ಆಫ್ಘನ್ ಎದುರು ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿದ ವಿಂಡೀಸ್

By Web DeskFirst Published Nov 12, 2019, 11:40 AM IST
Highlights

ಬರೋಬ್ಬರಿ 5 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡವು ಏಕದಿನ ಕ್ರಿಕೆಟ್‌ನಲ್ಲಿ ಸರಣಿ ಕ್ಲೀಸ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ. ಆಫ್ಘನ್ ವಿರುದ್ಧ 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಲಕ್ನೋ[ನ.12]: ಆರಂಭಿಕ ಬ್ಯಾಟ್ಸ್‌ಮನ್ ಶಾಯ್ ಹೋಪ್ ಅವರ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್, ಆಫ್ಘಾನಿಸ್ತಾನ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ವಿಂಡೀಸ್ 3-0 ಯೊಂದಿಗೆ ಕ್ಲೀನ್ ಸ್ವೀಪ್ ಮಾಡಿದೆ. 

Take a bow gents!👍🏾🏆 Job well done! Time for the T20Is!🙌🏾 pic.twitter.com/7cwgL26dHe

— Windies Cricket (@windiescricket)

ಸೋಮವಾರ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಫ್ಘನ್ ನೀಡಿದ 250 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ವಿಂಡೀಸ್‌ಗೆ ಶಾಯ್ ಹೋಪ್ (109), ರೋಸ್ಟನ್ ಚೇಸ್ (42) ನೆರವಾದರು. ತಂಡ 48.4 ಓವರಲ್ಲಿ 5 ವಿಕೆಟ್‌ಗೆ 253 ರನ್‌ಗಳಿಸಿ ಜಯದ ನಗೆ ಬೀರಿತು. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿತು. ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಕಡೆಯ ಬಾರಿಗೆ ಏಕದಿನ ಸರಣಿಯಲ್ಲಿ ಕೆರಿಬಿಯನ್ ಪಡೆ ಕ್ಲೀನ್ ಮಾಡಿತ್ತು.

ಏಕದಿನ: ಆಫ್ಘನ್ ವಿರುದ್ಧ ವಿಂಡೀಸ್‌ಗೆ ಸುಲಭ ಜಯ

ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಹಜರುತ್ ಉಲ್ಲಾ ಜಝೈ[50], ಅಸ್ಗರ್ ಆಫ್ಘನ್ (86) ಹಾಗೂ ಮೊಹಮ್ಮದ್ ನಬೀ[50] ಹೋರಾಟದಿಂದ 7 ವಿಕೆಟ್‌ಗೆ 249 ರನ್ ಗಳಿಸಿತ್ತು. ವಿಂಡೀಸ್ ಪರ ಕೀಮೊ ಪೌಲ್ 3, ಅಲ್ಜೇರಿ ಜೋಸೆಫ್ 2 ಹಾಗೂ ಶೆಫಾರ್ಡ್, ರೋಸ್ಟನ್ ಚೇಸ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. 

ಇನ್ನು ಇದೇ ಮೈದಾನದಲ್ಲಿ ನವೆಂಬರ್ 14ರಿಂದ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಾದ ಬಳಿಕ ನವೆಂಬರ್ 27ರಂದು ಏಕೈಕ ಟೆಸ್ಟ್ ಪಂದ್ಯ ಜರುಗಲಿದೆ. 

ಸ್ಕೋರ್:
ಆಫ್ಘಾನಿಸ್ತಾನ 249/7
ವಿಂಡೀಸ್ 253/5

click me!