ಲಾರ್ಡ್ಸ್ ಮೈದಾನದಲ್ಲಿ ಕೆಎಲ್ ರಾಹುಲ್ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ!

By Suvarna NewsFirst Published Aug 12, 2021, 11:06 PM IST
Highlights
  • ಲಾರ್ಡ್ಸ್ ಮೈದಾನದಲ್ಲಿ ಕೆಎಲ್ ರಾಹುಲ್ ಸೆಂಚುರಿ
  • ಶತಕ ಸಿಡಿಸಿ ದಾಖಲೆ ಬರೆದ ರಾಹುಲ್
  • ಬೃಹತ್ ಮೊತ್ತದತ್ತ ಟೀಂ ಇಂಡಿಯಾ

ಲಂಡನ್(ಆ.12): ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದ ಮೊದಲ ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ರೋಹಿತ್ ಶರ್ಮಾ ಕೇವಲ 17 ರನ್‌ಳಿಂದ ಶತಕ ಮಿಸ್ ಮಾಡಿಕೊಂಡರೆ, ಕೆಎಲ್ ರಾಹುಲ್ ಸೆಂಚುರಿ ಕೊರಗನ್ನು ನೀಗಿಸಿದ್ದಾರೆ. ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

2ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ 126 ರನ್ ಜೊತೆಯಾಟ ನೀಡಿದರು. ರೋಹಿತ್ 83 ರನ್ ಸಿಡಿಸಿ ಔಟಾದರು. ಆದರೆ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ ಭರ್ಜರಿ ಶತಕ ಸಿಡಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ 6ನೇ ಶತಕವಾಗಿದೆ.

ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿದ ಆರಂಭಿಕರದಲ್ಲಿ ಟೀಂ ಇಂಡಿಯಾದ 3ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ರಾಹುಲ್ ಪಾತ್ರರಾದರು.

ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿದ ಭಾರತದ ಆರಂಭಿಕರು
184 ವಿನು ಮಂಕಡ್ (1952)
102* ಕೆಎಲ್ ರಾಹುಲ್( 2021)
100 ರವಿ ಶಾಸ್ತ್ರಿ(1990)

ಏಷ್ಯಾದ ಹೊರಗೆ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಪಟ್ಟಿಯಲ್ಲಿ ರಾಹುಲ್, ದಿಗ್ಗಜ ವಿರೇಂದ್ರ ಸೆಹ್ವಾಗ್ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ. ಸೆಹ್ವಾಗ್ ಹಾಗೂ ರಾಹುಲ್ 4 ಸೆಂಚುರಿ ಸಿಡಿಸಿದ್ದಾರೆ.

ಏಷ್ಯಾಹೊರಭಾಗದಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಭಾರತದ ಆರಂಭಿಕ ಬ್ಯಾಟ್ಸ್‌ಮನ್!
15 ಸುನಿಲ್ ಗವಾಸ್ಕರ್
4 ವಿರೇಂದ್ರ ಸೆಹ್ವಾಗ್/ ಕೆಎಲ್ ರಾಹುಲ್
3 ವಿನು ಮಂಕಡ್/ ರವಿ ಶಾಸ್ತ್ರಿ 

click me!