ಲಂಕಾ ರನ್ ಸ್ಫೋಟ, ವಿಂಡೀಸ್‌ಗೆ ಸೋಲಿನ ಪಾಠ!

Chethan Kumar   | Asianet News
Published : Feb 27, 2020, 10:08 AM IST
ಲಂಕಾ ರನ್ ಸ್ಫೋಟ, ವಿಂಡೀಸ್‌ಗೆ ಸೋಲಿನ ಪಾಠ!

ಸಾರಾಂಶ

ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಆರಂಭಿಕ 2 ಪಂದ್ಯಗಳು ತೀವ್ರ ಕುತೂಹಲ ಕೆರಳಿಸಿತ್ತು. ಮೊದಲ ಪಂದ್ಯ ಗೆದ್ದು ಬೀಗಿದ್ದ ಲಂಕಾ, ಇದೀಗ 2ನೇ ಪಂದ್ಯವನ್ನೂ ಗೆದ್ದುಕೊಂಡಿದೆ.   

ಹಂಬಂತೋಟ(ಫೆ.27):  ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 161 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 

ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

ಮೊದಲು ಬ್ಯಾಟ್‌ ಮಾಡಿದ ಲಂಕಾ ಆವಿಷ್ಕ ಫರ್ನಾಂಡೋ (127) ಹಾಗೂ ಕುಸಾಲ್‌ ಮೆಂಡಿಸ್‌ (119) ಶತಕ ಸಿಡಿಸಿ ಅಬ್ಬರಿಸಿದರು. ತಿಸರಾ ಪರೇರಾ 36 ರನ್ ಕಾಣಿಕೆ ನೀಡಿದರು. ಉಳಿದವರಿಂದ ನಿರೀಕ್ಷಿತ ರನ್ ಹರಿದುಬರಲಿಲ್ಲ. ಈ ಮೂಲಕ ಶ್ರೀಲಂಕಾ 50 ಓವರಲ್ಲಿ 8 ವಿಕೆಟ್‌ಗೆ 345 ರನ್‌ ಕಲೆಹಾಕಿತು. 

ಕಠಿಣ ಗುರಿ ಬೆನ್ನತ್ತಿದ ವಿಂಡೀಸ್‌ ವಾನಿಂಡು ಹಸರಂಗ ಹಾಗೂ ಲಕ್ಷನ್ ಸಂದಕ್ಕನ್ ದಾಳಿಗೆ ತತ್ತರಿಸಿತು. ನುವಾನ್ ಪ್ರದೀಪ್ ಹಾಗೂ ಎಂಜಲೋ ಮ್ಯಾಥ್ಯೂಸ್ ಕೂಡ , ವಿಂಡೀಸ್ ರನ್ ಓಟಕ್ಕೆ ಕಡಿವಾಣ ಹಾಕಿದರು. ಹೀಗಾಗಿ ವಿಂಡೀಸ್   39.1 ಓವರಲ್ಲಿ 184 ರನ್‌ಗಳಿಗೆ ಆಲೌಟ್‌ ಆಯಿತು. ಲಂಕಾ 161 ರನ್ ಭರ್ಜರಿ ಗೆಲುವು ಸಾಧಿಸಿತು.


ಸ್ಕೋರ್‌: ಶ್ರೀಲಂಕಾ 345/8, ವಿಂಡೀಸ್‌ 184/10

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!