ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾದ ಬೆನ್ನಲ್ಲೇ ಇದೀಗ ಇನ್ನೆರಡು ದಿನ ಟೀಂ ಇಂಡಿಯಾ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ಇಂದೋರ್‌ನಲ್ಲೇ ಅಭ್ಯಾಸ ನಡೆಸಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಇಂದೋರ್[ನ.17]: 3ನೇ ದಿನದಲ್ಲಿ ಮೊದಲ ಪಂದ್ಯ ಗೆದ್ದ ಭಾರತ, ನ.22ರಿಂದ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ 2ನೇ ಟೆಸ್ಟ್‌ನತ್ತ ದೃಷ್ಟಿನೆಟ್ಟಿದೆ. ಈ ಪಂದ್ಯಕ್ಕಾಗಿ 2 ದಿನ ಇಂದೋರ್‌ನಲ್ಲೇ ಅಭ್ಯಾಸ ನಡೆಸಲು ಎರಡೂ ತಂಡಗಳು ನಿರ್ಧರಿಸಿವೆ.
ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!
undefined
ಸೂರ್ಯ ಮುಳುಗುವ ಸಮಯದಲ್ಲಿ ಪಿಂಕ್ ಬಾಲ್ ಎದುರಿಸುವುದು ಬಹಳ ಕಷ್ಟ ಎನ್ನುವ ಅಭಿಪ್ರಾಯ ಈಗಾಗಲೇ ಚೆಂಡನ್ನು ಬಳಕೆ ಮಾಡಿರುವ ಆಟಗಾರರಿಂದ ವ್ಯಕ್ತವಾಗಿದೆ. ಹೀಗಾಗಿ ಅಭ್ಯಾಸದ ವೇಳೆ ಅದರತ್ತ ಹೆಚ್ಚಿನ ಗಮನ ಹರಿಸಲು ಭಾರತ ತಂಡ ನಿರ್ಧರಿಸಿದೆ ಎನ್ನಲಾಗಿದೆ.
ಪಿಂಕ್ ಬಾಲ್‌ನಲ್ಲಿ ಟೀಂ ಇಂಡಿಯಾ ಪ್ರಾಕ್ಟೀಸ್!
ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಗೆದ್ದು ತವರಿನಲ್ಲಿ ಸತತ 12ನೇ ಸರಣಿ ಗೆಲ್ಲುವ ಗುರಿಯನ್ನು ವಿರಾಟ್ ಕೊಹ್ಲಿ ಪಡೆ ಹೊಂದಿದೆ. ಬಾಂಗ್ಲಾದೇಶಕ್ಕೂ ಇದು ಮೊದಲ ಪಿಂಕ್ ಬಾಲ್ ಟೆಸ್ಟ್ ಆಗಿದ್ದು, ಉಭಯ ತಂಡಗಳ ನಡುವೆ ಏರ್ಪಡುವ ಪೈಪೋಟಿ ಕುತೂಹಲ ಮೂಡಿಸಿದೆ. ಪಂದ್ಯ ಮಧ್ಯಾಹ್ನ 1ಕ್ಕೆ ಆರಂಭಗೊಂಡು, ರಾತ್ರಿ 8ಕ್ಕೆ ಮುಕ್ತಾಯಗೊಳ್ಳಲಿದೆ.
ಬೆಂಗಳೂರು ಎನ್‌ಸಿಎನಲ್ಲಿ ಪಿಂಕ್ ಬಾಲ್ ಅಭ್ಯಾಸ!
2ನೇ ಟೆಸ್ಟ್ ಬಗ್ಗೆ ಮಾತನಾಡಿದ ವಿರಾಟ್, ‘ಪಿಂಕ್ ಬಾಲ್ ಪಂದ್ಯವನ್ನಾಡಲು ಉತ್ಸುಕರಾಗಿದ್ದೇವೆ. ಭಾರತ ತಂಡವಾಡಿದ ಮೊದಲ ಪಿಂಕ್ ಬಾಲ್ ಟೆಸ್ಟ್‌ನ ಸದಸ್ಯರಾಗಲಿದ್ದೇವೆ ಎನ್ನುವ ಬಗ್ಗೆ ಹೆಮ್ಮೆ ಇದೆ. ದಾಖಲೆಗಳ ಬಗ್ಗೆ ನಾವು ಗಮನ ಹರಿಸುವುದಿಲ್ಲ. ಪ್ರತಿ ಪಂದ್ಯವನ್ನು ಗೆಲ್ಲುವುದು ನಮ್ಮ ಗುರಿ’ ಎಂದರು.
ಪ್ಯಾರಾ ಟ್ರೂಪರ್ಸ್’ನಿಂದ ಚೆಂಡು!
ಹಗಲು-ರಾತ್ರಿ ಟೆಸ್ಟ್‌ಗೆ ಸೇನೆಯ ಪ್ಯಾರಾ ಟ್ರೂಪರ್‌ಗಳು ಮೈದಾನಕ್ಕೆ ಚೆಂಡನ್ನು ತರಲಿದ್ದಾರೆ. ಪಿಚ್ ಬಳಿ ಇಳಿಯಲಿರುವ ಪ್ಯಾರಾ ಟ್ರೂಪರ್‌ಗಳು ಚೆಂಡನ್ನು ನಾಯಕರಿಗೆ ಹಸ್ತಾಂತರಿಸಲಿದ್ದಾರೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಭಿಷೇಕ್ ದಾಲ್ವಿಯಾ ಹೇಳಿದ್ದಾರೆ. ಪಂದ್ಯದ ವೇಳೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.