ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಕಣಕ್ಕಿಳಿಯಲಿದ್ದಾರೆ. 23 ವರ್ಷದ ಧ್ರುವ್ ಕಳೆದ ಎರಡು ಟೆಸ್ಟ್‌ನಲ್ಲೂ ಬೆಂಚ್ ಕಾದಿದ್ದರು. ಆದ್ರೀಗ ಅವರಿಗೆ ಟೆಸ್ಟ್‌ಗೆ ಪದಾರ್ಪಣೆ ಮಾಡೋ ಸಮಯ ಬಂದು ಬಿಟ್ಟಿದೆ.
ರಾಜ್‌ಕೋಟ್(ಫೆ.13): ಇಂಗ್ಲೆಂಡ್ ವಿರುದ್ಧದ ಕಳೆದ ಪಂದ್ಯದಲ್ಲಿ ರಜತ್ ಪಾಟೀದರ್, ಟೆಸ್ಟ್ ಕ್ರಿಕೆಟ್‌ಗೆ ಡೆಬ್ಯು ಮಾಡಿದ್ದರು. ಈಗ 3ನೇ ಟೆಸ್ಟ್‌ನಲ್ಲಿ ಮತ್ತೊಬ್ಬ ಆಟಗಾರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸಿದ್ದತೆ ನಡೆಸಿದ್ದಾರೆ. ರಾಜ್‌ಕೋಟ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾನೆ ಕೂಡ. ಯಾರಾತ ಅನ್ನೋದನ್ನ ನೀವೇ ನೋಡಿ.
ಇನ್ನುಳಿದ ಮೂರು ಟೆಸ್ಟ್‌ಗಳಲ್ಲೂ ಆಂಧ್ರವಾಲಾ ಆಡಲ್ವಾ..?
undefined
ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ಗುರುವಾರದಿಂದ ರಾಜ್‌ಕೋಟ್‌ನಲ್ಲಿ ಆರಂಭವಾಗಲಿದೆ. ಗಾಯಾಳು ಆಟಗಾರರ ಫಿಟ್ನೆಸ್ ಟೀಂ ಮ್ಯಾನೇಜ್ಮೆಂಟ್‌ಗೆ ತಲೆ ನೋವಾಗಿದೆ. ಈ ನಡುವೆ ಕಳಪೆ ಫಾರ್ಮ್ನಲ್ಲಿರುವ ಆಟಗಾರರು ಆತಂಕವನ್ನುಂಟು ಮಾಡಿದ್ದಾರೆ. ರನ್ ಗಳಿಸಲು ಪರದಾಡ್ತಿದ್ದ ಶ್ರೇಯಸ್ ಅಯ್ಯರ್‌ಗೆ ಕೊಕ್ ಕೊಡಲಾಗಿದೆ. ಆದ್ರೆ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿ, ವಿಕೆಟ್ ಮುಂದೆ ಕಳಪೆ ಪ್ರದರ್ಶನ ನೀಡುತ್ತಿರುವ ಕೆಎಸ್ ಭರತ್, ಉಳಿದ 3 ಟೆಸ್ಟ್‌ಗಳಿಗೂ ಆಯ್ಕೆಯಾಗಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಾರ್ನಿಂಗ್..!
ಭರತ್, 12 ಟೆಸ್ಟ್ಗಳಿಂದ ಹೊಡೆದಿರುವುದು ಕೇವಲ 221 ರನ್. ಒಂದೂ ಅರ್ಧಶತಕ ದಾಖಲಿಸಿಲ್ಲ. 44 ಅವರ ಬೆಸ್ಟ್ ಸ್ಕೋರ್. ಕಳೆದ ಎರಡು ಟೆಸ್ಟ್ನ ನಾಲ್ಕು ಇನ್ನಿಂಗ್ಸ್ನಲ್ಲೂ ಹೇಳಿಕೊಳ್ಳುವ ಬ್ಯಾಟಿಂಗ್ ಮಾಡಿಲ್ಲ. ಆದ್ರೆ ಅವರ ಕೀಪಿಂಗ್ ಮಾತ್ರ ಚೆನ್ನಾಗಿದೆ. ಇದೊಂದೇ ಕಾರಣಕ್ಕೆ ಅವರನ್ನ ಟೆಸ್ಟ್ ಟೀಮ್ನಲ್ಲಿ ಉಳಿಸಿಕೊಳ್ಳಲಾಗಿದೆ. ಆದ್ರೂ ಅವರು 3ನೇ ಟೆಸ್ಟ್ ಆಡೋದಿಲ್ಲ. ಯುವ ಕೀಪರ್, ಟೆಸ್ಟ್ ಡೆಬ್ಯು ಮಾಡಲಿದ್ದಾನೆ.
Jurel as keeper, Sarfaraz in 1st slip, Jaiswal in 2nd slip & Patidar in gully during practice session. [Gaurav Gupta from TOI] pic.twitter.com/BYXtXnvB9l
— Johns. (@CricCrazyJohns)ರಾಜ್‌ಕೋಟ್‌ನಲ್ಲಿ ಜುರೆಲ್ ಡ್ರಿಲ್..!
ಯೆಸ್, ರಾಜ್‌ಕೋಟ್ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಧ್ರುವ್ ಜುರೆಲ್ ಕಣಕ್ಕಿಳಿಯಲಿದ್ದಾರೆ. 23 ವರ್ಷದ ಧ್ರುವ್ ಕಳೆದ ಎರಡು ಟೆಸ್ಟ್‌ನಲ್ಲೂ ಬೆಂಚ್ ಕಾದಿದ್ದರು. ಆದ್ರೀಗ ಅವರಿಗೆ ಟೆಸ್ಟ್‌ಗೆ ಪದಾರ್ಪಣೆ ಮಾಡೋ ಸಮಯ ಬಂದು ಬಿಟ್ಟಿದೆ. ಕೆ ಎಸ್ ಭರತ್ ಡ್ರಾಪ್ ಮಾಡಿ, ಜುರೆಲ್‌ಗೆ ಚಾನ್ಸ್ ಕೊಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಹಾಗಾಗಿ ಯುಪಿ ಪ್ಲೇಯರ್, ರಾಜ್‌ಕೋಟ್‌ನಲ್ಲಿ ಇನ್ನಿಲ್ಲದಂತೆ ಅಭ್ಯಾಸ ನಡೆಸುತ್ತಿದ್ದಾರೆ. ಕೋಚ್‌ಗಳು ಜುರೆಲ್‌ರನ್ನ ಡ್ರಿಲ್ ಮಾಡುತ್ತಿದ್ದಾರೆ. ಅಲ್ಲಿಗೆ ಧೃವ್, ವೈಟ್ ಜೆರ್ಸಿ ತೊಡಲು ಕ್ಷಣಗಣನೆ ಆರಂಭವಾಗಿದೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 19 ಇನಿಂಗ್ಸ್ ಆಡಿರುವ ಧ್ರುವ್ ಜುರೇಲ್, 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 790 ರನ್ ಕಲೆಹಾಕಿದ್ದಾರೆ. ಅದರಲ್ಲೂ ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಜುರೇಲ್ ಅವರನ್ನು ಬಾಜ್‌ಬಾಲ್‌ಗೆ ಪ್ರತಿತಂತ್ರವಾಗಿ ಬಳಸಿಕೊಳ್ಳಲು ಟೀಂ ಇಂಡಿಯಾಗೆ ಆಯ್ಕೆ ಮಾಡಲಾಗಿದೆ. ಅದರಂತೆ ಮೂರನೇ ಟೆಸ್ಟ್ ಪಂದ್ಯದ ಮೂಲಕ ಧ್ರುವ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್ ಅಟ್ಯಾಕಿಂಗ್ ಬ್ಯಾಟಿಂಗ್ಗೆ ಜುರೇಲ್ನಿಂದ ತಿರುಮಂತ್ರ ಹಾಕೋದು ತಂಡದ ಯೋಜನೆಯಾಗಿದೆ.
ರಾಜ್‌ಕೋಟ್ ಟೆಸ್ಟ್‌ನಲ್ಲಿ 500 ವಿಕೆಟ್ ಕ್ಲಬ್ ಸೇರಲು ರವಿಚಂದ್ರನ್ ಅಶ್ವಿನ್ ರೆಡಿ
ಭಾರತ ಅಂಡರ್-19, ರೆಸ್ಟ್ ಆಫ್ ಇಂಡಿಯಾ, ಯುಪಿ ಪರ ರಣಜಿ, ರಾಜಸ್ತಾನ ರಾಯಲ್ಸ್ ಪರ ಐಪಿಎಲ್ ಆಡಿದ ಅನುಭವಿದೆ. ಕೀಪಿಂಗ್‌ನಲ್ಲಿ ಹೇಗೆ ಪಂಟರೋ ಹಾಗೆ ಬ್ಯಾಟಿಂಗ್‌ನಲ್ಲೂ ಪಂಟರ್. 3ನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಉಳಿದ ಎರಡು ಟೆಸ್ಟ್‌ಗಳನ್ನಾಡಲಿದ್ದಾರೆ. ಮೂರು ಟೆಸ್ಟ್‌ನಲ್ಲೂ ವಿಕೆಟ್ ಹಿಂದೆ ಮುಂದೆ ಗಮನ ಸೆಳೆದ್ರೆ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಖಾಯಂ ಮಾಡಿಕೊಳ್ಳಲಿದ್ದಾರೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್