
ಲಾಹೋರ್[ನ.17]: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ತಪ್ಪು ಮಾಡಿದವರ ಜತೆಯಲ್ಲಿ ಆಡಬೇಕಾದ ಅನಿವಾರ್ಯತೆ ಇತ್ತು ಎಂದು ಮಾಜಿ ನಾಯಕ ಮೊಹಮದ್ ಹಫೀಜ್ ಹೇಳಿಕೊಂಡಿದ್ದಾರೆ. ಮಾಜಿ ವೇಗಿ ಶೋಯೆಬ್ ಅಖ್ತರ್ ನಡೆಸಿರುವ ಯೂ-ಟ್ಯೂಬ್ ಸಂದರ್ಶನದಲ್ಲಿ ಹಫೀಜ್, ಪಾಕಿಸ್ತಾನ ಕ್ರಿಕೆಟ್‌ನ ಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ನನ್ನ ಸುತ್ತಲೂ ಮ್ಯಾಚ್ ಫಿಕ್ಸರ್‌ಗಳಿದ್ದರು: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪಾಕ್ ವೇಗಿ..!
‘ತಂಡದಲ್ಲಿ ಕಳಂಕಿತ ಆಟಗಾರರಿದ್ದರು. ಅವರು ಮೋಸದಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಿದ್ದರೂ ಕ್ರಿಕೆಟ್ ಮಂಡಳಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದನ್ನು ಪ್ರಶ್ನಿಸಿದಾಗ ತಂಡದಲ್ಲಿ ಮುಂದುವರಿಯಬೇಕಿದ್ದರೆ ತುಟಿ ಬಿಚ್ಚದಂತೆ ಆಗ್ರಹಿಸಿದರು. ಹೀಗಾಗಿ ಅನಿವಾರ್ಯ ಕಾರಣಗಳಿಂದ ಕಳಂಕಿತರೊಂದಿಗೆ ಆಡಿದೆ’ ಎಂದು ಹಫೀಜ್ ಬೇಸರ ವ್ಯಕ್ತಪಡಿಸಿದ್ದಾರೆ.
ನಾಯಕತ್ವದಲ್ಲಿ ಕೊಹ್ಲಿಗಿಲ್ಲ ಸರಿಸಾಟಿ; ಪಾಕ್ ಕ್ರಿಕೆಟಿಗನಿಂದ ಫುಲ್ ಮಾರ್ಕ್ಸ್!
ಇತ್ತೀಚೆಗಷ್ಟೇ ಟೀವಿ ಕಾರ್ಯಕ್ರಮವೊಂದರಲ್ಲಿ ಅಖ್ತರ್ ತಾವು ಆಡುತ್ತಿದ್ದ ವೇಳೆ ಪಾಕ್ ತಂಡ ಮ್ಯಾಚ್ ಫಿಕ್ಸರ್‌ಗಳಿಂದ ಕೂಡಿತ್ತು ಎಂದಿದ್ದರು. ನಾನು ಒಟ್ಟು 21 ಆಟಗಾರರ ವಿರುದ್ಧ ಆಡುತ್ತಿದ್ದೆ ಎನ್ನುವ ಮೂಲಕ ಮ್ಯಾಚ್ ಫಿಕ್ಸಿಂಗ್ ಕರಾಳ ಜಗತ್ತಿನ ರಹಸ್ಯವನ್ನು ಅನಾವರಣ ಮಾಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.