ಕೊನೆಗೂ ಬಗೆಹರಿಯಿತು ಟೀಂ ಇಂಡಿಯಾ ಬಹುಕಾಲದ ಸಮಸ್ಯೆ..!

Published : Nov 12, 2019, 01:30 PM ISTUpdated : Nov 12, 2019, 05:44 PM IST
ಕೊನೆಗೂ ಬಗೆಹರಿಯಿತು ಟೀಂ ಇಂಡಿಯಾ ಬಹುಕಾಲದ ಸಮಸ್ಯೆ..!

ಸಾರಾಂಶ

ಕಳೆದೆರಡು ವರ್ಷಗಳಿಂದ ಟಿಂ ಇಂಡಿಯಾವನ್ನು ಹೈರಾಣಾಗಿಸಿದ್ದ ಆ ಒಂದು ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ. ಬಾಂಗ್ಲಾದೇಶ ವಿರುದ್ಧ ಸರಣಿ ಟೀಂ ಇಂಡಿಯಾ ಪಾಲಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಅಷ್ಟಕ್ಕೂ ಏನದು ಸಮಸ್ಯೆ, ಸಿಕ್ಕ ಪರಿಹಾರ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

"

ನಾಗ್ಪುರ(ನ.12): ಏಕದಿನ ಹಾಗೂ ಟಿ20 ಮಾದರಿಯಲ್ಲಿ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸಮಸ್ಯೆ ಭಾರತ ತಂಡಕ್ಕೆ ಬಹಳ ವರ್ಷಗಳಿಂದ ಕಾಡುತ್ತಿದೆ. ಆ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಂತೆ ಕಾಣುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ತಮ್ಮ ಆಕರ್ಷಕ ಪ್ರದರ್ಶನದ ಮೂಲಕ ಮುಂಬೈನ ಶ್ರೇಯಸ್ ಅಯ್ಯರ್ ತಂಡದ ಆಡಳಿತ ಹಾಗೂ ಬಿಸಿಸಿಐ ಆಯ್ಕೆಗಾರರ ಗಮನ ಸೆಳೆಯುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ ಶ್ರೇಯಸ್ ಆಟ, ತಂಡದ ಆಡಳಿತಕ್ಕೆ ಅವರ ಮೇಲೆ ಮತ್ತಷ್ಟು ನಂಬಿಕೆ ಮೂಡುವಂತೆ ಮಾಡಿದೆ.

ದೀಪಕ್ ಚಹಾರ್ ದಾಳಿಗೆ ತತ್ತರಿಸಿದ ಬಾಂಗ್ಲಾ; ಸರಣಿ ಕೈವಶ ಮಾಡಿದ ಭಾರತ

ಏಕದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡ ಹಲವು ಆಟಗಾರರನ್ನು 4ನೇ ಕ್ರಮಾಂಕಕ್ಕಾಗಿ ಪ್ರಯೋಗಿಸಿತು. ಯಾರೂ ಸಹ ಸೂಕ್ತ ವೆನಿಸಲಿಲ್ಲ. ವಿಶ್ವಕಪ್‌ನಲ್ಲಿ ವಿಜಯ್ ಶಂಕರ್ ರನ್ನು ಆಡಿಸುವ ಯತ್ನ ಕೈಹಿಡಿಯಲಿಲ್ಲ. ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 5ನೇ ಕ್ರಮಾಂಕದಲ್ಲಿ ಒಂದೆರಡು ಅರ್ಧಶತಕಗಳನ್ನು ಬಾರಿಸಿದ್ದ ಶ್ರೇಯಸ್, ಬಾಂಗ್ಲಾ ವಿರುದ್ಧ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 

ರಾಹುಲ್, ಶ್ರೇಯಸ್ ಅರ್ಧಶತಕ; ಬಾಂಗ್ಲಾಗೆ ಸ್ಪರ್ಧಾತ್ಮಕ ಗುರಿ!

ಸಿಕ್ಕ ಸೀಮಿತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುತ್ತಿರುವ ಶ್ರೇಯಸ್‌ಗೆ ತಂಡದ ಆಡಳಿತ ಬೆಂಬಲ ನೀಡುತ್ತಿದೆ. ಈ ಬಗ್ಗೆ ಇಲ್ಲಿ ಭಾನುವಾರ, ಟಿ20 ಪಂದ್ಯ ಮುಕ್ತಾಯಗೊಂಡ ಬಳಿಕ ಮಾತನಾಡಿದ ಶ್ರೇಯಸ್, ‘ಕಳೆದ ಕೆಲ ಸರಣಿಗಳು ನನ್ನ ಪಾಲಿಗೆ ಬಹಳ ಮುಖ್ಯವಾಗಿದ್ದವು. 4ನೇ ಕ್ರಮಾಂಕಕ್ಕೆ ಅನೇಕರು ಪೈಪೋಟಿ ನಡೆಸುತ್ತಿದ್ದಾರೆ. ತಂಡದ ಆಡಳಿತ ನೀವು 4ನೇ ಕ್ರಮಾಂಕದಲ್ಲಿ ಮುಂದುವರಿಯುತ್ತೀರಿ ಎಂದು ಭರವಸೆ ನೀಡಿದೆ’ ಎಂದು ಹೇಳಿದರು. 

ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಅಯ್ಯರ್ ಚೊಚ್ಚಲ ಅರ್ಧಶತಕ ಬಾರಿಸಿದ್ದಲ್ಲದೇ, ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇನ್ನು ಎರಡನೇ ಪಂದ್ಯದಲ್ಲೂ 13 ಎಸೆತಗಳಲ್ಲಿ 24 ರನ್ ಚಚ್ಚಿದ್ದರು.  
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು