂದ್ರ ಸಿಂಗ್ ಧೋನಿ ತಮ್ಮ ಚಾಣಾಕ್ಷ ನಿರ್ಧಾರಗಳಿಂದಾಗಿ ಬಹಳ ವರ್ಷಗಳ ಕಾಲ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಟಿ20, ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿ ಹೀಗೆ ಮೂರು ಐಸಿಸಿ ಟ್ರೋಫಿ ಗೆದ್ದ ಏಕೈಕ ನಾಯಕ ಎನ್ನುವ ಅಪರೂಪದ ಗರಿ ಧೋನಿ ಹೆಸರಿನಲ್ಲಿದೆ. ಇದರ ಜೊತೆಗೆ ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಸಿಟ್ಟಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹೇಳಿದ್ದಾರೆ. ವೆಬ್‌ಸೈಟ್‌ವೊಂದರ ಜೊತೆ ಮಾತನಾಡುವ ವೇಳೆ ಇರ್ಫಾನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರತಿ ಬಾರಿ ಕ್ರೀಸ್ಗಿಳಿದಾಗ ಮೊದಲ 10 ಎಸೆತಗಳನ್ನು ಎದುರಿಸುವಾಗ ಒತ್ತಡವಿರುತ್ತೆ: ಧೋನಿ
2006-07ರಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಧೋನಿ ಔಟಾದರು. ಸಿಟ್ಟಾದ ಧೋನಿ ಮೈದಾನದಲ್ಲಿ ತಮ್ಮ ಬ್ಯಾಟ್ ಮೇಲಕ್ಕೆ ಎಸೆದು ತಮ್ಮ ಅಸಮಾಧಾನ ತೋರಿದ್ದರು. ಡ್ರೆಸ್ಸಿಂಗ್ ಕೊಠಡಿಯಲ್ಲಿ ಕೂಗಾಡಿದ್ದರು. ನಂತರ ಅಭ್ಯಾಸಕ್ಕೆ ತಡವಾಗಿ ಹಾಜರಾದರು ಎಂದು ಇರ್ಫಾನ್ ಹೇಳಿದ್ದಾರೆ. ಗಂಭೀರ್ ಕೂಡಾ ಧೋನಿಯ ಸಿಟ್ಟನ್ನು ಮೆಲುಕು ಹಾಕಿದ್ದಾರೆ.
ಧೋನಿ ಐಸಿಸಿ ಮೂರು ಟ್ರೋಫಿಗಳನ್ನು ಮಾತ್ರವಲ್ಲ, 3 ಐಪಿಎಲ್ ಟ್ರೋಫಿಗಳನ್ನು ಜಯಿಸಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ಅವರ ಕ್ರಿಕೆಟ್ ಬದುಕಿನ ಬಗ್ಗೆ ಅನಿಶ್ಚಿತತೆ ಮುಂದುವರೆದಿದೆ.
ಧೋನಿಗೆ ಅಷ್ಟೊಂದು ವಯಸ್ಸಾಗಿಲ್ಲ: ತಾಯಿ
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿಗೆ ಅಷ್ಟೊಂದು ವಯಸ್ಸಾಗಿಲ್ಲ ಎಂದು ಅವರ ತಾಯಿ ದೇವಕಿ ದೇವಿ ಹೇಳಿದ್ದಾರೆ. ವಿಶ್ವ ತಾಯಂದಿರ ದಿನದ ಅಂಗವಾಗಿ ಧೋನಿ ಅವರ ತಾಯಿಯನ್ನು ಸ್ಥಳೀಯ ಮಾಧ್ಯಮವೊಂದು ಸಂದರ್ಶನ ನಡೆಸಿದೆ.
ಈ ವೇಳೆ ಧೋನಿ ಅವರ ಬಿಳಿ ಗಡ್ಡ ಇರುವ ಫೋಟೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ದೇವಕಿ ದೇವಿ, ನನ್ನ ಮಗನಿಗೆ ಈ ಫೋಟೋದಲ್ಲಿ ಕಾಣಿಸುವಷ್ಟು ವಯಸ್ಸಾಗಿಲ್ಲ. ಯಾವುದೇ ಮಗ ತಾಯಿ ಪಾಲಿಗೆ ಎಂದಿಗೂ ವಯಸ್ಸಾದಂತೆ ಕಾಣುವುದಿಲ್ಲ ಎಂದು ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.