Ind vs Pak ಭಾರತ-ಪಾಕಿಸ್ತಾನ ಸರಣಿ ಆತಿಥ್ಯಕ್ಕೆ ಇಂಗ್ಲೆಂಡ್‌ ಆಫರ್‌! ನಯವಾಗಿ No ಎಂದ BCCI

Published : Sep 29, 2022, 11:03 AM IST
Ind vs Pak ಭಾರತ-ಪಾಕಿಸ್ತಾನ ಸರಣಿ ಆತಿಥ್ಯಕ್ಕೆ ಇಂಗ್ಲೆಂಡ್‌ ಆಫರ್‌! ನಯವಾಗಿ No ಎಂದ BCCI

ಸಾರಾಂಶ

* ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಟೆಸ್ಟ್ ಸರಣಿಗೆ ಇಂಗ್ಲೆಂಡ್ ಆಸಕ್ತಿ * ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ತೀರ್ಮಾನವನ್ನು ನಯವಾಗಿ ತಿರಸ್ಕರಿಸಿದ ಬಿಸಿಸಿಐ, ಪಿಸಿಬಿ * ಭಾರತ-ಪಾಕ್ ನಡುವೆ 2013ರ ಬಳಿಕ ಯಾವುದೇ ಮಾದರಿಯ ದ್ವಿಪಕ್ಷೀಯ ಸರಣಿ ನಡೆದಿಲ್ಲ.

ಲಂಡನ್‌(ಸೆ.29): ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್‌ ಸರಣಿಗೆ ಆತಿಥ್ಯ ವಹಿಸಲು ಸಿದ್ಧ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ(ಇಸಿಬಿ) ಆಫರ್‌ ನೀಡಿದ್ದು, ಬಿಸಿಸಿಐ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಎರಡೂ ಆಫರ್‌ ತಿರಸ್ಕರಿಸಿವೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು 2007ರ ಬಳಿಕ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ. 2013ರ ಬಳಿಕ ಯಾವುದೇ ಮಾದರಿಯ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಬದ್ಧವೈರಿಗಳ ನಡುವಿನ ಸರಣಿಗೆ ಅಭಿಮಾನಿಗಳಿಂದ ಬೇಡಿಕೆ ಇದ್ದರೂ ಭಾರತ ಸರ್ಕಾರ ಅನುಮತಿ ನೀಡದ ಕಾರಣ ಬಿಸಿಸಿಐ ಸರಣಿ ಆಯೋಜಿಸಲು ಸಾಧ್ಯವಾಗಿಲ್ಲ. ಪಿಸಿಬಿ ಹಲವು ಬಾರಿ ಮನವಿ ಮಾಡಿದರೂ ಭಾರತ ಸರ್ಕಾರ ಪುರಸ್ಕರಿಸಿಲ್ಲ.

ಇದೀಗ ಇಸಿಬಿಯ ಉಪಾಧ್ಯಕ್ಷ ಮಾರ್ಟಿನ್‌ ಡಾರ್ಲೊ ಪಾಕಿಸ್ತಾನಕ್ಕೆ ತೆರಳಿದ್ದು, ಪಿಸಿಬಿ ಮುಖ್ಯಸ್ಥ ರಮೀಜ್‌ ರಾಜಾ ಬಳಿ ಈ ವಿಷಯ ಪ್ರಸ್ತಾಪಿಸಿದ್ದಾರೆ. ಆದರೆ ಇಸಿಬಿ ಪ್ರಸ್ತಾಪವನ್ನು ಪಿಸಿಬಿ ಒಪ್ಪಲಿಲ್ಲ ಎಂದು ತಿಳಿದುಬಂದಿದೆ. 2008ರ ಲಂಕಾ ಕ್ರಿಕೆಟ್‌ ತಂಡದ ಮೇಲಿನ ಭಯೋತ್ಪಾದಕರ ದಾಳಿಯ ಬಳಿಕ ಸುಮಾರು 10 ವರ್ಷಕ್ಕೂ ಹೆಚ್ಚು ಕಾಲ ಪಾಕಿಸ್ತಾನಕ್ಕೆ ಯಾವ ಅಂತಾರಾಷ್ಟ್ರೀಯ ತಂಡವೂ ಪ್ರವಾಸ ಕೈಗೊಂಡಿರಲಿಲ್ಲ. ಬಹಳ ಕಷ್ಟಪಟ್ಟು ಅಗ್ರ ತಂಡಗಳನ್ನು ಮತ್ತೆ ಪಾಕಿಸ್ತಾನಕ್ಕೆ ಕರೆಸಿಕೊಳ್ಳಲಾಗಿದೆ. ಹೀಗಿರುವಾಗ ತಟಸ್ಥ ಸ್ಥಳದಲ್ಲಿ ಭಾರತ ವಿರುದ್ಧ ಸರಣಿಗೆ ಒಪ್ಪುವುದು ಸರಿಯಲ್ಲ ಎಂದು ರಾಜಾ ಹೇಳಿದ್ದಾರೆ ಎನ್ನಲಾಗಿದೆ.

ಮೊದಲನೆಯದಾಗಿ ಇಂಗ್ಲೆಂಡ್‌ ಕ್ರಿಕೆಟ್ ಮಂಡಳಿಯು, ತಮ್ಮ ತವರಿನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷಿಯ ಸರಣಿ ಆಯೋಜಿಸಲು ಒಲವು ತೋರಿರುವುದೇ ಕೊಂಚ ವಿಚಿತ್ರ ಎನಿಸುತ್ತಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಯ ಬಗ್ಗೆ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಭಾರತ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಸದ್ಯದ ಮಟ್ಟಿಗಂತೂ ಯಥಾಸ್ಥಿತಿ ಮುಂದುವರೆಯಲಿದೆ. ನಾವು ಪಾಕಿಸ್ತಾನ ವಿರುದ್ದ ಬಹುರಾಷ್ಟ್ರಗಳು ಟೂರ್ನಿಯಲ್ಲಿ ಮಾತ್ರ ಆಡಲಿದ್ದೇವೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.

ಪಾಕಿಸ್ತಾನಿ ಧ್ವಜವನ್ನು ಕಾಲಿನಲ್ಲಿ ಎತ್ತಿಟ್ಟ ಮೊಹಮದ್‌ ರಿಜ್ವಾನ್‌, ವಿಡಿಯೋ ವೈರಲ್!

ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟ ಹಿನ್ನೆಲೆಯಲ್ಲಿ ಉಭಯ ತಂಡಗಳ ನಡುವೆ ಕಳೆದೊಂದ ದಶಕದಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಬಹುರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಕಪ್ ಟೂರ್ನಿ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್‌ ತಂಡಗಳು ಮುಖಾಮುಖಿಯಾಗುತ್ತಿವೆ. 

ಇರಾನಿ: ಶೇಷ ಭಾರತ ತಂಡದಲ್ಲಿ ಮಯಾಂಕ್‌ ಅಗರ್‌ವಾಲ್‌

ನವದೆಹಲಿ: ಅ.1ರಿಂದ 5ರ ವರೆಗೂ ರಾಜ್‌ಕೋಟ್‌ನಲ್ಲಿ 2019-20ರ ರಣಜಿ ಟ್ರೋಫಿ ಚಾಂಪಿಯನ್ಸ್‌ ಸೌರಾಷ್ಟ್ರ ವಿರುದ್ಧ ನಡೆಯಲಿರುವ ಇರಾನಿ ಟ್ರೋಫಿ ಪ್ರಥಮ ದರ್ಜೆ ಪಂದ್ಯಕ್ಕೆ ಶೇಷ ಭಾರತ(ರೆಸ್ಟ್‌ ಆಫ್‌ ಇಂಡಿಯಾ) ತಂಡ ಪ್ರಕಟಗೊಂಡಿದೆ. ತಂಡಕ್ಕೆ ಹನುಮ ವಿಹಾರಿ ನಾಯಕರಾಗಿದ್ದು, ಕರ್ನಾಟಕದ ಮಯಾಂಕ್‌ ಅಗರ್‌ವಾಲ್‌ ಸ್ಥಾನ ಪಡೆದಿದ್ದಾರೆ.

ತಂಡ: ವಿಹಾರಿ(ನಾಯಕ), ಮಯಾಂಕ್‌ ಅಗರ್‌ವಾಲ್‌, ಪ್ರಿಯಾಂಕ್‌ ಪಾಂಚಾಲ್‌, ಅಭಿಮನ್ಯು ಈಶ್ವರನ್‌, ಯಶ್‌ ಧುಳ್‌, ಸರ್ಫರಾಜ್‌ ಖಾನ್‌, ಯಶಸ್ವಿ ಜೈಸ್ವಾಲ್‌, ಕೆ.ಎಸ್‌.ಭರತ್‌, ಉಪೇಂದ್ರ ಯಾದವ್‌, ಜಯಂತ್‌ ಯಾದವ್‌, ಸೌರಭ್‌ ಕುಮಾರ್‌, ಸಾಯಿಕಿಶೋರ್‌, ಮುಕೇಶ್‌ ಕುಮಾರ್‌, ಉಮ್ರಾನ್‌ ಮಲಿಕ್‌, ಕುಲ್ದೀಪ್‌ ಸೇನ್‌, ಆರ್ಜನ್‌ ನಾಗ್ವಸ್ವಾಲಾ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!