ನಿಯಮದ ಪ್ರಕಾರ ಪ್ರತಿ ರಾಜ್ಯ ಸಂಸ್ಥೆಯು ಗರಿಷ್ಠ ಮೂವರು ಹೊರರಾಜ್ಯದ (ಅತಿಥಿ) ಕ್ರಿಕೆಟಿಗರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಸದ್ಯ ಭಾರತದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಕೆಲ ದುರ್ಬಲ ತಂಡಗಳು ಹೊರ ರಾಜ್ಯದ ಆಟಗಾರರನ್ನು ತಮ್ಮ ತಂಡಕ್ಕೆ ಆಹ್ವಾನಿಸಿ ಅವರಿಗೆ ಪಂದ್ಯದ ಸಂಭಾವನೆಯ ಜೊತೆ ಹೆಚ್ಚುವರಿ ವೇತನವನ್ನೂ ನೀಡುತ್ತಿವೆ.
ಗೋವಾ(ಸೆ.26): ತಮ್ಮ ತವರು ರಾಜ್ಯ ಬಿಟ್ಟು ಬೇರೆ ರಾಜ್ಯ ತಂಡಗಳಿಗೆ ಆಡುವ ಕ್ರಿಕೆಟಿಗರಿಗೆ ಹೆಚ್ಚುವರಿ ವೇತನ ನೀಡುವ ಅಗತ್ಯವಿಲ್ಲ ಎಂಬ ಮಹತ್ವದ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಸಂಸ್ಥೆ(ಬಿಸಿಸಿಐ) ಕೈಗೊಂಡಿದೆ. ಸೋಮವಾರ ಇಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಬಿಸಿಸಿಐ ಪ್ರಸ್ತಾಪಿಸಿದ ಈ ಮಹತ್ವದ ವಿಚಾರಕ್ಕೆ ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಮ್ಮತಿಸಿದವು ಎಂದು ತಿಳಿದುಬಂದಿದೆ.
ಈ ನಿಯಮವು 2023-24ರ ಋತುವಿನಿಂದಲೇ ಜಾರಿಗೆ ಬರಲಿದೆಯೇ ಎನ್ನುವುದನ್ನು ಬಿಸಿಸಿಐ ಸ್ಪಷ್ಟಪಡಿಸಿಲ್ಲ. ನಿಯಮದ ಪ್ರಕಾರ ಪ್ರತಿ ರಾಜ್ಯ ಸಂಸ್ಥೆಯು ಗರಿಷ್ಠ ಮೂವರು ಹೊರರಾಜ್ಯದ (ಅತಿಥಿ) ಕ್ರಿಕೆಟಿಗರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಸದ್ಯ ಭಾರತದಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಕೆಲ ದುರ್ಬಲ ತಂಡಗಳು ಹೊರ ರಾಜ್ಯದ ಆಟಗಾರರನ್ನು ತಮ್ಮ ತಂಡಕ್ಕೆ ಆಹ್ವಾನಿಸಿ ಅವರಿಗೆ ಪಂದ್ಯದ ಸಂಭಾವನೆಯ ಜೊತೆ ಹೆಚ್ಚುವರಿ ವೇತನವನ್ನೂ ನೀಡುತ್ತಿವೆ. ಈ ಅಭ್ಯಾಸಕ್ಕೆ ಕಡಿವಾಣ ಹಾಕಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಬಿಸಿಸಿಐ, ಅತಿಥಿ ಆಟಗಾರರನ್ನೂ ತಂಡದ ಉಳಿದೆಲ್ಲಾ ಆಟಗಾರರಂತೆಯೇ ಕಾಣಬೇಕು ಎಂದು ರಾಜ್ಯ ಸಂಸ್ಥೆಗಳಿಗೆ ಸೂಚಿಸಿದ್ದು, ಎಲ್ಲಾ ಆಟಗಾರರಿಗೆ ಸಮಾನದ ವೇತನ ನೀಡುವಂತೆ ತಿಳಿಸಿದೆ.
undefined
ಕೊನೆಗೂ ಪಾಕಿಸ್ತಾನ ತಂಡಕ್ಕೆ ವೀಸಾ ಅನುಮತಿಸಿದ ಕೇಂದ್ರ, ಸೆ.27ಕ್ಕೆ ಭಾರತಕ್ಕೆ ಆಗಮನ!
ತಮ್ಮ ವೃತ್ತಿಬದುಕಿನ ಅಂತ್ಯದಲ್ಲಿರುವ ಹಲವು ಕ್ರಿಕೆಟಿಗರು ತಮ್ಮ ರಾಜ್ಯ ಸಂಸ್ಥೆಗಳನ್ನು ತೊರೆದು ಇತರ ರಾಜ್ಯಗಳ ಪರ ಆಡುವುದು ಸಾಮಾನ್ಯ. ಕೆಲ ತಾರಾ ಆಟಗಾರರು ದೊಡ್ಡ ಮೊತ್ತ ಪಡೆಯುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿರುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಿಸಿಸಿಐನ ಈ ಹೊಸ ನಿಯಮ ಅಂದಾಜು 100ಕ್ಕೂ ಹೆಚ್ಚು ಕ್ರಿಕೆಟಿಗರಿಗೆ ನಷ್ಟ ಉಂಟು ಮಾಡಲಿದೆ.
ನೆದರ್‌ಲೆಂಡ್ಸ್ ವಿರುದ್ಧ ಕರ್ನಾಟಕಕ್ಕೆ ಗೆಲುವು!
ಬೆಂಗಳೂರು: ಏಕದಿನ ವಿಶ್ವಕಪ್‌ಗೆ ಬೆಂಗಳೂರಿನ ಆಲೂರು ಮೈದಾನದಲ್ಲಿ ಸಿದ್ಧತೆ ನಡೆಸುತ್ತಿರುವ ನೆದರ್‌ಲೆಂಡ್ಸ್ ಕ್ರಿಕೆಟ್ ತಂಡ, ತನ್ನ ಅಭ್ಯಾಸದ ಭಾಗವಾಗಿ ಕರ್ನಾಟಕ ವಿರುದ್ಧ ಏಕದಿನ ಪಂದ್ಯವನ್ನಾಡಿತು. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಕರ್ನಾಟಕ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಯಾರು ಟೀಂ ಇಂಡಿಯಾವನ್ನು ಸೋಲಿಸ್ತಾರೋ ಅವರೇ 2023ರ ವಿಶ್ವಕಪ್ ಗೆಲ್ತಾರೆ: ಇಂಗ್ಲೆಂಡ್ ಮಾಜಿ ನಾಯಕನ ಭವಿಷ್ಯ
ಮೊದಲು ಬ್ಯಾಟ್ ಮಾಡಿದ ಕರ್ನಾಟಕ, 46 ಓವರಲ್ಲಿ 256 ರನ್‌ಗೆ ಆಲೌಟ್ ಆಯಿತು. ಆರ್.ಸಮರ್ಥ್ 81, ದೇವದತ್ ಪಡಿಕ್ಕಲ್ 56 ರನ್ ಗಳಿಸಿದರು. ಕಠಿಣ ಗುರಿ ಬೆನ್ನತ್ತಿದ ನೆದರ್‌ಲೆಂಡ್ಸ್ 124 ರನ್‌ಗೆ ಆಲೌಟ್ ಆಯಿತು. 10 ರನ್‌ಗೆ 7 ವಿಕೆಟ್ ಕಳೆದುಕೊಂಡಿದ್ದ ಡಚ್ ಪಡೆಗೆ ಕೆಳ ಕ್ರಮಾಂಕ ಆಸರೆಯಾಗಿ ತಂಡದ ಮೊತ್ತವನ್ನು 100 ರನ್ ದಾಟಿಸಿತು. ಬುಧವಾರ 2ನೇ ಪಂದ್ಯ ನಡೆಯಲಿದೆ.
ವಿಶ್ವಕಪ್: ಪಾಕ್ ಆಟಗಾರರಿಗೆ ಭಾರತ ವೀಸಾ ಮಂಜೂರು
ನವದೆಹಲಿ: ಏಕದಿನ ವಿಶ್ವಕಪ್‌ನಲ್ಲಿ ಆಡಲಿರುವ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸೋಮವಾರ ಭಾರತ ಸರ್ಕಾರ ವೀಸಾ ಮಂಜೂರು ಮಾಡಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಖಚಿತಪಡಿಸಿದೆ. ಪಾಕಿಸ್ತಾನ ತಂಡ ಬುಧವಾರ (ಸೆ.27) ಲಾಹೋರ್‌ನಿಂದ ಹೊರಟು ದುಬೈ ಮಾರ್ಗವಾಗಿ ಹೈದರಾಬಾದ್‌ಗೆ ಆಗಮಿಸಲಿದೆ.
ತಂಡದ ಪ್ರಯಾಣಕ್ಕೆ 48 ಗಂಟೆಗೂ ಕಡಿಮೆ ಸಮಯ ಬಾಕಿ ಇದ್ದರೂ ಇನ್ನೂ ವೀಸಾ ಸಿಕ್ಕಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ (ಪಿಸಿಬಿ) ಸೋಮವಾರ ಕಳವಳ ವ್ಯಕ್ತಪಡಿಸಿತ್ತು. ಆದರೆ ಸಂಜೆ ವೇಳೆಗೆ ವೀಸಾ ದೊರೆತಿರುವುದಾಗಿ ಐಸಿಸಿ ಸ್ಪಷ್ಟಪಡಿಸಿತು. ಪಾಕಿಸ್ತಾನ ಸೆ.29ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಅಭ್ಯಾಸ ಪಂದ್ಯವನ್ನು ಆಡಲಿದ್ದು, 2ನೇ ಅಭ್ಯಾಸ ಪಂದ್ಯವನ್ನು ಅ.3ರಂದು ಆಸ್ಟ್ರೇಲಿಯಾ ವಿರುದ್ಧ ಹೈದರಾಬಾದ್‌ನಲ್ಲೇ ಆಡಲಿದೆ.
ತಂಡದ ಮೊದಲೆರಡು ಪಂದ್ಯಗಳಿಗೂ ಹೈದರಾಬಾದ್ ಆತಿಥ್ಯ ವಹಿಸಲಿದ್ದು, ಅ.6ರಂದು ನೆದರ್‌ಲೆಂಡ್ಸ್ ಹಾಗೂ ಅ.10ರಂದು ಶ್ರೀಲಂಕಾ ವಿರುದ್ಧ ಆಡಲಿದೆ. ಆ ಬಳಿಕ ಅ.14ರಂದು ಭಾರತ ವಿರುದ್ಧ ನಡೆಯಲಿರುವ ಪಂದ್ಯವನ್ನಾಡಲು ಅಹಮದಾಬಾದ್ ಗೆ ತೆರಳಲಿದೆ.