
ಲಂಡನ್(ಆ.01): ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಜಗತ್ತಿನಾದ್ಯಂತ ಗೆಳೆಯರ ದಿನವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಪೋಷಕರೊಂದಿಗೆ, ಸಹೋದರ ಸಹೋದರಿಯರೊಂದಿಗೆ ಹೇಳಿಕೊಳ್ಳಲಾಗದ ಎಷ್ಟೋ ವಿಚಾರಗಳನ್ನು ನಾವು ಫ್ರೆಂಡ್ಸ್‌ಗಳ ಜತೆ ಹಂಚಿಕೊಳ್ಳುತ್ತೇವೆ.
ಇಂತಹ ಸ್ನೇಹಿತರ ದಿನದಂದೇ, ಇಂಗ್ಲೆಂಡ್ ಮಾಜಿ ಕ್ರಿಕೆಟಿಗರು ತಮ್ಮ ಸಹಪಾಠಿಯೊಬ್ಬರು ಕೊನೆಯುಸಿರೆಳೆಯುವ ಮುನ್ನ ವಿದಾಯದ ಪಾರ್ಟಿ ನೀಡಿರುವ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಇಂಗ್ಲೆಂಡ್ ಮಾಜಿ ವೇಗದ ಬೌಲರ್ ಮೈಕ್ ಹೆಂಡ್ರಿಕ್ಸ್(72 ವರ್ಷ) ಕೊನೆಯುಸಿರೆಳೆದಿದ್ದರು. ಹೆಂಡ್ರಿಕ್ಸ್ ಕೊನೆಯುಸಿರೆಳೆಯುವ ಮುನ್ನ ಅವರ ಸಹ ಆಟಗಾರರು ಒಟ್ಟಿಗೆ ಸೇರಿ ವಿದಾಯದ ಔತಣಕೂಟದಲ್ಲಿ ಭಾಗವಹಿಸಿ ಗೆಳೆಯನೊಂದಿಗೆ ಕಾಲ ಕಳೆದಿದ್ದರು.
93ನೇ ವಯಸ್ಸಿಗೆ ಓಟ ಆರಂಭಿಸಿದ್ದ ಶತಾಯುಷಿ ಅಥ್ಲೀಟ್ ಮನ್ ಕೌರ್ ಇನ್ನಿಲ್ಲ..!
ಮೈಕ್ ಹೆಂಡ್ರಿಕ್ಸ್ ಬಹುಕಾಲದಿಂದ ಉದರ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಹೆಂಡ್ರಿಕ್ಸ್ ಕೊನೆಯುಸಿರೆಳೆಯುವ ಕೆಲವೇ ದಿನಗಳ ಮುನ್ನ ಇಂಗ್ಲೆಂಡ್ ಸಹ ಆಟಗಾರರಾದ ಜಾನ್ ಲೀವರ್, ಇಯಾನ್ ಬಾಥಮ್, ಬಾಬ್ ಟೇಲರ್, ಜೆಫ್ ಮಿಲ್ಲರ್, ಡೇರಿಕ್ ರೆಂಡಲ್, ಜಾನ್ ಎಂಬರ್ಸಿ, ಜೇಫ್ ಬಾಯ್ಕಾಟ್ ಒಟ್ಟಿಗೆ ಸೇರಿ ಹೆಂಡ್ರಿಕ್ಸ್ ಜತೆ ಡ್ರಿಕ್ಸ್ ಪಾರ್ಟಿ ಮಾಡಿದ್ದರು. ಇಂತಹ ಗೆಳೆಯರೇ ಅಲ್ವಾ ನಮ್ಮ ಜೀವನವನ್ನು ಮತ್ತಷ್ಟು ಸುಂದರಗೊಳಿಸುವುದು ಎಂದು ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
70 ಹಾಗೂ 80ರ ದಶಕದಲ್ಲಿ ಕರಾರುವಕ್ಕಾದ ದಾಳಿಗೆ ಹೆಸರಾಗಿದ್ದ ಮೈಕ್ ಹೆಂಡ್ರಿಕ್ಸ್ ಇಂಗ್ಲೆಂಡ್ ಪರ 30 ಟೆಸ್ಟ್ ಪಂದ್ಯಗಳನ್ನಾಡಿ 87 ವಿಕೆಟ್ ಕಬಳಿಸಿದ್ದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡರ್ಬಿಶೈರ್ ಪರ 20.05ರ ಸರಾಸರಿಯಲ್ಲಿ 497 ವಿಕೆಟ್ ಪಡೆದಿದ್ದರು. ವಿದಾಯದ ಡ್ರಿಂಕ್ಸ್ ಪಾರ್ಟಿಯ ಫೋಟೋ ನೋಡಿದ ಹಲವು ನೆಟ್ಟಿಗರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕಂಬನಿ ಮಿಡಿದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.