ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು, ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಭಾರತ!

By Chethan KumarFirst Published Feb 27, 2020, 12:33 PM IST
Highlights

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಹ್ಯಾಟ್ರಿಕ್ ಗೆಲವು ಸಾಧಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 3ನೇ ಲೀಗ್ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ. 
 

ಮೆಲ್ಬರ್ನ್(ಫೆ.27): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಣಿಸಿದ ಭಾರತ, 2ನೇ ಪಂದ್ಯದಲ್ಲಿ ಬಾಂಗ್ಲಾದೇಶ ಮಟ್ಟಹಾಕಿತ್ತು. ಇದೀಗ ನ್ಯೂಜಿಲೆಂಡ್ ತಂಡವನ್ನು 3 ರನ್‌ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು!

ನ್ಯೂಜಿಲೆಂಡ್‌ ಗೆಲವಿಗೆ 134 ರನ್ ಟಾರ್ಗೆಟ್ ನೀಡಿದ್ದ ಭಾರತ, ಕರಾರುವಕ್ ದಾಳಿ ಸಂಘಟಿಸಿತು. ಆರಂಭಿಕ ರಾಚೆಲ್ ಪ್ರೀಸ್ಟ್ ಹಾಗೂ ನಾಯಕಿ ಸೋಫಿ ಡಿವೈನ್ ಜೊತೆಯಾಟ 13ರನ್‌ಗೆ ಅಂತ್ಯವಾಯಿತು. ಈ ಮೂಲಕ ಭಾರತ ವನಿತೆಯರು ಆರಂಭಿಕ ಮೇಲಗೈ ಸಾಧಿಸಿದರು.

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್

ಸುಜಿ ಬೇಟ್ಸ್ ಕೇವಲ 6 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಮ್ಯಾಡಿ ಗ್ರೀನ್ ಹಾಗೂ ಕ್ಯಾಟೆ ಮಾರ್ಟಿನ್ ಜೊತೆಯಾಟ ಭಾರತ ವನಿತೆಯರಲ್ಲಿ ಆತಂಕ ಮೂಡಿಸಿತು. ಮ್ಯಾಡಿ 24 ಹಾಗೂ ಮಾರ್ಟಿನ್ 25 ರನ್ ಕಾಣಿಕೆ ನೀಡಿದರು. 

ಅಮೆಲಿಯಾ ಕೆರ್ ಹಾಗೂ ಹೈಯ್ಲೆ ಜೆನ್ಸೆನ್ ಜೊತೆಯಾಟದ ಪಂದ್ಯವನ್ನು ರೋಚಕ ಘಟಕ್ಕೆ ಕೊಂಡೊಯ್ಯಿತು. ಕೆರ್ ಬರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ನ್ಯೂಜಿಲೆಂಡ್ ಗೆಲುವಿಗ ಅಂತಿಮ 6 ಎಸತದಲ್ಲಿ 16ರನ್ ಅವಶ್ಯಕತೆ ಇತ್ತು. ಬೌಂಡರಿ ನೆರವಿನಂದ ಅಂತಿಮ 2 ಎಸೆತದಲ್ಲಿ 9 ರನ್ ಬೇಕಿತ್ತು. ಆದರೆ ಉತ್ತಮ ಬೌಲಿಂಗ್ ದಾಳಿ ಮೂಲಕ ಭಾರತ 3 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. 

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!