IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ

Kannadaprabha News   | Asianet News
Published : Feb 28, 2020, 12:01 PM ISTUpdated : Feb 28, 2020, 12:02 PM IST
IPL ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾದ MS ಧೋನಿ

ಸಾರಾಂಶ

ಯಶಸ್ವಿ ನಾಯಕ, ಚಾಣಾಕ್ಷ ವಿಕೆಟ್‌ಕೀಪರ್, ಗ್ರೇಟ್ ಮ್ಯಾಚ್ ಫಿನೀಷರ್ ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಕೃಷಿಕನಾಗಿ ಬದಲಾಗಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ


ರಾಂಚಿ(ಫೆ.28): ಭಾರತ ಕ್ರಿಕೆಟ್‌ ತಂಡದ ಮಾಜಿ ಎಂ.ಎಸ್‌.ಧೋನಿ ಹೊಸ ಹೊಸ ಪ್ರಯೋಗಗಳನ್ನು ನಡೆಸುವುದರಲ್ಲಿ ಎತ್ತಿದ ಕೈ. ಕ್ರಿಕೆಟ್‌ನಿಂದ ದೀರ್ಘಾವಧಿ ವಿಶ್ರಾಂತಿ ತೆಗೆದುಕೊಂಡಿರುವ ಧೋನಿ, ಸದ್ಯ ತಮ್ಮ ತವರೂರಲ್ಲಿ ಸಾವಯವ ಕೃಷಿ ಆರಂಭಿಸಿದ್ದಾರೆ. 

ಧೋನಿ IPL ಆಡ್ತಾರಾ? ಜಾಹೀರಾತಿಗೆ ತಿರುಗೇಟು ನೀಡಿದ CSK!

ಈ ಬಗ್ಗೆ ಸ್ವತಃ ಧೋನಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋವೊಂದರ ಮೂಲಕ ಮಾಹಿತಿ ನೀಡಿದ್ದಾರೆ. ‘ಕಲ್ಲಂಗಡಿ ಹಣ್ಣಿನ ಮೂಲಕ ಸಾವಯವ ಕೃಷಿ ಆರಂಭಿಸುತ್ತಿದ್ದೇನೆ. ಮುಂದಿನ 20 ದಿನಗಳಲ್ಲಿ ಪಪ್ಪಾಯ ಗಿಡಗಳನ್ನು ನೆಡಲಿದ್ದು, ಹೊಸ ಪ್ರಯತ್ನ ನನ್ನನ್ನು ಉತ್ಸುಕಗೊಳಿಸಿದೆ’ ಎಂದು ಧೋನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ರಾಂಚಿಯಲ್ಲಿ ಹತ್ತಾರು ಎಕರೆ ಭೂಮಿ ಖರೀದಿಸಿರುವ ಧೋನಿ, ದೊಡ್ಡ ಮಟ್ಟದಲ್ಲಿ ವಾಣಿಜ್ಯ ಕೃಷಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ ಎಂದು ಅವರ ಆಪ್ತ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಧೋನಿ ಮಾ.1ರಿಂದ ಐಪಿಎಲ್‌ ಟೂರ್ನಿಗಾಗಿ ಅಭ್ಯಾಸ ನಡೆಸಲಿದ್ದು, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. 

2021ರ ಐಪಿಎಲ್‌ನಲ್ಲೂ ಧೋನಿ ನಮ್ಮ ತಂಡದಲ್ಲಿರುತ್ತಾರೆ ಎಂದ ಶ್ರೀನಿ..!

ಧೋನಿಯ ಐಪಿಎಲ್‌ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಲಿದ್ದೇವೆ ಎಂದು ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಕೆಲ ತಿಂಗಳುಗಳ ಹಿಂದೆ ಹೇಳಿದ್ದರು. ಧೋನಿ ಅಂ.ರಾ.ಕ್ರಿಕೆಟ್‌ಗೆ ವಾಪಸಾಗುತ್ತಾರೆಯೇ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!