ಡ್ರೀಮ್‌ 11ನಿಂದ ಬರೋಬ್ಬರಿ 40,000 ಕೋಟಿ ಜಿಎಸ್‌ಟಿ ವಂಚನೆ? ಗೇಮಿಂಗ್‌ ಕಂಪನಿಗೆ ನೋಟಿಸ್‌ ಸಲ್ಲಿಕೆ

By BK Ashwin  |  First Published Sep 26, 2023, 12:41 PM IST

ಡ್ರೀಮ್ 11 ಸ್ಟಾರ್ಟಪ್‌ನ ಪೋಷಕ ಕಂಪನಿ ಡ್ರೀಮ್ ಸ್ಪೋರ್ಟ್ಸ್ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಮತ್ತು ಬೆಟ್‌ಗಳ ಮೇಲೆ 28% ಜಿಎಸ್‌ಟಿ ಪಾವತಿಸದಿದ್ದಕ್ಕಾಗಿ ಅಧಿಕಾರಿಗಳು ನೀಡಿದ ಶೋಕಾಸ್ ನೋಟಿಸ್ ಅನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ. 


ನವದೆಹಲಿ (ಸೆಪ್ಟೆಂಬರ್ 26, 2023): ಗೇಮಿಂಗ್ ಕಂಪನಿಗಳಿಗೆ ಇತ್ತೀಚೆಗೆ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಹೆಚ್ಚು ಮಾಡಿದೆ. ಈ ನಂತರ ಗೇಮ್ಸ್‌ಕ್ರಾಫ್ಟ್‌ಗೆ ಜಿಎಸ್‌ಟಿ ವಂಚನೆ ನೋಟಿಸ್‌ ಬಂದಿದ್ದ ಕಾರಣ ಆ ಕಂಪನಿ ನೋಟಿಸ್‌ ವಿರುದ್ಧ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಹರ್ಷ್ ಜೈನ್ ನೇತೃತ್ವದ ಡ್ರೀಮ್ 11 ಸ್ಟಾರ್ಟಪ್‌ ಕಂಪನಿ ಸಹ ಆಪಾದಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಗಾಗಿ ತೆರಿಗೆ ಅಧಿಕಾರಿಗಳು ನೀಡಿದ ಶೋಕಾಸ್ ನೋಟಿಸ್ ವಿರುದ್ಧ ಕಾನೂನು ಮಾರ್ಗ ತೆಗೆದುಕೊಂಡಿದೆ.

ಡ್ರೀಮ್ 11 ಸ್ಟಾರ್ಟಪ್‌ನ ಪೋಷಕ ಕಂಪನಿ ಡ್ರೀಮ್ ಸ್ಪೋರ್ಟ್ಸ್ ಜಿಎಸ್‌ಟಿ ವಂಚನೆ ಆರೋಪದ ಮೇಲೆ ಮತ್ತು ಬೆಟ್‌ಗಳ ಮೇಲೆ 28% ಜಿಎಸ್‌ಟಿ ಪಾವತಿಸದಿದ್ದಕ್ಕಾಗಿ ಅಧಿಕಾರಿಗಳು ನೀಡಿದ ಶೋಕಾಸ್ ನೋಟಿಸ್ ಅನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. 

Tap to resize

Latest Videos

ಇದನ್ನು ಓದಿ: ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಹಲವು ಪ್ರೊಫೈಲ್‌ಗಳನ್ನು ರಚಿಸೋದು ಹೇಗೆ ನೋಡಿ..

ಡ್ರೀಮ್ 11 ವಿರುದ್ಧ ಬರೋಬ್ಬರಿ 40,000 ಕೋಟಿ ರೂ. ಮೊತ್ತದ ತೆರಿಗೆ ವಂಚನೆ ಅರೋಪ ಕೇಳಿಬಂದಿದ್ದು, ಇದು ದೇಶದ ಪರೋಕ್ಷ ತೆರಿಗೆಯ ಇತಿಹಾಸದಲ್ಲಿ ಅಂತಹ ದೊಡ್ಡ ಕ್ಲೈಮ್ ಆಗಲಿದೆ ಎಂದು ಹೇಳಲಾಗ್ತಿದೆ. ಪ್ರಸ್ತುತ, ಬೆಂಗಳೂರು ಮೂಲದ ಗೇಮ್ಸ್‌ಕ್ರಾಫ್ಟ್‌ಗೆ ನೀಡಲಾದ INR 21,000 Cr ಶೋಕಾಸ್ ನೋಟಿಸ್ ಅಂತಹ ದೊಡ್ಡ ಹಕ್ಕು ಎಂದು ಹೇಳಲಾಗುತ್ತದೆ.

ಡ್ರೀಮ್11 ದೇಶದ ಫ್ಯಾಂಟಸಿ ಗೇಮಿಂಗ್ ಉದ್ಯಮದಲ್ಲಿ ಮೌಲ್ಯಮಾಪನ ಮತ್ತು ಬಳಕೆದಾರರ ನೆಲೆಯಲ್ಲಿ ಪ್ರಮುಖ ಕಂಪನಿಯಾಗಿದೆ. ಸ್ಟಾರ್ಟ್‌ಅಪ್ 8 ಬಿಲಿಯನ್‌ ಡಾಲರ್‌ಗಿಂತ ಹೆಚ್ಚು ಮೌಲ್ಯದ್ದಾಗಿದೆ ಮತ್ತು ಅದರ ಸ್ಪೋರ್ಟ್ಸ್ ಫ್ಯಾಂಟಸಿ ಪ್ಲಾಟ್‌ಫಾರ್ಮ್‌ನಲ್ಲಿ 180 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಮಾರ್ಚ್ 31, 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ INR 3,840.7 Cr ಕಾರ್ಯಾಚರಣೆಯ ಆದಾಯದಲ್ಲಿ 142 ಕೋಟಿ ರೂ. ನಿವ್ವಳ ಲಾಭವನ್ನು ವರದಿ ಮಾಡಿದೆ.

ಇದನ್ನೂ ಓದಿ: 3 ವರ್ಷದ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ರೆ, ನಿಮ್ಮ ಬಳಿ ಈಗ 39 ಲಕ್ಷ ಇರ್ತಿತ್ತು!

ಡ್ರೀಮ್ ಸ್ಪೋರ್ಟ್ಸ್‌ಗೆ ಗೇಮ್‌ಸ್‌ಕ್ರಾಫ್ಟ್‌ನ 21,000 ಕೋಟಿ ರೂ.ಗಿಂತ ಗಮನಾರ್ಹವಾಗಿ ಹೆಚ್ಚಿನ ತೆರಿಗೆ ಕ್ಲೈಮ್‌ಗಳೊಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದು ಪ್ರಸ್ತುತ ಪರೋಕ್ಷ ತೆರಿಗೆಯ ಇತಿಹಾಸದಲ್ಲಿ ಅಂತಹ ದೊಡ್ಡ ಕ್ಲೈಮ್ ಆಗಿದೆ. ಮುಂಬೈ ಮೂಲದ ಸಂಸ್ಥೆಯ ವಿರುದ್ಧದ ಕ್ಲೈಮ್‌ಗಳು ಸುಮಾರು 40,000 ಕೋಟಿ ರೂಪಾಯಿಗಳ ಮೊತ್ತವಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಜನರು ತಿಳಿಸಿದ್ದಾರೆ. ಆದರೆ 25,000 ಕೋಟಿ ರೂ. ಮೊತ್ತದ ನೋಟಿಸ್‌ ನೀಡಲಾಗಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ನೀಡಿದೆ. ಆದರೆ, ಈ ಬೆಳವಣಿಗೆಯ ಬಗ್ಗೆ ಡ್ರೀಮ್ ಸ್ಪೋರ್ಟ್ಸ್ ಪ್ರತಿಕ್ರಿಯೆ ನೀಡಿಲ್ಲ.

2017 ಮತ್ತು ಜೂನ್ 2022 ರ ನಡುವೆ 77,000 ಕೋಟಿ ರೂ. ಬೆಟ್ಟಿಂಗ್ ಮೊತ್ತದ ಮೇಲೆ ಪರೋಕ್ಷ ತೆರಿಗೆ ವಂಚನೆ ಆರೋಪಕ್ಕಾಗಿ GST ಗುಪ್ತಚರ ನಿರ್ದೇಶನಾಲಯವು ಕಳೆದ ವರ್ಷ ಗೇಮ್ಸ್‌ಕ್ರಾಫ್ಟ್‌ಗೆ 21,000 ಕೋಟಿ ರೂ. ಶೋಕಾಸ್ ನೋಟಿಸ್ ನೀಡಿತ್ತು ಬಳಿಕ, ಕರ್ನಾಟಕ ಹೈಕೋರ್ಟ್ ನೋಟಿಸ್ ರದ್ದುಗೊಳಿಸಿತ್ತು. ಆದರೆ, ತೆರಿಗೆ ಇಲಾಖೆ ಸಲ್ಲಿಸಿದ ಅರ್ಜಿಯ ಮೇಲೆ ಈ ತಿಂಗಳ ಆರಂಭದಲ್ಲಿ ಕರ್ನಾಟಕ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್ ತಡೆಹಿಡಿಯಿತು.

ಇದನ್ನೂ ಓದಿ: ಭಾರತದ ನಂ. 1 ಸ್ಮಾರ್ಟ್‌ಫೋನ್ ರಫ್ತುದಾರ ಯಾವ್ದು ಗೊತ್ತಾ? ದೇಶದ ನಂ. 1 ಬ್ರ್ಯಾಂಡ್‌ಗೆ ಶಾಕ್‌!

ಸುಪ್ರೀಂ ಕೋರ್ಟ್‌ನ ತೀರ್ಪು ಸುಮಾರು 40 ಗೇಮಿಂಗ್ ಕಂಪನಿಗಳಿಗೆ ಇಂತಹ ಶೋಕಾಸ್ ನೋಟಿಸ್ ಕಳುಹಿಸಲು ಜಿಎಸ್‌ಟಿ ಇಲಾಖೆಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಲಾಗಿದೆ. Dream11 ಈ ಪಟ್ಟಿಯಲ್ಲಿರುವ ಕಂಪನಿಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಬೆಂಗಳೂರು ಸೇರಿ ಈ ನಗರಗಳ ಆ್ಯಪಲ್‌ ಫೋನ್‌ ಪ್ರಿಯರಿಗೆ ಗುಡ್‌ ನ್ಯೂಸ್‌: 10 ನಿಮಿಷದಲ್ಲೇ ನಿಮ್ಮ ಮನೆಗೆ ಬರುತ್ತೆ ಐಫೋನ್‌ 15!

click me!