ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಇಂಗ್ಲೆಂಡ್..!

By Kannadaprabha NewsFirst Published Jul 19, 2024, 11:24 AM IST
Highlights

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸುವಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್‌ಗಳು ಯಶಸ್ವಿಯಾಗಿದ್ದಾರೆ. ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕರು ಈ ಸಾಧನೆ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನಾಟಿಂಗ್‌ಹ್ಯಾಮ್: ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಕೇವಲ 4.2 ಓವರ್ ಗಳಲ್ಲೇ 50 ರನ್ ಪೂರ್ಣಗೊಳಿಸಿದ ಇಂಗ್ಲೆಂಡ್, ಟೆಸ್ಟ್‌ನಲ್ಲಿ ಅತಿ ವೇಗದ ಅರ್ಧಶತಕದ ದಾಖಲೆ ಬರೆದಿದೆ. ಆರಂಭಿಕರಾದ ಬೆನ್ ಡಕೆಟ್ ಹಾಗೂ ಓಲಿ ಪೋಪ್‌ ಆಕ್ರಮಣಕಾರಿ ಆಟದ ಮೂಲಕ ಈ ಸಾಧನೆ ಮಾಡಿದರು.

1994ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ 4.3 ಓವರ್‌ಗಳಲ್ಲಿ 50 ರನ್ ಪೂರ್ಣ ಗೊಳಿಸಿತ್ತು. ತನ್ನದೇ ದಾಖಲೆಯನ್ನು ಇಂಗ್ಲೆಂಡ್ 30 ವರ್ಷಗಳ ಬಳಿಕ ಉತ್ತಮಗೊಳಿಸಿದೆ. ವೇಗದ ಫಿಫ್ಟಿ ಪಟ್ಟಿಯಲ್ಲಿ ಅಗ್ರ-3 ಸ್ಥಾನದಲ್ಲಿ ಇಂಗ್ಲೆಂಡ್ ಇದೆ. 2008ರಲ್ಲಿ ಇಂಗ್ಲೆಂಡ್ ವಿರುದ್ದ ಭಾರತ 5.3 ಓವರ್‌ಗಳಲ್ಲಿ 50 ರನ್ ಗಳಿಸಿದ್ದು, ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

Latest Videos

ಇಂಗ್ಲೆಂಡ್ ತಂಡವು 1994ರಲ್ಲಿ ದಕ್ಷಿಣ ಆಫ್ರಿಕಾ ಎದುರು 4.3 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಇದಾದ ಬಳಿಕ ಇಂಗ್ಲೆಂಡ್ ತಂಡವು 2002ರಲ್ಲಿ ಶ್ರೀಲಂಕಾ ಎದುರು 5 ಓವರ್‌ನಲ್ಲಿ ಅರ್ಧಶತಕ ಪೂರೈಸಿತ್ತು. ಇನ್ನು 2004ರಲ್ಲಿ ಶ್ರೀಲಂಕಾ ತಂಡವು 5.2 ಓವರ್‌ನಲ್ಲಿ ಪಾಕಿಸ್ತಾನ ಎದುರು ಅರ್ಧಶತಕ ಪೂರೈಸುವ ಮೂಲಕ 4ನೇ ಸ್ಥಾನದಲ್ಲಿದ್ದರೇ, ಟೀಂ ಇಂಡಿಯಾ 2008ರಲ್ಲಿ ಇಂಗ್ಲೆಂಡ್ ಎದುರು 5.3 ಓವರ್‌ಗಳಲ್ಲಿ ಅರ್ಧಶತಕ ಬಾರಿಸಿ 5ನೇ ಸ್ಥಾನ ಪಡೆದಿದೆ.

ಇಂದಿನಿಂದ ಮಹಿಳಾ ಏಷ್ಯಾಕಪ್ ಟಿ20; ಭಾರತಕ್ಕಿಂದು ಪಾಕಿಸ್ತಾನ ಚಾಲೆಂಜ್‌

ಎರಡನೇ ಟೆಸ್ಟ್: ಇಂಗ್ಲೆಂಡ್ 416 ರನ್‌ಗೆ ಆಲೌಟ್

ನಾಟಿಂಗ್‌ಹ್ಯಾಮ್: ವೆಸ್ಟ್‌ ಇಂಡೀಸ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನವೇ 416 ರನ್‌ಗೆ ಆಲೌಟಾಗಿದೆ. ಮೊದಲ ಓವರ್‌ನಲ್ಲೇ ಜ್ಯಾಕ್ ಕ್ರಾಲಿ  ವಿಕೆಟ್ ಕಳೆದುಕೊಂಡರೂ, ಓಲಿ ಪೋಪ್ ಶತಕದ ನೆರವಿನಿಂದ ತಂಡ ಉತ್ತಮ ಮೊತ್ತ ಗಳಿಸಿತು.

ತನ್ನ ಎಂದಿನ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟು 400 ರನ್‌ಗಳ ಗಡಿ ದಾಟಿತು. ಆರಂಭಿಕ ಆಟಗಾರ ಪೋಪ್ 167 ಎಸೆತಗಳಲ್ಲಿ 15 ಬೌಂಡರಿ, 1 ಸಿಕರ್‌ನೊಂದಿಗೆ 121 ರನ್ ಸಿಡಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಬೆನ್ ಡಕೆಟ್ 59 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 71 ರನ್ ಬಾರಿಸಿದರೆ, ನಾಯಕ ಬೆನ್ ಸ್ಟೋಕ್ಸ್ 69 ರನ್ ಗಳಿಸಿ ನಿರ್ಗಮಿಸಿದರು. ಹ್ಯಾರಿ ಬೂಕ್ 36, ಜೇಮಿ ಸ್ಮಿತ್ 36, ಕ್ರಿಸ್ ವೋಕ್ಸ್ 37 ರನ್‌ಗಳ ಕೊಡುಗೆ ನೀಡಿದರು. ಅಲ್ಟಾರಿ ಜೋಸೆಫ್ 3 ವಿಕೆಟ್ ಕಿತ್ತರು.

RCB ತಂಡದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡಿ: ಇದೇನಿದು ಟ್ರೆಂಡ್ ಆಗ್ತಿರೋ ಹೊಸ ಡಿಮ್ಯಾಂಡ್?

ಮಾಡಲ್‌ ನತಾಶಾ ಜತೆ ವಿಚ್ಛೇದನ ಖಚಿತಪಡಿಸಿಕೊಂಡ ಹಾರ್ದಿಕ್‌ ಪಾಂಡ್ಯ!

ನವದೆಹಲಿ: ಭಾರೀ ಊಹಾಪೋಹಗಳಿಗೆ ಕಾರಣವಾಗಿದ್ದ ತಾರಾ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ಹಾಗೂ ಸರ್ಬಿಯಾ ಮಾಡೆಲ್ ನತಾಶಾ ಸ್ಟಾನ್‌ಕೋವಿಚ್‌ ನಡುವಿನ ವಿವಾಹ ವಿಚ್ಚೇದನ ಸುದ್ದಿ ಈಗ ಅಧಿಕೃತಗೊಂಡಿದೆ. ಇದನ್ನು ಸ್ವತಃ ಹಾರ್ದಿಕ್ ಪಾಂಡ್ಯ ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ಖಚಿತಪಡಿಸಿದ್ದಾರೆ.

‘4 ವರ್ಷಗಳ ಬಳಿಕ ನಾನು ಹಾಗೂ ನತಾಶಾ ವಿಚ್ಚೇದನ ಪಡೆದಿದ್ದೇವೆ. ನಾವು ಒಟ್ಟಿಗೇ ಇರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಇದು ನನ್ನ ಬದುಕಿನ ಕಠಿಣ ನಿರ್ಧಾರ. ನಮ್ಮ ಮಗ ಅಗಸ್ತ್ಯ ಸಂತೋಷವಾಗಿರಲು ನಾವಿಬ್ಬರೂ ಸಾಧ್ಯವಿರುವಷ್ಟು ಪ್ರಯತ್ನಿಸುತ್ತೇವೆ. ಇಂತಹ ಕಠಿಣ ಸಮಯದಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಹಾರ್ದಿಕ್ ಹಾಗೂ ನತಾಶಾ 2020ರಲ್ಲಿ ವಿವಾಹವಾಗಿದ್ದರು. ಕಳೆದ ಐಪಿಎಲ್‌ ವೇಳೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗಿದ್ದ ‘ಪಾಂಡ್ಯ’ ಹೆಸರನ್ನು ನತಾಶಾ ಕಿತ್ತು ಹಾಕಿದ ಬಳಿಕ ವಿಚ್ಚೇದನ ವದಂತಿ ಹಬ್ಬಿತ್ತು.

click me!