'ನಾವು ಭಾರತಕ್ಕೆ ಯುದ್ದ ಮಾಡಲು ಹೋಗುತ್ತಿಲ್ಲ' : ಇಂಡೋ-ಪಾಕ್ ವಿಶ್ವಕಪ್‌ ಬಗ್ಗೆ ತುಟಿಬಿಚ್ಚಿದ ಪಾಕ್ ವೇಗಿ ಹ್ಯಾರಿಸ್ ರೌಫ್

By Naveen Kodase  |  First Published Sep 26, 2023, 12:25 PM IST

ಭಾರತದ ಎದುರು ನೀವು ಎಷ್ಟು ಆಕ್ರಮಣಕಾರಿಯಾಗಿ ಆಡುತ್ತೀರ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೌಫ್, ನಾನ್ಯಾಕೆ ಅಲ್ಲಿಗೆ ಹೋಗಿ ಭಾರತೀಯರ ಎದುರು ಹೋರಾಟ ಮಾಡಲಿ? ಅಷ್ಟಕ್ಕೂ ಇದು ಕ್ರಿಕೆಟ್ ಹೊರತು ಯುದ್ದವಲ್ಲ" ಎಂದು ಪಾಕಿಸ್ತಾನದ ಬಲಗೈ ವೇಗಿ ಹ್ಯಾರಿಸ್ ರೌಫ್ ಹೇಳಿದ್ದಾರೆ.


ಕರಾಚಿ(ಸೆ.26): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯವನ್ನು ವಹಿಸಿದೆ. ಅದರಲ್ಲೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೇ ವೇಳೆ ಇಂಡೋ-ಪಾಕ್ ನಡುವಿನ ಹೈವೋಲ್ಟೇಜ್‌ ಪಂದ್ಯದ ಬಗ್ಗೆ ಪತ್ರಕರ್ತನೊಬ್ಬನ ಪ್ರಶ್ನೆಗೆ ಪಾಕಿಸ್ತಾನ ತಂಡದ ಮಾರಕ ವೇಗಿ ಹ್ಯಾರಿಸ್ ರೌಫ್ ಖಡಕ್ ಉತ್ತರ ನೀಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡವು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿತ್ತು. ಈ ವೇಳೆ ಮಾಧ್ಯಮದವರ ಪ್ರಶ್ನೆಗೆ ಹರಿತವಾಗಿ ಉತ್ತರಿಸಿದ ಹ್ಯಾರಿಸ್ ರೌಫ್, ನಾವು ಭಾರತದ ವಿರುದ್ದ ಯುದ್ದ ಮಾಡಲು ಹೋಗುತ್ತಿಲ್ಲ, ಕ್ರಿಕೆಟ್ ಆಡಲು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.

Latest Videos

undefined

ಕೊನೆಗೂ ಪಾಕಿಸ್ತಾನ ತಂಡಕ್ಕೆ ವೀಸಾ ಅನುಮತಿಸಿದ ಕೇಂದ್ರ, ಸೆ.27ಕ್ಕೆ ಭಾರತಕ್ಕೆ ಆಗಮನ!

ಭಾರತದ ಎದುರು ನೀವು ಎಷ್ಟು ಆಕ್ರಮಣಕಾರಿಯಾಗಿ ಆಡುತ್ತೀರ ಎನ್ನುವ ಪ್ರಶ್ನೆಗೆ ಉತ್ತರಿಸಿದ ರೌಫ್, ನಾನ್ಯಾಕೆ ಅಲ್ಲಿಗೆ ಹೋಗಿ ಭಾರತೀಯರ ಎದುರು ಹೋರಾಟ ಮಾಡಲಿ? ಅಷ್ಟಕ್ಕೂ ಇದು ಕ್ರಿಕೆಟ್ ಹೊರತು ಯುದ್ದವಲ್ಲ" ಎಂದು ಪಾಕಿಸ್ತಾನದ ಬಲಗೈ ವೇಗಿ ಹ್ಯಾರಿಸ್ ರೌಫ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಹ್ಯಾರಿಸ್ ರೌಫ್ ಸೂಪರ್ 4 ಹಂತದಲ್ಲಿ ಭುಜದ ನೋವಿಗೆ ಒಳಗಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ಹ್ಯಾರಿಸ್ ರೌಫ್ ಸಂಪೂರ್ಣ ಫಿಟ್ ಆಗಿದ್ದು, ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪರ ಮಿಂಚಲು ಸಜ್ಜಾಗಿದ್ದಾರೆ.

"ಯಾವುದೇ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುವುದು ದೊಡ್ಡ ಸಂಗತಿಯಾಗಿದೆ. ಈ ಹಿಂದಿಗಿಂತಲೂ ನನ್ನ ಫಿಟ್ನೆಸ್ ಉತ್ತಮವಾಗಿದೆ. ನಮ್ಮ ತಂಡದಲ್ಲಿಯೂ ಚೆನ್ನಾಗಿಯೇ ಆತ್ಮವಿಶ್ವಾಸವಿದೆ. ನಾನು ಹೊಸ ಚೆಂಡಿನೊಂದಿಗೆ ದಾಳಿ ನಡೆಸಬೇಕೋ ಅಥವಾ ಹಳೆ ಚೆಂಡಿನೊಂದಿಗೆ ದಾಳಿ ನಡೆಸಬೇಕೋ ಎನ್ನುವುದನ್ನು  ಟೀಂ ಮ್ಯಾನೇಜ್‌ಮೆಂಟ್ ನಿರ್ಧರಿಸಲಿದೆ" ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ. "ಈ ಬಾರಿಯ ವಿಶ್ವಕಪ್‌ಗೆ ಯಾವುದೇ ನಿರ್ದಿಷ್ಟ ಗುರಿಗಳಿಲ್ಲ. ವೈಯುಕ್ತಿಕ ಪ್ರದರ್ಶನಕ್ಕಿಂತ ತಂಡದ ಉತ್ತಮ ಪ್ರದರ್ಶನ ನನಗೆ ಹೆಚ್ಚು ತೃಪ್ತಿ ಸಿಗುತ್ತದೆ" ಎಂದು ರೌಫ್ ಹೇಳಿದ್ದಾರೆ. 

ಕೊನೆಗೂ ತನ್ನ ಇನಿಯನ ಮೇಲಿರುವ ಪ್ರೀತಿಯ ಗುಟ್ಟು ಬಿಚ್ಚಿಟ್ಟ ಸಾರಾ..! ತೆಂಡುಲ್ಕರ್ ಪುತ್ರಿಯ ಟ್ವೀಟ್ ವೈರಲ್

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ಪಾಕ್ ತಂಡದ ಪ್ರಮುಖ ವೇಗಿ ನಸೀಂ ಶಾ, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡವು ಇತ್ತೀಚೆಗಷ್ಟೇ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಫೈನಲ್‌ಗೇರಲು ವಿಫಲವಾಗಿತ್ತು. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡವು ಕೂಡಾ ಕಪ್ ಗೆಲ್ಲಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.

ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಹೀಗಿದೆ ನೋಡಿ:

ಬಾಬರ್ ಅಜಂ(ನಾಯಕ), ಶಾದಾಬ್ ಖಾನ್(ಉಪನಾಯಕ), ಮೊಹಮ್ಮದ್ ರಿಜ್ವಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಸೌದ್ ಶಕೀಲ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹಮ್ಮದ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸೀಂ ಜೂನಿಯರ್, ಅಘಾ ಸಲ್ಮಾನ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಮಿರ್.

click me!