ಭಾರತ ವಿರುದ್ಧ ಸರಣಿ: ಲಂಕಾಗೆ 107 ಕೋಟಿ ರುಪಾಯಿ ಆದಾಯ !

By Suvarna NewsFirst Published Aug 13, 2021, 7:52 AM IST
Highlights

* ಇಂಡೋ-ಲಂಕಾ ಸರಣಿಯಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಭರ್ಜರಿ ಲಾಭ

* ಶ್ರೀಲಂಕಾ ವಿರುದ್ದ ಸೀಮಿತ ಓವರ್‌ಗಳ ಸರಣಿಯನ್ನಾಡಿದ್ದ ಟೀಂ ಇಂಡಿಯಾ

* ಭಾರತದ ಲಂಕಾ ಪ್ರವಾಸದಿಂದ ಲಂಕಾ ಮಂಡಳಿಗೆ 107 ಕೋಟಿ ರುಪಾಯಿ ಲಾಭ

ಕೊಲಂಬೋ(ಆ.13): ಇತ್ತೀಚಿಗೆ ನಡೆದ ಭಾರತ ವಿರುದ್ಧದ ಏಕದಿನ, ಟಿ20 ಸರಣಿಯಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಹಣದ ಹೊಳೆಯೇ ಹರಿದು ಬಂದಿದೆ. 

‘ಭಾರತ ವಿರುದ್ಧದ ಸರಣಿಯಿಂದ ನಮಗೆ 107 ಕೋಟಿ ರುಪಾಯಿ ಆದಾಯ ಬಂದಿದೆ ಎಂದು ಲಂಕಾ ಕ್ರಿಕೆಟ್‌ ಮಂಡಳಿ ಕಾರ್ಯದರ್ಶಿ ಮೋಹನ್‌ ಡಿಸಿಲ್ವಾ ತಿಳಿಸಿದ್ದಾರೆ. ಶಿಖರ್‌ ಧವನ್‌ ನಾಯಕತ್ವದಲ್ಲಿ ಭಾರತ ತಂಡ ಲಂಕಾ ವಿರುದ್ಧ 3ಏಕದಿನ, 3 ಟಿ20 ಪಂದ್ಯಗಳನ್ನು ಆಡಿತ್ತು. ಮೊದಲು ಏಕದಿನ ಸರಣಿ ಮಾತ್ರ ನಿಗದಿಯಾಗಿದ್ದರೂ ಲಂಕಾ ಮಂಡಳಿಯ ಮನವಿ ಮೇರೆಗೆ ಟಿ20 ಸರಣಿಯನ್ನೂ ಆಡಲು ಬಿಸಿಸಿಐ ಒಪ್ಪಿಗೆ ಸೂಚಿಸಿತ್ತು.

ಲಾರ್ಡ್ಸ್ ಮೈದಾನದಲ್ಲಿ ಕೆಎಲ್ ರಾಹುಲ್ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ!

ಮೂರು ಪಂದ್ಯಗಳ ಏಕದಿನ ಸರಣಿಯನ್ನು ಶಿಖರ್ ಧವನ್‌ ನೇತೃತ್ವದ ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತ್ತು. ಇನ್ನು ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ಜಯಿಸಿ 1-0 ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಭಾರತದ ಪಾಳಯದಲ್ಲಿ ಕೋವಿಡ್ ಕಾಣಿಸಿಕೊಂಡು ಕೆಲವು ಆಟಗಾರರು ಕ್ವಾರಂಟೈನ್‌ಗೆ ಒಳಗಾದರು. ಇನ್ನು ಹೊಸ ಆಟಗಾರರೊಂದಿಗೆ ಕಣಕ್ಕಿಳಿದ ಟೀಂ ಇಂಡಿಯಾ ಉಳಿದೆರಡು ಪಂದ್ಯಗಳಲ್ಲಿ ಮುಗ್ಗರಿಸಿತ್ತು.
 

click me!