ಸೆಂಚುರಿ ಹೊಡೆದ್ರೂ ಔಟಾಗಿಲ್ಲ: ಯಾರ್ಯಾರು ಅತಿಹೆಚ್ಚು ಅಜೇಯ ಶತಕ ಬಾರಿಸಿದ್ದಾರೆ ಗೊತ್ತಾ..?

By Suvarna NewsFirst Published Feb 13, 2024, 1:26 PM IST
Highlights

ಕ್ರಿಕೆಟ್‌ನಲ್ಲಿ ಮಾಡಿದೆಲ್ಲಾ ದಾಖಲೆ ಕಂಡ್ರಿ. ಇಂದು ಒಬ್ಬ ರೆಕಾರ್ಡ್ ಮಾಡಿದ್ರೆ ನಾಳೆ ಮತ್ತೊಬ್ಬ ಆ ರೆಕಾರ್ಡ್ ಬ್ರೇಕ್ ಮಾಡ್ತಾನೆ. ಚಿತ್ರ ವಿಚಿತ್ರ ದಾಖಲೆಗಳೆಲ್ಲಾ ಇರೋದು ಈ ಕ್ರಿಕೆಟ್ನಲ್ಲೇ. ಸೆಂಚುರಿ ಹೊಡೆಯೋದೇ ಕಷ್ಟದ ಮಾತು. ಅಂತದ್ರಲ್ಲಿ ಅಜೇಯವಾಗಿ ಉಳಿಯೋದು ಇನ್ನೂ ಕಷ್ಟ.

ಬೆಂಗಳೂರು(ಫೆ.13): ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಸೆಂಚುರಿ ಕಿಂಗ್. ಒನ್ಡೇಯಲ್ಲಿ ವಿರಾಟ್ ಕೊಹ್ಲಿ ಸೆಂಚುರಿಗಳ ಹಾಫ್ ಸೆಂಚುರಿ.. ಟಿ20ಯಲ್ಲಿ ರೋಹಿತ್-ಮ್ಯಾಕ್ಸ್‌ವೆಲ್ ಗರಿಷ್ಠ ಶತಕ ವೀರರು.. ಆದ್ರೆ ಈ ಮೂರು ಮಾದರಿಯಲ್ಲಿ ಅತಿಹೆಚ್ಚು ಅಜೇಯ ಶತಕ ಹೊಡೆದಿರುವುದು ಯಾರು ಗೊತ್ತಾ..? ಅದನ್ನ ನಾವ್ ಹೇಳ್ತೀವಿ ನೋಡಿ. 

ಸೆಂಚುರಿ ಹೊಡೆದ್ರೂ ಔಟಾಗಿಲ್ಲ, ಹೀಗೊಂದು ಅಜೇಯ ಶತಕ..!

ಕ್ರಿಕೆಟ್‌ನಲ್ಲಿ ಮಾಡಿದೆಲ್ಲಾ ದಾಖಲೆ ಕಂಡ್ರಿ. ಇಂದು ಒಬ್ಬ ರೆಕಾರ್ಡ್ ಮಾಡಿದ್ರೆ ನಾಳೆ ಮತ್ತೊಬ್ಬ ಆ ರೆಕಾರ್ಡ್ ಬ್ರೇಕ್ ಮಾಡ್ತಾನೆ. ಚಿತ್ರ ವಿಚಿತ್ರ ದಾಖಲೆಗಳೆಲ್ಲಾ ಇರೋದು ಈ ಕ್ರಿಕೆಟ್ನಲ್ಲೇ. ಸೆಂಚುರಿ ಹೊಡೆಯೋದೇ ಕಷ್ಟದ ಮಾತು. ಅಂತದ್ರಲ್ಲಿ ಅಜೇಯವಾಗಿ ಉಳಿಯೋದು ಇನ್ನೂ ಕಷ್ಟ. ಆದ್ರೆ ವರ್ಲ್ಡ್ ಕ್ರಿಕೆಟ್ನಲ್ಲಿ ಸೆಂಚುರಿ ಹೊಡೆದು ಅಜೇಯರಾಗಿ ಉಳಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈಗ ಯಾಕೆ ಈ ಸ್ಟೋರಿ ಬಂತು ಅಂತಿರಾ. ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧ ಗ್ಲೆನ್ ಮ್ಯಾಕ್ಸ್‌ವೆಲ್ ಸೆಂಚುರಿ ಹೊಡೆದು ದಾಖಲೆ ನಿರ್ಮಿಸಿದ್ದಾರೆ.

ಮನೆಯೊಡೆದ ಸೊಸೆ; ಮಾವನ ಆರೋಪಕ್ಕೆ ಖಡಕ್ ತಿರುಗೇಟು ಕೊಟ್ಟ ಜಡೇಜಾ ಪತ್ನಿ ರಿವಾಬ

ಟಿ20 ಕ್ರಿಕೆಟ್ನಲ್ಲಿ ಮ್ಯಾಕ್ಸ್‌ವೆಲ್ 5 ಸೆಂಚುರಿ; ಐದರಲ್ಲೂ ಮ್ಯಾಕ್ಸಿ ಅಜೇಯ ಶತಕ..!

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಮ್ಯಾಚ್ನಲ್ಲಿ ಮ್ಯಾಕ್ಸ್‌ವೆಲ್, ಭರ್ಜರಿ ಶತಕ ಸಿಡಿಸಿದ್ರು. 55 ಬಾಲ್ನಲ್ಲಿ 12 ಬೌಂಡ್ರಿ, 8 ಸಿಕ್ಸರ್ ಸಹಿತ ಅಜೇಯ 120 ರನ್ ಬಾರಿಸಿದ್ರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವ ದಾಖಲೆಯನ್ನ ರೋಹಿತ್ ಶರ್ಮಾ ಜೊತೆ ಹಂಚಿಕೊಂಡಿದ್ದಾರೆ. ಅಂದ್ರೆ ಇಬ್ಬರು ತಲಾ ಐದು ಶತಕ ಬಾರಿಸಿದ್ದಾರೆ. ಆದ್ರೆ ಮ್ಯಾಕ್ಸಿ, ಟಿ20ಯಲ್ಲಿ ಹೊಡೆದಿರುವ ಐದಕ್ಕೆ ಐದು ಸೆಂಚುರಿಗಳನ್ನೂ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಟಿ20ಯಲ್ಲಿ ಅತಿಹೆಚ್ಚು ಅಜೇಯ ಶತಕ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದಾರೆ. ವಿಂಡೀಸ್ ಲಂಕಾ, ಇಂಗ್ಲೆಂಡ್ ವಿರುದ್ಧ ತಲಾ ಒಂದು,  ಭಾರತ ವಿರುದ್ಧ ಎರಡು ಟಿ20 ಶತಕ ಸಿಡಿಸಿದ್ದಾರೆ.

ಒನ್ಡೇ ಕ್ರಿಕೆಟ್ನಲ್ಲಿ ಕೊಹ್ಲಿ 50 ಶತಕ

ಏಕದಿನ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಗರಿಷ್ಠ ರನ್ ಸರದಾರನಾದ್ರೆ, ವಿರಾಟ್ ಕೊಹ್ಲಿ ಸೆಂಚುರಿ ಕಿಂಗ್. ಒನ್ಡೇಯಲ್ಲಿ ಕಿಂಗ್ ಕೊಹ್ಲಿ ಬರೋಬ್ಬರಿ 50 ಶತಕ ಬಾರಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ಸೆಂಚುರಿ ಹೊಡೆದಿರುವ ಏಕೈಕ ಆಟಗಾರ. ಏಕದಿನ ವಿಶ್ವಕಪ್ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಂಚುರಿ ಹೊಡೆದು, 50ರ ಸಂಭ್ರಮ ಆಚರಿಸಿದ್ರು.

ರಾಜ್‌ಕೋಟ್‌ ಟೆಸ್ಟ್‌ನಲ್ಲಿ 500 ವಿಕೆಟ್ ಕ್ಲಬ್ ಸೇರಲು ರವಿಚಂದ್ರನ್ ಅಶ್ವಿನ್ ರೆಡಿ

ಕಿಂಗ್ ಕೊಹ್ಲಿ, 280 ಒನ್ಡೇ ಇನ್ನಿಂಗ್ಸ್ನಲ್ಲಿ ಹೊಡೆದಿರುವ 50 ಸೆಂಚುರಿಗಳಲ್ಲಿ 19ರಲ್ಲಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಅತಿಹೆಚ್ಚು ಅಜೇಯ ಶತಕ ಬಾರಿಸಿರುವ ದಾಖಲೆ ನಿರ್ಮಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ನಲ್ಲಿ ಚಂದ್ರಪಾಲ್ 30 ಸೆಂಚುರಿ..!

90ರ ದಶಕದಲ್ಲಿ ವೆಸ್ಟ್ ಇಂಡೀಸ್ ತಂಡದ ಅಪದ್ಭಾಂದವ ಎನಿಸಿಕೊಂಡಿದ್ದ ಶಿವನಾರಾಯಣ್ ಚಂದ್ರಪಾಲ್, ಟೆಸ್ಟ್ ಕ್ರಿಕೆಟ್ನಲ್ಲಿ 30 ಶತಕ ಸಹಿತ 11 ಸಾವಿರ ರನ್ ಹೊಡೆದಿದ್ದಾರೆ. ಟೆಸ್ಟ್‌ನಲ್ಲಿ ಅವರ ಬೆಸ್ಟ್ ಸ್ಕೋರ್ ಅಜೇಯ 203. 30 ಸೆಂಚುರಿಗಳಲ್ಲಿ ಚಂದ್ರಪಾಲ್, 18ರಲ್ಲಿ ಅಜೇಯರಾಗಿ ಉಳಿದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಅಜೇಯ ಶತಕ ಬಾರಿಸಿದ ದಾಖಲೆಯನ್ನ ತಮ್ಮ ಹೆಸರಿನಲ್ಲಿ ಇಟ್ಟುಕೊಂಡಿದ್ದಾರೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!