ಕೇದಾರ್‌ ಜತೆ ಗಾಲ್ಫ್ ಆಡಿದ ಧೋನಿ

By Kannadaprabha News  |  First Published Nov 17, 2019, 10:02 AM IST

ವಿಶ್ವಕಪ್ ಬಳಿಕ ಕ್ರಿಕೆಟ್‌ನಿಂದ ದೂರವೇ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಕೊನೆಗೂ ಬ್ಯಾಟ್ ಹಿಡಿದು ಅಭ್ಯಾಸ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಕೇದಾರ್ ಜಾಧವ್ ಹಾಗೂ ಆರ್.ಪಿ. ಸಿಂಗ್ ಜತೆ ಗಾಲ್ಫ್ ಆಡಿ ಸಂಭ್ರಮಿಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನವದೆಹಲಿ[ನ.17]:  ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಸದ್ಯ ಕ್ರಿಕೆಟ್‌ನಿಂದ ದೂರ ಉಳಿ​ದಿ​ದ್ದಾರೆ. ಏಕ​ದಿನ ವಿಶ್ವ​ಕಪ್‌ ಸೆಮಿ​ಫೈ​ನಲ್‌ ಬಳಿಕ ಸ್ಪರ್ಧಾ​ತ್ಮಕ ಕ್ರಿಕೆಟ್‌ನಲ್ಲಿ ಆಡದ ಧೋನಿ, ಬೇರೆ ಕ್ರೀಡೆಗಳ​ಲ್ಲಿ ತಮ್ಮನ್ನು ತೊಡ​ಗಿ​ಸಿ​ಕೊ​ಳ್ಳು​ತ್ತಿ​ದ್ದಾರೆ. 

Had a great time playing golf with 🏌️ pic.twitter.com/Tw6NYEacv8

— IamKedar (@JadhavKedar)

ಶನಿ​ವಾರ ಭಾರತ ತಂಡದ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌, ಮಾಜಿ ವೇಗಿ ಆರ್‌.ಪಿ.​ಸಿಂಗ್‌ ಜತೆ ಗಾಲ್ಫ್ ಆಡಿ ಕಾಲ ಕಳೆ​ದರು. ಗಾಲ್ಫ್ ಕೋರ್ಸ್‌ನಲ್ಲಿ​ರುವ ಫೋಟೋ​ವನ್ನು ಜಾಧವ್‌ ಟ್ವೀಟ್‌ ಮಾಡಿದ್ದು, ಫೋಟೋ ವೈರಲ್‌ ಆಗಿದೆ. ಧೋನಿ ಇತ್ತೀ​ಚೆಗೆ ರಾಂಚಿಯ ರಾಜ​ಕಾ​ರಣಿಯೊಬ್ಬರ ಜತೆ ಸ್ನೂಕರ್‌ ಆಡಿದ್ದರು. ಜತೆಗೆ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ ಆಯೋ​ಜಿ​ಸಿದ್ದ ಟೆನಿಸ್‌ ಟೂರ್ನಿ​ಯಲ್ಲಿ ಪಾಲ್ಗೊಂಡು ಗೆದ್ದಿ​ದ್ದರು.
ನಾಲ್ಕು ತಿಂಗಳ ಬಳಿಕ ಕ್ರಿಕೆಟ್ ಮೈದಾನಕ್ಕಿಳಿದ ಧೋನಿ

Tap to resize

Latest Videos

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ನಾಲ್ಕು ತಿಂಗಳ ಬಳಿಕ ನೆಟ್ಸ್‌ಗೆ ಮರಳಿದ್ದಾರೆ. ಆದರೂ ಅವ​ರು ಡಿ.6ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ವಿರು​ದ್ಧದ ಸರಣಿಗೆ ಲಭ್ಯವಿರುವುದಿಲ್ಲ ಎಂದು ಬಿಸಿ​ಸಿಐ ಅಧಿ​ಕಾ​ರಿ​ಯೊ​ಬ್ಬರು ತಿಳಿ​ಸಿ​ದ್ದಾರೆ. 

click me!