IND vs SA T20 ಸೌತ್ ಆಫ್ರಿಕಾ ವಿರುದ್ಧ ಭಾರತ ಶುಭಾರಂಭ, 8 ವಿಕೆಟ್ ಭರ್ಜರಿ ಗೆಲುವು!

By Suvarna NewsFirst Published Sep 28, 2022, 10:31 PM IST
Highlights

ಸೌತ್ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. 
 

ತಿರುವನಂತಪುರಂ(ಸೆ.28):  ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಲೋ ಸ್ಕೋರ್ ಗೇಮ್ ಆಗಿದ್ದರೂ, ಅಷ್ಟೇ ರೋಚಕತೆಯಿಂದ ಕೂಡಿತ್ತು. ತಿರುವನಂತಪುರಂನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. 

ಸೌತ್ ಆಫ್ರಿಕಾ ತಂಡವನ್ನು 106 ರನ್‌ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಸುಲಭ ಗುರಿ ಪಡೆದಿತ್ತು. ಆದರೆ ಟಾರ್ಗೆಟ್ ಚೇಸಿಂಗ್ ಸುಲಭವಾಗಿರಲಿಲ್ಲ. ಕೆಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಜೊತೆಟಾದಲ್ಲಿ ಕೇವಲ 9ರನ್ ಮಾತ್ರ ಮೂಡಿಬಂತು. ನಾಯಕ ರೋಹಿತ್ ಶರ್ಮಾ ಶೂನ್ಯ ಸುತ್ತಿದರು. ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಅನುಭವಿಸಿದರು. ಕೊಹ್ಲಿ ಕೇವಲ 3 ರನ್ ಸಿಡಿಸಿ ಔಟಾದರು.

ಕೆಎಲ್ ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಟ್ರ್ಯಾಕ್‌ಗೆ ಮರಳಿತು. ರಾಹುಲ್ ಹಾಗೂ ಸೂರ್ಯಕುಮಾರ್ ಜೊತೆಯಾಟ ಸೌತ್ ಆಫ್ರಿಕಾ ತಂಡಕ್ಕೆ ತೀವ್ರ ತಲೆನೋವು ತಂದಿತು. ರಾಹುಲ್ ಹಾಗೂ ಸೂರ್ಯಕುಮಾರ್ ಯಾದವ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ರಾಹುಲ್ ಅಜೇಯ 51 ರನ್ ಸಿಡಿಸಿದರೆ ಸೂರ್ಯಕುಮಾರ್ ಯಾದವ್ ಅಜೇಯ 50 ರನ್ ಸಿಡಿಸಿದರು. 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.

ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ತೆರಳಿ ನವರಾತ್ರಿ ಆಚರಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ ಕೇಶವ್‌ ಮಹಾರಾಜ್‌!

ಟಿ20 ರಾರ‍ಯಂಕಿಂಗ್‌: 2ನೇ ಸ್ಥಾನಕ್ಕೇರಿದ ಸೂರ್ಯ

ದುಬೈ: ಭಾರತದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ ಐಸಿಸಿ ಟಿ20 ಬ್ಯಾಟರ್‌ಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಏರಿಕೆ ಕಂಡು 2ನೇ ಸ್ಥಾನ ಪಡೆದಿದ್ದಾರೆ. ಸೂರ್ಯ ಸದ್ಯ 801 ರೇಟಿಂಗ್‌ ಅಂಕಗಳನ್ನು ಹೊಂದಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ 3ನೇ ಟಿ20 ಪಂದ್ಯದಲ್ಲಿ 36 ಎಸೆತಗಳಲ್ಲಿ 69 ರನ್‌ ಸಿಡಿಸಿದ್ದು, ರಾರ‍ಯಂಕಿಂಗ್‌ನಲ್ಲಿ ಮೇಲೇರಲು ನೆರವಾಯಿತು. ಈ ವರ್ಷ ಆಗಸ್ಟ್‌ನಲ್ಲಿ ಸೂರ್ಯ ಮೊದಲ ಬಾರಿಗೆ 2ನೇ ಸ್ಥಾನ ಪಡೆದಿದ್ದರು. ಭಾರತದ ನಾಯಕ ರೋಹಿತ್‌ ಶರ್ಮಾ 13, ವಿರಾಟ್‌ ಕೊಹ್ಲಿ 15ನೇ ಸ್ಥಾನ ಪಡೆದಿದ್ದಾರೆ. ಕೆ.ಎಲ್‌.ರಾಹುಲ್‌ 22ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಟಿ20 ರಾರ‍ಯಂಕಿಂಗ್‌: ನಂ.1 ಸ್ಥಾನದಲ್ಲೇ ಉಳಿದ ಭಾರತ
ಆಸ್ಪ್ರೇಲಿಯಾ ವಿರುದ್ಧದ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದ ಭಾರತ ಐಸಿಸಿ ಟಿ20 ತಂಡಗಳ ರಾರ‍ಯಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ ಸೋತಿದ್ದು ಸಹ ಭಾರತಕ್ಕೆ ಲಾಭವಾಯಿತು. ಸರಣಿ ಗೆಲುವಿನಿಂದ ಭಾರತ 1 ಅಂಕ ಸಂಪಾದಿಸಿ, ಒಟ್ಟು ಅಂಕಗಳನ್ನು 268ಕ್ಕೆ ಹೆಚ್ಚಿಸಿಕೊಂಡಿದೆ. 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್‌(261)ಗಿಂತ ಭಾರತ 7 ಅಂಕ ಮುಂದಿದೆ. ಪಾಕಿಸ್ತಾನ ತಂಡ ಸಹ ದಕ್ಷಿಣ ಆಫ್ರಿಕಾದಷ್ಟೇ ಅಂಕಗಳನ್ನು ಹೊಂದಿದ್ದು ಜಂಟಿ 3ನೇ ಸ್ಥಾನದಲ್ಲಿದೆ. ಇಂಗ್ಲೆಂಡ್‌ ವಿರುದ್ಧ ಉಳಿದ 3 ಪಂದ್ಯಗಳನ್ನು ಗೆದ್ದರೆ 2ನೇ ಸ್ಥಾನಕ್ಕೇರಬಹುದು. ಹಾಲಿ ವಿಶ್ವ ಚಾಂಪಿಯನ್‌ ಆಸ್ಪ್ರೇಲಿಯಾ 250 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಭಾರತ ವಿರುದ್ಧ ಸರಣಿ ಸೋತಿದ್ದಕ್ಕೆ 1 ಅಂಕ ಕಡಿತಗೊಂಡಿದೆ.

click me!