ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ಹುದ್ದೆಗೆ ಶಾರುಖ್ ಹೆಸರಲ್ಲಿ ಅರ್ಜಿ!

By Chethan KumarFirst Published May 28, 2024, 7:10 PM IST
Highlights

ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದಿದೆ. ಕೆಕೆಆರ್ ಕೋಚ್ ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ರೇಸ‌್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಇದೀಗ ಗಂಭೀರ್‌ಗೆ ಪೈಪೋಟಿ ನೀಡಲು ಶಾರುಖ್ ಖಾನ್ ಹೆಸರಲ್ಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲಾಗಿದೆ

ಮುಂಬೈ(ಮೇ.28) ಐಪಿಎಲ್ ಟೂರ್ನಿ ಮುಗಿದೆ. ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಕೆಕೆಆರ್‌ಗೆ ಟ್ರೋಫಿ ಗೆಲ್ಲಿಸಿಕೊಟ್ಟ ಕೋಚ್ ಗೌತಮ್ ಗಂಭೀರ್‌ಗೆ ಭಾರಿ ಬೇಡಿಕೆ. ಟೀಂ ಇಂಡಿಯಾ ಕೋಚ್ ಹುದ್ದೆಯಲ್ಲೂ ಗೌತಮ್ ಗಂಭೀರ್ ಹೆಸರು ಮುಂಚೂಣಿಯಲ್ಲಿದೆ. ಇದೀಗ ಗಂಭೀರ್‌ಗೆ ಪೈಪೋಟಿ ನೀಡಲು ಕೆಕೆಆರ್ ಮಾಲೀಕ ಶಾರುಖ್ ಖಾನ್ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದು ನಕಲಿ ಅರ್ಜಿ. ಶಾರುಖ್ ಖಾನ್ ಹೆಸರಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ.27 ಕೊನೆಯ ದಿನವಾಗಿತ್ತು. ಬರೋಬ್ಬರಿ 3,000 ಅರ್ಜಿಗಳು ಬಂದಿದೆ. ಈ ಪೈಕಿ ಶಾರುಖ್ ಖಾನ್ ಹೆಸರಲ್ಲೂ ಕೋಚ್ ಹುದ್ದೆಗೆ ಅರ್ಜಿ ಬಂದಿದೆ. ಬಿಸಿಸಿಐ ಆನ್‌ಲೈನ್ ಮೂಲಕ  ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಹಲವು ಅಭಿಮಾನಿಗಳು ನಕಲಿ ಹೆಸರಿನಲ್ಲ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಶಾರುಖ್ ಖಾನ್ ಹೆಸರಲ್ಲೂ ಅರ್ಜಿ ಸಲ್ಲಿಕೆಯಾಗಿದೆ.

Latest Videos

ಟೀಂ ಇಂಡಿಯಾ ಕೋಚ್ ಹುದ್ದೆಗೆ ನರೇಂದ್ರ ಮೋದಿ, ಅಮಿತ್ ಶಾ, ತೆಂಡೂಲ್ಕರ್ ಸೇರಿ 3,000 ಅರ್ಜಿ!

ಶಾರುಖ್ ಖಾನ್, ಬಾಲಿವುಡ್ ನಟ ಎಂದೇ ಅರ್ಜಿ ಸಲ್ಲಿಕೆಯಾಗಿದೆ. ಬಿಸಿಸಿಐಗೆ ಬಂದಿರುವ 3,000 ಅರ್ಜಿಗಳ ಪೈಕಿ ನಕಲಿ ಅರ್ಜಿಗಳ ಸಂಖ್ಯೆ ಹೆಚ್ಚಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರಲ್ಲೂ ಅರ್ಜಿ ಸಲ್ಲಿಸಲಾಗಿದೆ. ಇನ್ನು ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ವಿರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಸೇರಿದಂತೆ ಹಲವು ಟೀಂ ಇಂಡಿಯಾ ಮಾಜಿ ಕ್ರಿಕೆಚಿಗರ ಹೆಸರಲ್ಲೂ ಅರ್ಜಿ ಸಲ್ಲಿಸಲಾಗಿದೆ.

ಕೆಲ ಅಭಿಮಾನಿಗಳು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ನನ್ನ ಗಲ್ಲಿ ಕ್ರಿಕೆಟ್ ಅನುಭವ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ನೆರವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಬಿಸಿಸಿಐ ಇದೀಗ 3,000 ಅರ್ಜಿಗಳ ಪೈಕಿ ಅಸಲಿ ಅರ್ಜಿಯನ್ನು ಹುಡುಕಿ ತೆಗೆಯುತ್ತಿದೆ. ಈ ಪೈಕಿ ಅಸಲಿ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡಲಿದೆ. ಬಳಿಕ ಈ ಪಟ್ಟಿಯಿಂದ ಅರ್ಹರನ್ನು ಆಯ್ಕೆ ಮಾಡಿ ಸಂದರ್ಶನಕ್ಕೆ ಕರೆಯಲಿದೆ.

ಹಾಲಿ ಕೋಚ್ ರಾಹುಲ್ ದ್ರಾವಿಡ್ ಅವಧಿ ಜೂನ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯದೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಅವಧಿ ಅಂತ್ಯಗೊಳ್ಳಲಿದೆ. ರಾಹುಲ್ ದ್ರಾವಿಡ್ ಮುಂದುವರಿಯಲು ಅರ್ಜಿ ಹಾಕಿಲ್ಲ. ಇತ್ತ ವಿವಿಎಸ್ ಲಕ್ಷ್ಮಣ್ ಸೇರಿದಂತೆ ಕೆಲ ದಿಗ್ಗಜ ಕ್ರಿಕೆಟಿಗರು ಕೋಚ್ ಹುದ್ದೆಯಿಂದ ದೂರ ಸರಿದಿದ್ದಾರೆ.

ಕೋಚ್ ಹುದ್ದೆಗೆ ಅರ್ಜಿ ಡೆಡ್‌ಲೈನ್ ಮುಕ್ತಾಯ: ಕಪ್ ಗೆಲ್ಲುವ ಮುಂಚೆ ಬಿಸಿಸಿಐಗೆ ಕಂಡೀಷನ್ ಹಾಕಿದ್ದ ಗಂಭೀರ್!
 

click me!